IS SAFFRON COLOUR AN ALLERGY OR AN ABOMINATION..? ಕೇಸರಿ ಶಾಲು, ಕುಂಕುಮ ಬಿಜೆಪಿಗರು ಯುವ ಸಮುದಾಯವನ್ನು ದಿಕ್ಕು ತಪ್ಪಿಸುವ ಬಳಸುವ ಟೂಲ್ ಕಿಟ್ ಹೊರತು ಅಸಲಿ ಆಚರಣೆಯಲ್ಲ: ಕಾಂಗ್ರೆಸ್

ಬೆಂಗಳೂರು : ತಮ್ಮ ಪಕ್ಷದ ಹಿರಿಯ ಮುಖಂಡರಿಂದ ಹಣೆಗೆ ಕುಂಕುಮ ಇಡಲು ವಿಪಕ್ಷ ನಾಯಕ ಆರ್ ಅಶೋಕ್ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಕೇಸರಿ ಶಾಲು, ಕುಂಕುಮ ಮುಂತಾದವುಗಳು ಬಿಜೆಪಿಗರ ಯುವ ಸಮುದಾಯವನ್ನು ದಿಕ್ಕು ತಪ್ಪಿಸುವ ಟೂಲ್ ಕಿಟ್ ಹೊರತು ಬಿಜೆಪಿಗರ ಅಸಲಿ ಆಚರಣೆಯಲ್ಲ ಎಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿರುವ ಕಾಂಗ್ರೆಸ್, ಕಲಬುರಗಿಯಲ್ಲಿ ತಮ್ಮದೇ ಪಕ್ಷದ ನಾಯಕರ ಹಾರ ಬೇಕು ಆದರೆ, ಕುಂಕುಮ ಬೇಡ ಎನ್ನುವ ಇವರ ಯೋಚನೆ ಎಂಹತದ್ದಾಗಿರಬಹುದು ಎಂದು ಆಕ್ಷೇಪ ವ್ಯಕ್ತಪಡಿಸಿದೆ.
ಆರ್ ಅಶೋಕ್ ಅವರು ಕಲಬುರಗಿಯ ಚಿಂಚೋಳಿ ತಾಲೂಕಿನ ಸುಲೆಪೇಟ್ ನಲ್ಲಿರುವ ಬಿಜೆಪಿ ಕಚೇರಿಗೆ ನಿನ್ನೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರ ಪಕ್ಷದ ಹಿರಿಯ ಮುಖಂಡರೊಬ್ಬರು ಅವರ ಹಣೆಗೆ ಕುಂಕುಮ ಇಡಲು ಬಂದಾಗ ನಿರಾಕರಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ನೆಟ್ಟಿಗರು ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ವಿಡಿಯೋವೊಂದನ್ನು ಹಂಚಿಕೊಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.


ಕಲಬುರಗಿಯಲ್ಲಿ @RAshokaBJP ಅವರಿಗೆ
ಕುಂಕುಮ ಎಂದರೆ ಅಲರ್ಜಿಯೇ, ಅಸಹ್ಯವೇ?
ಕುಂಕುಮ ಹಚ್ಚಲು ಬಂದರೆ ಹೌಹಾರಿ ನಿರಾಕರಿಸುವ ಅಶೋಕ್ ಅವರ ಮೂಲಕ ಬಿಜೆಪಿಯವರ ಬೂಟಾಟಿಕೆಯ ಹುಸಿ ಧಾರ್ಮಿಕತೆ ನಾಟಕ ಬಯಲಾಗಿದೆ.
ಕೇಸರಿ ಶಾಲು, ಕುಂಕುಮ ಮುಂತಾದವುಗಳು ಬಿಜೆಪಿಗರ ಯುವ ಸಮುದಾಯವನ್ನು ದಿಕ್ಕು ತಪ್ಪಿಸುವ ಟೂಲ್ ಕಿಟ್ ಹೊರತು ಬಿಜೆಪಿಗರ ಅಸಲಿ ಆಚರಣೆಯಲ್ಲ.
ಬೊಮ್ಮಾಯಿಯವರು ಕುಂಕುಮಾವನ್ನು ಉಜ್ಜಿ ಉಜ್ಜಿ ಅಳಿಸಿಕೊಂಡರೆ, ಅಶೋಕ್ ಅವರು ಹಚ್ಚಿಕೊಳ್ಳಲು ನಿರಾಕರಿಸುತ್ತಾರೆ,
ನಿಮ್ಮ ನಾಯಕರಿಗೆ ಕುಂಕುಮಕ್ಕಿಂತ ಮೇಕಪ್ ಮುಖ್ಯವೇ @BJP4Karnataka ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

More News