ಕಾಸರಗೊಡು: ಕೇರಳ ರಾಜ್ಯದ ಕಾಸರಗೋಡು ಸಮೀಪದ ಗುರಪುರದ ಅಂಬತ್ತರ ಎಂಬಲ್ಲಿನ ಮನೆಯೊಂದರಲ್ಲಿ ನಿಷೇಧಿತ ಎರಡು ಸಾವಿರ ರೂಪಾಯಿ ಮುಖಬೆಲೆಯ ಸುಮಾರು 7 ಕೋಟಿ ರೂಪಾಯಿ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಮ ಸಂಬಂಧ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ವರ್ಷ ಆರಂಭದಲ್ಲಿ ಕೇಂದ್ರ ಸರ್ಕಾರ 2000 ಮುಖಬೆಲೆಯ ನೋಟುಗಳ್ನು ಚಲಾವಣೆಯಿಂದ ಹಿಂದಕ್ಕೆ ಪಡೆದಿತ್ತು. ವಿದೇಶದಲ್ಲಿ ಉದ್ಯೋಗಿಯಾಗಿರುವ ಕೆಪಿ ಬಾಬು ರಾಜ್ ಎಂಬುವವರ ಮನೆಯಲ್ಲಿ ಈ ಹಣ ದೊರಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ, ಬಾಬು ರಾಜ್ ಅವರು ಮನೆಯನ್ನು ಪಾಣತ್ತೂರು ನಿವಾಸಿ ಅಬ್ದುಲ್ ರಜಾಕ್ ಎಂಬುವವರಿಗೆ ಬಾಡಿಗೆಗೆ ನೀಡಿದ್ದರು. ಕಳೆದ ಮೂರು ದಿನಗಳಿಂದ ಮನೆ ಮೇಲೆ ನಿಗಾ ವಹಿಸಿ ಈ ದಾಳಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ 1.1 ಕೋಟಿ ಬೆಲೆಯ ಬಟ್ಟೆ ವಶ
ಶಿವಮೊಗ್ಗದಲ್ಲಿ ಚುನಾವಣಾಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕೆಆರ್ ಪುರಂನಲ್ಲಿರೋ ಡಿಲಕ್ಸ್ ಲಾಜಿಸ್ಟಿಕ್ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 1.1 ಕೋಟಿ ರೂಪಾಯಿ ಮೌಲ್ಯದ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ.
ಅದೇ ರೀತಿಯಲ್ಲಿ ಭದ್ರಾವತಿ ತಾಲೂಕಿನ ಬಿಆರ್ ಪಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ ಕಾರಿನಲ್ಲಿ ಸಾಗಿಸುತ್ತಿದ್ದ 700 ಕ್ಕೂ ಹೆಚ್ಚು ಸೀರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.




