ಬೆಂಗಳೂರು : ಬೆಂಗಳೂರು ನಗರದಲ್ಲಿ ಇಂದು ಮುಂಜಾನೆ ಹೈದರಾಬಾದ್ ಮೂಲದ ಮೇಘನಾ ಫುಡ್ಸ್ ಸಂಸ್ಥೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಿದ್ದಾರೆ.
ಹೈದರಾಬಾದ್ ಹಾಗೂ ಬೆಂಗಳೂರಲ್ಲಿ ವ್ಯವಹಾರ ಹೊಂದಿರುವ ಮೇಘನಾ ಫುಡ್ಸ್, ಬೆಂಗಳೂರಿನ ಕೋರಮಂಗಲ ಹಾಗೂ ಇಂದಿರಾನಗರದಲ್ಲಿರುವ ಕಚೇರಿಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಪದ್ಮ ಅಟ್ಲೂರಿ, ಹಾಗೂ ರಾಮಬಾಬು ಮಾಂಡವ ಅವರ ಒಡೆತನದ ಮೇಘನಾ ಫುಡ್ಸ್ ಅವರ ಕಚೇರಿ ಮತ್ತು ಮನೆ ಮೇಲೆ ಏಕಕಾಲಕ್ಕೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.




