CRACK IN BJP- JDS ALLIANCE: ದೇವೇಗೌಡರು ಅಳಿಯನನ್ನು ಬಿಜೆಪಿ ಸಿಂಬಲ್ ನಲ್ಲಿ ನಿಲ್ಲಿಸಿರುವುದು ಜೆಡಿಎಸ್ ನ ಮೊದಲ ಸೂಸೈಡ್: ಡಿಸಿಎಂ

ಬೆಂಗಳೂರು : ಜೆಡಿಎಸ್ ಬಿಜೆಪಿ ಮೈತ್ರಿ ಬಿರುಕು ಬಿಟ್ಟಿದೆ. ಈ ವಿಚಾರ ನನಗೆ ಮೊದಲೇ ಗೊತ್ತಿತ್ತು. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ರು ಅಳಿಯನನ್ನ ಬಿಜೆಪಿ ಸಿಂಬಲ್ ನಲ್ಲಿ ನಿಲ್ಲಿಸಿರುವುದು ದು ಜೆಡಿಎಸ್ ನ ಮೊದಲ ಸೂಸೈಡ್ ಅಟೆಂಪ್ಟ್ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿಗೆ ತೆರಳುವ ಮುನ್ನಾ ಇಂದು ಸದಾಶಿವನಗರದ ಅವರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ – ಜೆಡಿಎಸ್ ಮೈತ್ರಿ ಬಿರುಕು ಬರುವುದನ್ನು ನಾನು ನಿರೀಕ್ಷೆ ಕೂಡ ಮಾಡಿರಲಿಲ್ಲ, ಅವರ ಪಕ್ಷಕ್ಕೆ ಒಂದು ದೊಡ್ಡ ಮುಜುಗರ ಉಂಟಾಗಿದೆ ಎಂದರು.
ಅದು ಅವರ ಪಾರ್ಟಿ ತೀರ್ಮಾನ, .ನಾನು ಅದರಲ್ಲಿ ಮಧ್ಯಪ್ರವೇಶ ಮಾಡಲ್ಲ, ಸಿಟ್ಟಿಂಗ್ ಎಂಎಲ್ಎಗಳಿದ್ದಾರೆ, ಸಂಸದರಿದ್ದಾರೆ. ಅವರ ಪಾರ್ಟಿಗೆ ಅವರದ್ದೆ ಶಕ್ತಿ ಇದೆ, ಆ ಶಕ್ತಿ ಅವರಿಗೆ ಬೇಕಾಗಿತ್ತು, ಆದರೆ ಬಿಜೆಪಿಯವರ ಸ್ಟೈಲ್ ಇರೋದೇ ಹೀಗೆ, ಇದೊಂದೇ ರಾಜ್ಯ ಅಲ್ಲ, ಬೇರೆ ರಾಜ್ಯಗಳಲ್ಲೂ ಹೀಗೆ ನಡೆಸಿಕೊಳ್ತಿದ್ದಾರೆ, ಅದರ ಬಗ್ಗೆ ನಾನು ಹೆಚ್ಚು ಕಮೆಂಟ್ ಮಾಡಲ್ಲ, ಅದು ಅವರ ಪಕ್ಷದ ಅಂತರಿಕ ವಿಚಾರ ಅವರ ಪಾರ್ಟಿಯಲ್ಲಿ ತೀರ್ಮಾನ ಮಾಡಿಕೊಳ್ಳಲಿ ಎಂದರು.

ಮಾಜಿ ಸಿಎಂ ಸದಾನಂದಗೌಡ ಅವರು ಕಾಂಗ್ರೆಸ್ ಸೇರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅದು ಅವರ ರಾಜಕೀಯ ತೀರ್ಮಾನ, ಯಾರಿಗೆ ಟಿಕೆಟ್ ಸಿಗಲ್ಲ ಆಗ ಇವೆಲ್ಲಾ ಸಾಮಾನ್ಯ, ಆಯನೂರು ಮಂಜುನಾಥ್ ಟಿಕೆಟ್ ಸಿಗಲಿಲ್ಲ, ಅವರು ನಮ್ಮ ಪಾರ್ಟಿಗೆ ಬಂದ್ರು, ಮೂಡಿಗೆರೆಯಲ್ಲಿ ಕುಮಾರ ಸ್ವಾಮಿಗೆ ಟಿಕೆಟ್ ಕೊಡಲಿಲ್ಲ, ನಾವು ಅಖಂಡ ಶ್ರೀನಿವಾಸ್ ಮೂರ್ತಿಗೆ ಕೊಡಲಿಲ್ಲ, ಅವರು ಶೆಟ್ಟರ್ ಗೆ ಕೊಡ್ಲಿಲ್ಲ, ನಾವು ಕರ್ಕೊಂಡು ಬಂದು ನಿಲ್ಲಿಸಿದ್ವಿ, ಬಿಜೆಪಿಯವರು ಸವದಿಗೆ ಕೊಡಲಿಲ್ಲ…ಅವರನ್ನೂ ಕರ್ಕೊಂಡು ಬಂದು ನಿಲ್ಲಿಸಿದ್ವಿ..ಇದೆಲ್ಲವೂ ರಾಜಕೀಯದಲ್ಲಿ ನಡೆಯುತ್ತೆ, ಯಾರ್ಯಾರು ಬರುತ್ತೇವೆ ಅಂತ ಹೇಳ್ತಾರೆ ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬರೋರು ಬರಲಿ, ನಮ್ಮ ತಂತ್ರಗಾರಿಕೆಯನ್ನು ನಾವು ಬಹಿರಂಗಗೊಳಿಸಲ್ಲ ಎಂದರು.
ಇಂದು ಸಿಇಸಿ ಸಭೆ
ಇಂದು ಸಿಇಸಿ ಸಭೆ ಇದೆ, ನಾವು ದೆಹಲಿಗೆ ಹೋಗ್ತಿದ್ದೇವೆ, ಬಹುತೇಕ ರಾಜ್ಯದ ಎಲ್ಲಾ ಹೆಸರು ಇಂದೇ ಕ್ಲಿಯರ್ ಆಗಬಹುದು, ಒಂದೊ ಎರಡು ಹೆಸರು ಉಳಿದರು ಉಳಿದುಕೊಳ್ಳಬಹುದು ಅದನ್ನ ಹೇಳೋಕೆ ಆಗಲ್ಲ ಎಂದು ಹೇಳಿದರು.

More News

You cannot copy content of this page