NO BJP TICKET FOR SUMALATHA: ಜೆಡಿಎಸ್ ಗೆ ಮೂರು ಉಳಿದವು ಬಿಜೆಪಿಗೆ: ಸುಮಲತಾಗೆ ಟಿಕೆಟ್ ಇಲ್ಲ: ಬಿಜೆಪಿ ಮುಖಂಡ ರಾಧಾಮೋಹನ್ ದಾನ್

ಬೆಂಗಳೂರು : ರಾಜ್ಯದಲ್ಲಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅವರಿಗೆ ಮೂರು ಕ್ಷೇತ್ರಗಳನ್ನು ಬಿಟ್ಟು ಕೊಡುವ ಬಗ್ಗೆ ತೀರ್ಮಾನ ಆಗಿದೆ ಎಂದು ಬಿಜೆಪಿ ಮುಖಂಡ ರಾಧಾಮೊಹನ್ ದಾಸ್ ಅಗರವಾಲ್ ಸ್ಪಷ್ಟಪಡಿಸಿದ್ದಾರೆ.


ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ, ಹಾಸನ ಮತ್ತು ಕೋಲಾರದ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ, ಉಳಿದಂತೆ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಹಾಲಿ ಸಂಸದೆ ಸುಮಲತಾ ಅಂಬರೀಷ್ ಅವರಿಗೆ ಟಿಕೆಟ್ ತೀರ್ಮಾನ ಆಗಿಲ್ಲ ಎಂದು ಈ ಹಿಂದೆಯೇ ಹೇಳಲಾಗಿತ್ತು. ಅದೇ ರೀತಿಯಲ್ಲಿ ಆಗಿದೆ ಎಂದು ತಿಳಿಸಿದ ಅವರು, ಇದೀಗ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡುವ ಬಗ್ಗೆ ತೀರ್ಮಾನ ಆಗಿದೆ ಎಂದರು.
ಸುಮಲತಾ ಅವರ ಪಾತ್ರ ಬಹಳ ದೊಡ್ಡದಿದೆ, ಅವರ ರಾಜಕೀಯ ಭವಿಷ್ಯವು ಸಹ ಬಹಳ ಉತ್ತಮ ಆಗಿರಲಿದೆ, ಚುನಾವಣೆ ಪ್ರಚಾರ ಆರಂಭ ಆದ ಮೇಲೆ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದ ಅವರು, ದೇವೇಗೌಡರು ಹಾಗೂ ಕುಮಾರಸ್ವಾಮಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಇದ್ದಾರೆ ಎಂದರು.
ಕೋಲಾರದಲ್ಲಿ ಸಂಸದ ಮುನಿಸ್ವಾಮಿ ನಮ್ಮ ಕಾರ್ಯಕರ್ತ, ಅತ್ಯಂತ ಸಮರ್ಪಣಾ ಭಾವದ ವ್ಯಕ್ತಿ, ಅವರ ರಾಜಕೀಯ ಭವಿಷ್ಯದ ಬಗ್ಗೆಯೂ ಯೋಚನೆ ಮಾಡುತ್ತೇವೆ, ನಾನು ಯಾವುದೇ ಒಳಜಗದ ಬಗ್ಗೆ ಚಿಂತೆ ಮಾಡಲ್ಲ, ದೊಡ್ಡ ಪಕ್ಷ ಕೋಟ್ಯಂತರ ಕಾರ್ಯಕರ್ತರು ಇದ್ದಾರೆ, ಅಸಮಾಧಾನಿತರು ಇದ್ದೆ ಇರ್ತಾರೆ, ನಾನು ಅದ್ಯಾವೋದನ್ನು ನೋಡಲ್ಲ, ಅಂತಹ ಸಮಸ್ಯೆ ಸಹ ಇಲ್ಲ ಎಂದು ಅಬಿಪ್ರಾಯಪಟ್ಟರು.


ಡಿ.ವಿ ಸದಾನಂದಗೌಡ ಅವರ ಶುದ್ದೀಕರಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಶುದ್ದೀಕರಣ ಹಿಂದೂ ಸಂಸ್ಕೃತಿ, ನಮ್ಮನ್ನು ನಾವು ಯಾವಾಗಲೂ ಶುದ್ದೀಕರಣ ಮಾಡಿಕೊಳ್ಳುತ್ತೇವೆ, ಅವರು ಬಿಜೆಪಿಯವರು ಬಿಜೆಪಿಯಲ್ಲೇ ಇರ್ತಾರೆ, ಬಿಜೆಪಿಯಲ್ಲಿ ಸದಾಕಾಲ ಶುದ್ದೀಕರಣ ಆಗ್ತಾನೆ ಇರುತ್ತೆ, ಇದೇನು ಹೊಸದಲ್ಲ ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಬೆಳಗಾವಿಯಲ್ಲಿ ಯಾರಿಗಾದರೂ ಟಿಕೆಟ್ ಕೊಡಿ, ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಅಲ್ಲಿಯ ಕೆಲವು ಮುಖಂಡರು ಬಂದಿದ್ದರು, ಆದರೆ ಅವರು ಎಲ್ಲಿಯೂ ಜಗದೀಶ್ ಶೆಟ್ಟರ್ ವಿರುದ್ಧವಾಗಿ ಮಾತಾಡಿದ್ದು ನನಗೆ ಗೊತ್ತಿಲ್ಲ, ನಿಮಗೆ ಮಾಹಿತಿ ಇರಬಹುದು ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಹನ್ನೆರೆಡು ಬಾರಿ ರಾಜ್ಯಕ್ಕೆ ಭೇಟಿ ನೀಡಿ ಬಹಿರಂಗ ಸಮಾವೇಶ ಮತ್ತು ರ್ಯಾಲಿಗಳನ್ನು ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭೆ ಚುನಾವಣೆಗೆ ಈಗಾಗಲೇ ಎರಡು ಬಾರಿ ಬಂದಿದ್ದಾರೆ, ಮುಂದೆ ಆರು ಬಾರಿ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

More News

You cannot copy content of this page