CM AND DCM WILL LOOK AFTER THIS MATTER: ಯಾರು ಏನೇ ಹೇಳಿದರೂ ಅದಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ: ಸಿಎಂ ಮತ್ತು ಡಿಸಿಎಂ ನೋಡಿಕೊಳ್ಳುತ್ತಾರೆ : ಸಚಿವ ಕೆ ಹೆಚ್ ಮುನಿಯಪ್ಪ

ಬೆಂಗಳೂರು : ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಅಂತಾ ಹೇಳಿದ್ದರು, ರಮೇಶ್ ಕುಮಾರ್ ಮತ್ತು ಅವರ ಸಂಗಡಿಗರು ಕೂಡಾ ಅದೇ ಮಾತು‌ ಹೇಳಿದ್ದರು, ಅಹಿತಕರ ಘಟನೆ ನಡೆದಿದ್ರೆ ಮರೆಯೋಣ ಅಂತಾ ಆ ಸಭೆಯಲ್ಲಿ ನಾನು ಹೇಳಿದ್ದೆ, ಆದರೆ ಇಂದು ಈ ರೀತಿಯಾಗಿದೆ ಎಂದು ಸಚಿವ ಕೆ ಹೆಚ್ ಮುನಿಯಪ್ಪ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರದಲ್ಲಿ ಕಾಂಗ್ರೆಸ್ ಬಹಳ ಭದ್ರವಾಗಿದೆ, ಜಾಫರ್ ಶರೀಫ್, ಶಂಕರಾನಂದ ಬಳಿಕ ಏಳು ಸಲ ಒಟ್ಟಿಗೆ ಗೆದ್ದಿದ್ದು ನಾನೇ, ಅವಕಾಶ ಕೊಟ್ಟರೆ ಗೆದ್ದುಕೊಂಡು ಬರುತ್ತೇನೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಸುಧಾಕರ್ ಮಂತ್ರಿ ಇದ್ದಾನೆ, ಅವರವರಿಗೆ ಇಷ್ಟ ಬಂದಿದ್ದು ತೀರ್ಮಾನ ತೆಗೆದುಕೊಳ್ಳಲಿ, ರಾಜೀನಾಮೆ ಕೊಡಲು ಹೋದವರ ಬಗ್ಗೆ ನಾನು ಚಕಾರ ಎತ್ತುವುದಿಲ್ಲ, ಸಿಎಂ ಮತ್ತು ಅಧ್ಯಕ್ಷರು ಸೇರಿ ತೀರ್ಮಾನ ಮಾಡುತ್ತಾರೆ ಎಂದರು.
ನಾನು ಯಾರಿಗೂ ತೊಂದರೆ ಮಾಡಿಲ್ಲ, ಜನ ನನ್ನ ಕೈ ಹಿಡಿದಿದ್ದಾರೆ, ಏಳು ಸಲ ಗೆಲ್ಲಿಸಿಕೊಂಡು ಬಂದಿದ್ದಾರೆ, ಸುಧಾಕರ್‌ ಸೇರಿದಂತೆ ಅವರ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ಕೊಡಲ್ಲ, ಕರ್ನಾಟಕದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಬೇಕು, ನಾವು ಎಲ್ಲಾ ಸ್ಥಾನ ಗೆಲ್ಲುವ ಕೆಲಸ ಮಾಡೋಣ, ನಾನು ಏನು ಹೇಳಲ್ಲ, ಸಿಎಂ ಹಾಗೂ ಡಿಸಿಎಂ ತೀರ್ಮಾನ ಮಾಡ್ತಾರೆ ಎಂದು ತಿಳಿಸಿದರು.

ನಾನೇ ಸಾಕಷ್ಟು ಜನರನ್ನು MLA ಮಾಡಿದ್ದೇನೆ, ಸಚಿವ ಕೆ.ಹೆಚ್. ಮುನಿಯಪ್ಪ ವಿರುದ್ಧ ಎಂಎಲ್ಸಿ ನಜೀರ್ ಅಹಮದ್ ಪುಟಗೋಸಿ ಪದ ಬಳಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅವರು ಕೋಪದಲ್ಲಿ ಸಣ್ಣತನದ ಮಾತಾಡುತ್ತಾರೆ, ನಾನು ಅವರಷ್ಟು ಕೆಳಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲ, ನಾನು ರಾಷ್ಟ್ರಮಟ್ಟದಲ್ಲಿ ರಾಜಕಾರಣ ಮಾಡಿದ್ದೇನೆ, ಹತ್ತು ವರ್ಷ ಕೇಂದ್ರ ಸಚಿವನಾಗಿದ್ದೆ, ಅವರ ಯಾವುದೇ ಹೇಳಿಕೆಗಳಿಗೆ ಪ್ರತಿಕ್ರಿಯಿಸಲ್ಲ, ಅವರೆಲ್ಲರೂ ನಮಗೆ ಸಹಕಾರ ಮಾಡಬೇಕು ಎಂದರು.

More News