ಬೆಂಗಳೂರು : ನಾನು ಚಿಕ್ಕಬಳ್ಳಾಪುರಕ್ಕೆ ಹೋಗೋದು ಅವೆಲ್ಲ ಊಹಾ ಪೋಹ, ಬೆಂಗಳೂರು ಉತ್ತರಕ್ಕೆ ನಾನು ಹೋಗಿಲ್ಲ ಇನ್ನು ಚಿಕ್ಕಬಳ್ಳಾಪುರಕ್ಕೆ ಏಕೆ ಹೋಗಲಿ, ನನ್ನ ರಾಜಕೀಯ ಏನೇ ಇದ್ದರೂ ಮಂಡ್ಯದಲ್ಲಿ ಮಾತ್ರ ಇದನ್ನ ಹೈಕಮಾಂಡ್ ಗೆ ಸ್ಪಷ್ಟವಾಗಿ ಹೇಳಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ.
ನವದೆಹಲಿ ಭೇಟಿಯ ಬಳಿಕ ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಮಂಡ್ಯ ವಿಚಾರ ಬಿಜೆಪಿ ವರಿಷ್ಠರ ಜೊತೆ ಮಾತನಾಡಿದ್ದೇನೆ, ಇನ್ನೂ ಯಾವುದು ಅಧಿಕೃತವಾಗಿ ತೀರ್ಮಾನವಾಗಿಲ್ಲ ಎಂದು ತಿಳಿಸಿದರು.
ಬಿಜೆಪಿ ವರಿಷ್ಠರು ಕೂಡ ಇದನ್ನೇ ಹೇಳಿದ್ದಾರೆ, 22ರ ವರೆಗೂ ಯಾವುದೇ ಫೈನಲ್ ಆಗುವುದಿಲ್ಲ, ಈ ಬಗ್ಗೆ ವಿಜಯೇಂದ್ರ ಕೂಡ ಸ್ಪಷ್ಟನೆ ಕೊಟ್ಟಿದ್ದಾರೆ, ಪ್ರಧಾನಿ ಮೋದಿ ಅಮಿತ್ ಶಾ ಇಬ್ಬರೂ ಕೂತು ಈ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.