CM ASKED QUESTIONS TO PM: ಗೋಲಿಬಾರ್ ಮಾಡಿಸಿ ರೈತರ ಸಾವಿಗೆ ಕಾರಣರಾದ ಯಡಿಯೂರಪ್ಪ ಪುತ್ರನ ಪರ ಮತ ಕೇಳಲು ಆತ್ಮಸಾಕ್ಷಿ ಒಪ್ಪುವುದೇ ಎಂದು ಸಿಎಂ ಪ್ರಶ್ನೆ

ಬೆಂಗಳೂರು : ಬರಗಾಲ ಸಂದರ್ಭದಲ್ಲಿ ಕೇವಲ ಚುನಾವಣಾ ಸಭೆಗಾಗಿ ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಎಂ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ರೈತರ ಪರವಾಗಿ ಧ್ವನಿ ಎತ್ತಿರುವ ಕಾಂಗ್ರೆಸ್ಸಿನ ಪ್ರಶ್ನೆಗಳಿಗೆ #ANSERMADI #NARENDRAMODI ಅವರೇ ಎಂಬ ಹ್ಯಾಷ್ ಟ್ಯಾಗ್ ಬಳಸಿ ಕಿಡಿಕಾರಿದ್ದಾರೆ. ಅವರ ಸಂಪೂರ್ಣ ವಿವರ ಇಲ್ಲಿದೆ.
ರೈತ ಚಳವಳಿಗಳ ತವರು ಶಿವಮೊಗ್ಗದಲ್ಲಿ ನಿಂತು ಗೋಲಿಬಾರ್ ಮಾಡಿಸಿ ರೈತರ ಸಾವಿಗೆ ಕಾರಣರಾದ ಬಿ.ಎಸ್ ಯಡಿಯೂರಪ್ಪ ಅವರ ಮಗನಿಗೆ ಮತ ನೀಡಿ ಎನ್ನಲು ನಿಮ್ಮ‌ಆತ್ಮಸಾಕ್ಷಿ ಒಪ್ಪುವುದೇ @narendramodi ಅವರೇ? ಎಂದು ಪ್ರಶ್ನಿಸಿದ್ದಾರೆ.

ಹಾಗೆಯೇ, ಕಳೆದ ಚುನಾವಣೆಯಲ್ಲಿ ಕೂಡ @BJP4Karnataka ತಾನು ಅಧಿಕಾರಕ್ಕೆ ಬಂದರೆ ಮೊದಲ‌ ಸಂಪುಟ ಸಭೆಯಲ್ಲೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೂ. 1 ಲಕ್ಷದ ವರೆಗಿನ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿ, ಅಧಿಕಾರ ಸಿಕ್ಕ ನಂತರ ಕೊಟ್ಟ ಮಾತಿನಂತೆ ನಡೆಯಲೇ ಇಲ್ಲ. ಇದು ರೈತರಿಗೆ ಮಾಡಿದ ದ್ರೋಹ ಅಲ್ಲವೇ @narendramodi ಅವರೇ? ಎಂದು ಕಿಡಿಕಾರಿದ್ದಾರೆ.

ರಾಜ್ಯಕ್ಕೆ ಬರಪರಿಹಾರ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ @BJP4India ಸರ್ಕಾರಕ್ಕೆ ಮೇಲಿಂದ ಮೇಲೆ ಪತ್ರ ಬರೆಯಲಾಗಿದೆ, ನಮ್ಮ ಸಚಿವರು ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ, ನಾನೇ ಖುದ್ದಾಗಿ ತಮ್ಮನ್ನು ಹಾಗೂ ಗೃಹ ಸಚಿವರಾದ @AmitShah ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದೇನೆ, ಆದರೂ ನಯಾಪೈಸೆ ರಾಜ್ಯಕ್ಕೆ ಬಂದಿಲ್ಲ. ಇದು ರಾಜ್ಯದ ರೈತರಿಗೆ ಮಾಡಿದ ಅನ್ಯಾಯವಲ್ಲವೇ @narendramodi ಅವರೇ? #AnswerMadiModi #ModiMosa ಎಂದು ಹ್ಯಾಷ್ ಟ್ಯಾಗ್ ಬಳಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

More News

You cannot copy content of this page