ಬ್ರಿಟಿಷರ ವಿರುದ್ಧ ಹೋರಾಟದ ಮೋಹನ್ ಲಾಲ್ ಅವರ ಅದ್ದೂರಿ ಮರಕ್ಕನ್ ಚಿತ್ರದ ಟೀಸರ್ ಬಿಡುಗಡೆ

ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ಮರಕ್ಕನ್ ಲಯನ್ ಆಫ್ ದಿ ಅರೇಬಿಯನ್ ಸೀ ಚಿತ್ರದ ನೂತನ ಟೀಸರ್ ಬಿಡುಗಡೆಯಾಗಿದ್ದು, ಈ ಚಿತ್ರದಲ್ಲಿ ಮೋಹನ್ ಲಾಲ್ ಸೇರಿದಂತೆ ಅನೇಕ ಖ್ಯಾತ ನಾಮರು ಅಭಿನಯಿಸಿದ್ದಾರೆ.
ಮೋಹನ್ ಲಾಲ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹೊಸ ಟೀಸರ್ ಅನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಚಿತ್ರದಲ್ಲಿನ ಅದ್ದೂರಿತನ ಅಭಿಮಾನಿಗಳು ಫುಲ್ ಫಿದಾ ಆಗಿದ್ದು, ಈ ಚಿತ್ರವನ್ನು ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಅವರು ನಿರ್ದೇಶಿಸಿದ್ದಾರೆ.


ಮುಂಬರುವ ಡಿಸೆಂಬರ್ 2 ರಂದು ತೆರೆಗೆ ಬರಲಿರುವ ಈ ಚಿತ್ರ ದೇಶದೆಲ್ಲೆಡೆ ಬಿಡಗಡೆ ಕಾಣಲಿದೆ. ಕಳೆದ ಮಾರ್ಚ್ ನಲ್ಲಿಯೇ ಈ ಚಿತ್ರ ತೆರೆ ಕಾಣಬೇಕಿತ್ತು. ಆದರೆ, ಕೊರೊನಾ ಮಹಾಮಾರಿಯ ಕಾರಣದಿಂದ ರಿಲೀಸ್ ಮುಂದೂಡಲಾಗಿತ್ತು. ಬ್ರಿಟೀಷರ ವಿರುದ್ಧ ಹೋರಾಟದ ದೃಷ್ಯಗಳನ್ನು ಅದ್ದೂರಿಯಾಗಿ ಚಿತ್ರಿಸಲಾಗಿದೆ.

ನೀವೆಲ್ಲರೂ ಯಾವುದಕ್ಕೆ ಕಾಯುತ್ತಿದ್ದಿರೋ ಅದು ಇಲ್ಲಿದೆ ಎಂದು ತಮ್ಮ ಟ್ವೀಟರ್ ಖಾತೆಯಲ್ಲಿ ಮೋಹನ್ ಲಾಲ್ ಬರೆದುಕೊಂಡಿದ್ದಾರೆ. ಮೋಹನ್ ಲಾಲ್ ಅವರ ಡಿಫರೆಂಟ್ ಕಾಸ್ಟೂಮ್ಸ್ ಅಭಿಮಾನಿಗಳಲ್ಲಿ ಚಿತ್ರ ನೋಡುವ ತವಕ ಇನ್ನಷ್ಟು ಹೆಚ್ಚಿಸಿದೆ. ಮೋಹನ್ ಲಾಲ್ ಅವರೊಂದಿಗೆ ಅರ್ಜುನ್ ಸರ್ಜಾ, ಸುನೀಲ್ ಶೆಟ್ಟಿ, ಕೀರ್ತಿ ಸುರೇಶ್ ಸೇರಿದಂತೆ ಇನ್ನಿತರ ಅನೇಕರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

More News