WHO IS THE KING.?: ಯಾರು ರಾಜ ಅದು ಎಂದು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಮೈಸೂರಿನಲ್ಲಿ ಅಭ್ಯರ್ಥಿ ಇಲ್ಲ ಅಂತಾನೇ ಬಿಜೆಪಿ ಯಧುವೀರ್ ನ ಕಣಕ್ಕಿಳಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಮೈಸೂರು ಅಭ್ಯರ್ಥಿ ಬಗ್ಗೆ ಪ್ರತಿಕ್ರಿಯಿಸುತ್ತಾ, ಕಾಂಗ್ರೆಸ್ ನಲ್ಲಿ ಹೆಚ್ಚು ಅಭ್ಯರ್ಥಿಗಳು ಇರೋದ್ರಿಂದಲೇ ಸಮಸ್ಯೆ ಆಗಿರೋದು.ಒಂದೊಂದು ಕಡೆ ಮೂರು ನಾಲ್ಕು ಜನ ಇರೋದೆ ಸಮಸ್ಯೆ ಆಗಿದೆ.ಬಿಜೆಪಿಯವರು ಮೈಸೂರಿನಲ್ಲಿ ಇರೋ ಅಭ್ಯರ್ಥಿ ಬದಲಾವಣೆ ಮಾಡಿದ್ದಾರೆ. ಆಗ ಇವರಿಗೆ ಕ್ಯಾಂಡಿಡೇಟ್ ಇದ್ರಾ?. ಯದುವೀರ್ ನ ಈಗ ಸ್ಪರ್ಧೆ ಮಾಡಿಸಿದ್ದಾರೆ ಎಂದರು.

ಮೈಸೂರಿನಲ್ಲಿ ಯಧುವೀರ್ ರಾಜ ಸ್ಪರ್ಧೆ ಎಂಬ ಪ್ರಶ್ನೆಗೆ ಯಾರೀ ರಾಜಾ ಎಂದು ಪ್ರಶ್ನಿಸಿದರು.ಬಿಜೆಪಿ ಅಭ್ಯರ್ಥಿ ಬಿಡಪ್ಪ. ನನಗೆ ಮೈಸೂರು ಮಾತ್ರ ಅಲ್ಲ.ಇಡೀ ರಾಜ್ಯವೇ ಸ್ವಕ್ಷೇತ್ರ.ನಾನು ಓದಿದ್ದು ಮೈಸೂರಿಲ್ಲಿ ಮಾತ್ರ.ಮೈಸೂರು ಹಳ್ಳಿಯಲ್ಲಿ ಓದಿದ್ದು ಅಷ್ಟೇ. 28 ಕ್ಷೇತ್ರವೂ ನಮ್ಮದೇ ಎಂದರು.

ಸದಾನಂದ ಗೌಡ ನನ್ನನ್ನು ಸಂಪರ್ಕಿಸಿಲ್ಲ:

ಸದಾನಂದಗೌಡರಿಗೆ ಕಾಂಗ್ರೆಸ್ ಸಂಪರ್ಕ ಮಾಡಿದೆ ಅನ್ನೋ ವಿಚಾರ ನನಗ ಗೊತ್ತಿಲ್ಲಮ ಯಾರನ್ನ ಸಂಪರ್ಕ ಮಾಡಿದ್ದಾರೋ ಅವರನ್ನೇ ಕೇಳಿ.ಸದಾನಂದ ಗೌಡ ನನ್ನ ಹೆಸರು ಹೇಳಿದ್ದರಾ?. ನನ್ನ ಸಂಪರ್ಕದಲ್ಲಿ ಅಂತೂ ಸದಾನಂದ ಗೌಡ ಇಲ್ಲ. ಕಾಂಗ್ರೆಸ್ ನಾಯಕರು ಯಾರನ್ನಾದ್ರೂ ಸಂಪರ್ಕ ಮಾಡಿರಬಹುದು ಆದರೆ ನನ್ನ ಮಾಡಿಲ್ಲ.ನಾನು ಊಹಾ ಪೋಹ ಪ್ರಶ್ನೆಗಳಿಗೆ ಉತ್ತರಿಸಲ್ಲ ಎಂದರು.

20 ಸ್ಥಾನ ಗೆಲ್ಲುತ್ತೇವೆ -ಸಿದ್ದು ವಿಶ್ವಾಸ

ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ. ನುಡಿದಂತೆ ನಡೆದ ಕಾರಣ ನಮಗೆ ಗೆಲ್ಲುವ ವಿಶ್ವಾಸ ಇದೆ.‌ ಮೋದಿ ಕಳೆದ ವಿಧಾನಸಭೆ ಚುನಾವಣೆಯಲ್ಲೂ ರಾಜ್ಯಾದ್ಯಂತ ಓಡಾಡಿದ್ದರು. ಆದರೆ ನಾವು 135 ಸ್ಥಾನ ಗೆದ್ದಿದ್ದೇವೆ. ಅವರು ಕರ್ನಾಟಕ ರಾಜ್ಯವನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.

ರಾಮನ ಹೆಸರಲ್ಲಿ ಬಿಜೆಪಿ ಚುನಾವಣೆ ಹೋಗಲಿದೆ ಎಂಬ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ರಾಮ ಅವರ ಒಬ್ಬನ ಆಸ್ತಿನಾ?. ಸೀತಾ ರಾಮ ನಮಗೂ ಆಸ್ತಿನೇ.ಅವರು ನಮಗೂ ದೇವರೇ ಎಂದು ಟಾಂಗ್ ನೀಡಿದರು.

40% ಯಾರ ಮೇಲೆ ಆರೋಪ ಇತ್ತು?

ಬರಗಾಲ ಬಂದು ಐದು ತಿಂಗಳಾಯ್ತು.ಮೋದಿಯವರು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಒಂದೇ ಒಂದು ಪೈಸೆ ಹಣ ಕೊಟ್ಟಿಲ್ಲ.ಏಕೆ?.18171 ಕೋಟಿ ಬರ ಪರಿಹಾರ ಹಣ ಕೇಳಿದ್ವಿ . ಒಂದು ರೂಪಾಯಿಯನ್ನೂ ಕೊಡಲಿಲ್ಲ,48 ಸಾವಿರ ಹೆಕ್ಟೇರ್ ನಲ್ಲಿ ಬೆಳೆ ಹಾನಿ ಆಗಿದೆ. ಬರ ಪರಿಹಾರ ಕೊಡಿ ಅಂದ್ವಿ ಕೊಡಲಿಲ್ಲ.ಮತ್ತೆ ಮೋದಿಯವರಿಗೆ “ನಮ್ಮಲ್ಲಿ ಹಣ ಇಲ್ಲ” ಎಂದು ಆರೋಪಿಸುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಕೇಂದ್ರದಿಂದ ನಯಾಪೈಸೆ ಬರದಿದ್ದರೂ ನಾವು ರಾಜ್ಯ ಬೊಕ್ಕಸದಿಂದಲೇ ರೈತರ ಖಾತೆಗೆ ಬರ ಪರಿಹಾರ ಹಾಕಿದ್ದೇವೆ. ಬರಗಾಲದಲ್ಲಿ ನರೇಗಾ ದಿನಗಳನ್ನು ಹೆಚ್ಚಿಸಿ ಎಂದು ಕೇಳಿದ್ವಿ. ಇವತ್ತಿನವರೆಗೂ ಮಾಡಿಲ್ಲ. ಕೇಂದ್ರ ಸರ್ಕಾರ ಅಂದರೆ ಕೇವಲ GST ತಗೊಳೋಕೆ, ತೆರಿಗೆ ಸಂಗ್ರಹಿಸಿ ತಮ್ಮಲ್ಲಿ ಇಟ್ಟುಕೊಂಡು ರಾಜ್ಯಗಳಿಗೆ ಅನ್ಯಾಯ ಮಾಡೋಕೆ ಮಾತ್ರ ಇರೋದಾ? ಎಂದು ಟೀಕಿಸಿದರು.

40% ಕಮಿಷನ್ ಆರೋಪ ಯಾವ ಸರ್ಕಾರದ ಮೇಲಿತ್ತು?. ಯಾವ ಸರ್ಕಾರದ ಮೇಲೆ, ಯಾರ ಸರ್ಕಾರ ಮೇಲೆ ಆರೋಪ ಬಂದಿತ್ತು.ಮೋದಿಗೆ ಅದು ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.

ನನ್ನ ಮೇಲೆ ಆರೋಪ ಇದ್ದರೆ ಆಯೋಗಕ್ಕೆ ದೂರು ಕೊಡಲಿ

ನಿಮ್ಮ ವಿರುದ್ಧವೂ ಕಮಿಷನ್ ಆರೋಪ ಇದೆಯಲ್ಲಾ ಎಂಬ ಪ್ರಶ್ನೆಗೆ,ನನ್ನ ಮೇಲೆ ಆರೋಪ ಮಾಡುವುದಾದರೆ,ನಾಗ ಮೋಹನ್ ದಾಸ್ ತನಿಖಾ ಆಯೋಗದ ಮುಂದೆ ಹೋಗಿ ದೂರು ಕೊಡಲಿ.ನನ್ನ ವಿರುದ್ಧವಾಗಲಿ, ಸರ್ಕಾರದ ವಿರುದ್ಧವಾಗಲಿ, ಯಾವುದೇ ಮಂತ್ರಿಗಳ ಮೇಲಾಗಲಿ ಕಮಿಷನ್ ದೂರು ಇದ್ದರೆ ಆಯೋಗದ ಮುಂದೆ ಕೊಡಲಿ. ಬಿಜೆಪಿಯವರು ಕಮಿಷನ್ ಆರೋಪ ಬಂದಾಗ ತನಿಖಾ ಆಯೋಗ ಮಾಡಿದ್ರಾ?. ಮೋದಿ ಸುಳ್ಳುಗಳನ್ನು ಬಹಳ ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಮೋದಿಯವರು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಜನರಲ್ ಆಗಿ ಆರೋಪ ಮಾಡುವುದು ಬೇರೆ. ಕಾನೂನು ಸುವ್ಯವಸ್ಥೆ ಚೆನ್ನಾಗಿರುವುದ ರಿಂದಲೇ ಜನ‌ ನೆಮ್ಮದಿಯಿಂದ ಇದ್ದಾರೆ. ಮೋದಿ ಹಣ ಖಾಲಿಯಾಗಿದೆ ಅಂತಾರೆ.ಹಣ ಇಲ್ಲದೇ 3.20 ಲಕ್ಷ ಕೋಟಿ ರೂ.ಬಜೆಟ್ ಮಂಡನೆ ಮಾಡಿದ್ದೇವಾ?. ಮೋದಿ ಈಗ ಬರುತ್ತಿದ್ದಾರೆ.ಬರ ಗಾಲದ ವೇಳೆ ಬಂದ್ರಾ?.ಐದು ತಿಂಗಳಾಯ್ತು ಒಂದು ರೂಪಾಯಿ ಕೊಟ್ರಾ?.ರಾಜ್ಯಕ್ಕೆ ಮಲತಾಯಿ ದೊರಣೆ ಮಾಡಿದ್ದಾರೆ. ಅವರಿಗೆ ಹೇಳಲು ಯಾವ ನೈತಿಕತೆ ಇದೆ?.ನಾವು ಬಜೆಟ್ ನಲ್ಲಿ ಘೋಷಣೆ ಮಾಡಿದ ಎಲ್ಲಾ ಕಾರ್ಯಕ್ರಮಗಳಿಗೆ ದುಡ್ಡಿದೆ ಎಂದರು.

More News