DCM DK SHIVAKUMAR: ನಮ್ಮ ಕಚೇರಿ ಸಿಬ್ಬಂದಿಗೆ ಸಂಬಳ ಕೊಡಲು ಹಣ ಇಲ್ಲ : ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು : ನಮಗೆ ಕೆಪಿಸಿಸಿ ಸಿಬ್ಬಂದಿಗಳಿಗೆ ಸಂಬಳ ಕೊಡಲು ಹಣ ಇಲ್ಲದಂತಾಗಿದೆ.ಮಾಧ್ಯಮಗಳಲ್ಲಿ ಚುನಾವಣಾ ಜಾಹೀರಾತು ನೀಡಲು ಹಣ ಇಲ್ಲದಂತಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಖಾತೆ ಜಪ್ತಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಯೂತ್ ಕಾಂಗ್ರೆಸ್ ಚುನಾವಣಾ ಸಂದರ್ಭದ ಸದಸ್ಯತ್ವಕ್ಕಾಗಿ 90 ಕೋಟಿ ಸಂಗ್ರಹಿಸಿದೆ. ಈ ಹಣವನ್ನು ಎಐಸಿಸಿ ಖಾತೆಗೆ ಜಮೆ ಮಾಡಿದ್ದೇವೆ. ಇನ್ನು ನಾವು ವಿಧಾನಸಭೆ ಚುನಾವಣೆ ವೇಳೆ ಅಭ್ಯರ್ಥಿಗಳಿಂದ 2 ಲಕ್ಷ ರೂ. ಕಲೆಕ್ಟ್ ಮಾಡಿದ್ದೇವೆ.‌ ಇದರಿಂದ 21-22 ಕೋಟಿ ರೂ. ಸಂಗ್ರಹವಾಗಿದೆ.ಈಗ ಲೋಕಸಭೆ ಚುನಾವಣೆಗೆ ಸಂಗ್ರಹ ಮಾಡಬೇಕು ಅಂದುಕೊಂಡಿದ್ದೆ. ಆದರೆ ಎಐಸಿಸಿ ಬೇಡ ಅಂದರು. ಈಗ ಕೆಪಿಸಿಸಿ ಸಿಬ್ಬಂದಿಗೆ ಸಂಬಳ ಕೊಡಲು ಹಣ ಇಲ್ಲ. ತಲಾ 25 ಸಾವಿರ ರೂ.ನಂತೆ ಎಲ್ಲಾ ಕಾಂಗ್ರೆಸ್ ಶಾಸಕರುಗಳು ಹಣ ಕೊಡುವಂತೆ ಹೇಳಿದ್ದೇನೆ. ಈ ಪರಿಸ್ಥಿತಿಯಲ್ಲಿ ಬಿಜೆಪಿ ಸರ್ಕಾರ ಎಐಸಿಸಿ ಖಾತೆ ಜಪ್ತಿ ಮಾಡಿದ್ದಾರೆ ಎಂದರು.‌

ಎಐಸಿಸಿ ಹಣ ಸೀಜ್ ಮಾಡಿಸಿದ್ದಾರೆ.ಕೋರ್ಟ್ ಗೆ ಹೋದ್ರೆ ಅಲ್ಲೂ ನ್ಯಾಯ ಸಿಕ್ಕಿಲ್ಲ. ನಾವೇನು ಬ್ಯುಸಿನೆಸ್ ಮಾಡುತ್ತಿದ್ದೇವಾ?.ನಮಗೆ ಯಾವುದೇ ಹೆಚ್ಚು ಬಾಂಡ್ ಕೊಟ್ಟಿಲ್ಲ.ಕಾಂಗ್ರೆಸ್ ನಿಂದ 11% ಮಾತ್ರ ಬಾಂಡ್ ನಿಂದ ಹಣ ಬಂದಿದೆ. ಬಿಜೆಪಿಗೆ 52% ಹಣ ಸಂಗ್ರಹವಾಗಿದೆ. ನಮ್ಮ ಹಣ ಸೀಜ್ ಮಾಡಿದ್ರೆ ಹೇಗೆ?. ನಾವು ಪ್ರಚಾರಕ್ಕೆ ಹಣ ಕೊಡೋದು ಎಲ್ಲಿಂದ?.ನಾವು ಎಲೆಕ್ಷನ್ ಮಾಡೋದು ಎಲ್ಲಿಂದ?. ಖರ್ಚು ವೆಚ್ಚವನ್ನ ನಾವು ಎಲ್ಲಿಂದ ಭರಿಸೋದು.ಇದು ಪ್ರಜಾಪ್ರಭುತ್ವದ ಕಗ್ಗೊಲೆ. ವಾಜಪೇಯಿ ಸಂದರ್ಭದಲ್ಲಿ ಇಂಡಿಯಾ ಶೈನಿಂಗ್ ಅಂತ ಪ್ರಚಾರ ಮಾಡಿದ್ರು.ಈಗ ಸೋಲಿನ ಭಯದಿಂದ ಈ ರೀತಿ ಮಾಡ್ತಿದ್ದಾರೆ.ರಾಜ್ಯಪಾಲರು ರಾಜೀನಾಮೆ ಕೊಡಿಸೋದು. ಅವರನ್ನ ಎಲೆಕ್ಷನ್‌ಗೆ ನಿಲ್ಲಿಸೋದು ಮಾಡ್ತಿದ್ದಾರೆ. ಇದನ್ನು ನಾವೆಲ್ಲರೂ ಖಂಡಿಸುತ್ತೇವೆ ಎಂದು ವಾಗ್ದಾಳಿ ನಡೆಸಿದರು.

ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿದೆ

ಇದೇ ವೇಳೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ,ಸಂವಿಧಾನವನ್ನು ಈಗ ಬಿಜೆಪಿ ಸರ್ಕಾರ ಹತ್ತಿಕ್ಕುತ್ತಿದೆ. ಪ್ರಜಾಪ್ರಭುತ್ವವನ್ನು ಕೊಲೆ‌ ಮಾಡುತ್ತಿದೆ.ಮೋದಿ ಸರ್ವಾಧಿಕಾರ ಹಿಟ್ಲರ್ ನ್ನು ನೆನಪಿಸುತ್ತಿದೆ. ದೇಶದ ಪ್ರಜಾಪ್ರಭುತ್ವ ಈಗ ದಾಳಿಗೊಳಗಾಗಿದೆ.ಸಾಮಾನ್ಯ ನಾಗರಿಕರ ಹಕ್ಕು ಅಪಾಯದಲ್ಲಿದೆ. ಸರಕಾರ ನಿಮ್ಮ ವೇತನ ಪಡೆದರೆ, ಖಾತೆ ಜಪ್ತಿ ಮಾಡಿದರೆ ಹೇಗೆ ಯಾರಾದರು ಬದುಕಲು ಸಾಧ್ಯ?. ಈ ರೀತಿ ಪ್ರಧಾನಿ ಮೋದಿ ಕಾಂಗ್ರೆಸ್ ಗೆ ಮಾಡುತ್ತಿದ್ದಾರೆ. ಮೋದಿ ಸರ್ಕಾರ ಪಿತೂರಿ ಮಾಡಿ 11 ಕಾಂಗ್ರೆಸ್ ಖಾತೆಯನ್ನು ಜಪ್ತಿ ಮಾಡಿದೆ ಎಂದು ಕಿಡಿ ಕಾರಿದರು.

ಕಾಂಗ್ರೆಸ್ ಗೆ 2018ರಲ್ಲಿ ಐಟಿ ನೋಟೀಸ್ ನೀಡುತ್ತೆ. ಕಾಂಗ್ರೆಸ್ ಗೆ ನೀಡಿದ ಡೊನೇಷನ್ ನಲ್ಲಿ ಸಂಸದರು ಹಾಗೂ ಚುನಾಯಿತ ಶಾಸಕರು 14 ಲಕ್ಷ ರೂ.‌ ನಗದು ರೂಪದಲ್ಲಿ ಬಂದಿದೆ ಎಂದು ಆರೋಪಿಸಿ ನೋಟೀಸ್ ನೀಡಿದೆ.‌ ಐಟಿ ಇಲಾಖೆ ಈಗ 115 ಕೋಟಿ ರೂ. ವನ್ನು ಬಲವಂತವಾಗಿ ನಮ್ಮ ಖಾತೆಯಿಂದ ವಿತ್ ಡ್ರಾ ಮಾಡಿದೆ. ಚುನಾವಣೆಯ ಮುನ್ನ ನಮಗೆ ಯಾವುದೇ ಜಾಹಿರಾತು ನೀಡಲು ಸಾಧ್ಯವಾಗುತ್ತಿಲ್ಲ. ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚವಾಗಿ ಒಂದು ರೂ. ಕೊಡಲು ಕಾಂಗ್ರೆಸ್ ಪಕ್ಷಕ್ಕೆ ಆಗುತ್ತಿಲ್ಲ. ಹೀಗಾದರೆ ಪ್ರತಿಪಕ್ಷ ಚುನಾವಣೆ ಎದುರಿಸುವುದು ಹೇಗೆ? ಎಂದು ಪ್ರಶ್ನಿಸಿದರು.

ನಿರಂಕುಶ ಪ್ರಭುತ್ವದ ಇನ್ನೊಂದು ಹೆಸರು ಅಂದರೆ ಅದು ನರೇಂದ್ರ ಮೋದಿ. ಬಿಜೆಪಿ ವಿರೋಧಿಗಳ ವಿರುದ್ಧ ಮೋದಿ ಸರ್ಕಾರ ಟಾರ್ಗೆಟ್ ಮಾಡುತ್ತಿದೆ. ಬಿಜೆಪಿ ವಿರೋಧಿಗಳನ್ನು ಜೈಲಿಗೆ ಹಾಕುತ್ತಿದೆ. ರಾಜ್ಯಪಾಲರನ್ನು ಬಿಜೆಪಿಯ ಸಕ್ರಿಯ ಟೂಲ್ ಆಗಿ ಬಳಸುತ್ತಿದೆ. ಇಡಿ ಪ್ರತಿಪಕ್ಷಗಳಿಗೆ ಬಿಜೆಪಿ ಸೇರಿ, ಇಲ್ಲವಾದರೆ ಜೈಲಿಗೆ ಕಳಹಿಸಲಾಗುತ್ತದೆ ಎಂದು ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಿದರು.

More News