ದೇವನಹಳ್ಳಿ : ಕರೋನಾ ವೇಳೆ ಮೃತಪಟ್ಟವರ ಆತ್ಮಗಳಿಗೆ ಶಾಂತಿ ಸಿಗಬೇಕು ಅಂದರೆ ಡಾ.ಕೆ.ಸುಧಾಕರ್ ಲೋಕಸಭೆ ಚುನಾವಣೆಯಲ್ಲಿ ಸೋಲಬೇಕು ಎಂದು ಹೂಡಿ ವಿಜಯಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ವಿರುದ್ಧ ಅಸಮಾಧಾನ, ವಿರೋಧ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈಗಾಗಲೇ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಹೇಳಿಕೆ ಅಭ್ಯರ್ಥಿ ಡಾ.ಸುಧಾಕರ್ ಗೆ ಕಗ್ಗಂಟಾಗಿ ಪರಿಣಮಿಸಿದೆ.
ಎಸ್.ಆರ್.ವಿಶ್ವನಾಥ್ ಅವರು ಡಾ.ಕೆ.ಸುಧಾಕರ್ ವಿರುದ್ದ ತಿರುಗಿ ಬಿದ್ದಿದ್ದು, ಅವರ ಪರ ಪ್ರಚಾರ ಮಾಡಲ್ಲ ಎಂದು ಘೋಷಿಸಿದ್ದಾರೆ. ಇದೀಗ ಹೂಡಿ ವಿಜಯ್‌ಕುಮಾರ್ ಕೂಡ ಡಾ.ಕೆ.ಸುಧಾಕರ್ ವಿರುದ್ಧ ಪ್ರಚಾರ ಮಾಡಲಾಗುವುದು ಎಂದು ತಿಳಿಸಿದ್ದಾರೆ.
2023ರಲ್ಲಿ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರ ಸೋತಂತೆ ಲೋಕಸಭೆ ಚುನಾವಣೆಲ್ಲೂ ಡಾ.ಸುಧಾಕರ್ ಅವರನ್ನು ಸೋಲಿಸಬೇಕು, ಡಾ.ಸುಧಾಕರ್ ಯಾವ ಹಿಂದುಳಿದ ಸಮುದಾಯಗಳ ನಾಯಕ ಬೆಳೆಯದಂತೆ ತಡೆಯುತ್ತಿದ್ದಾರೆ, ನಾನು 2023ರಲ್ಲಿ ಮಾಲೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ದೆಗೆ ತುಂಬಾ ಕೆಲಸ ಮಾಡಿದ್ದೆ, 2023ರ ಮಾಲೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಲು ಡಾ.ಸುಧಾಕರ್ ನೇರ ಕಾರಣ ಎಂದು ಆರೋಪಿಸಿದರು.
ಈಗಿನ ಶಾಸಕ ಕಾಂಗ್ರೆಸ್ ನ ನಂಜೇಗೌಡ ವಿರುದ್ದ ಕೇವಲ 1000 ಮತಗಳ ಅಂತರದಲ್ಲಿ ಸೋತಿದ್ದೆ, ಅದಕ್ಕೆ ನೇರ ಕಾರಣ ಸುಧಾಕರ್, ಈ ಬಾರಿ ಬಿಜೆಪಿಯಿಂದ ಟಿಕೆಟ್ ಕೈತಪ್ಪುವಂತೆ ಮಾಡಿ ಪಕ್ಷೇತರನಾಗಿ ನಿಂತು ಸ್ಪರ್ಧೆ ಮಾಡಿದ್ದೇನೆ. ನನಗೆ ಮಾಲೂರು ಜನ ಬೆಂಬಲ ನೀಡಿದ್ದಾರೆ ಎಂದರು.

ಹಿಂದುಳಿಗ ಸಮುದಾಯಗಳ ಯಾವುದೇ ಒಬ್ಬ ಮುಖಂಡರನ್ನು ಬೆಳೆಯಲು ಸುಧಾಕರ್ ಬಿಡಲ್ಲ, ಹಿಂದುಳಿದ ಸಮುದಾಯಗಳ ಯುವ ನಾಯಕರನ್ನು ಹತ್ತಿರಕ್ಕೂ ಸೇರಿಸಿಕೊಳ್ಳಲ್ಲ, ಆದ್ದರಿಂದ ಇಂತಹ ವ್ಯಕ್ತಿಗೆ ಬಿಜೆಪಿ ಹೈಕಮ್ಯಾಂಡ್ ಟಿಕೆಟ್ ಕೊಡಬಾರದಿತ್ತು. ಕೊಟ್ಟಿದೆ, ಸೋಲಿಸುವುದೊಂದೇ ಮಾನದಂಡ ಎಂದು ಹೇಳಿದ್ದಾರೆ.
ಕರೋನಾ ವೇಳೆ ಉಂಟಾಗಿದ್ದ ಸಾವು ನೋವುಗಳಿಗೆ ಡಾ.ಸುಧಾಕರ್ ರವರ ದುರಾಡಳಿತವೇ ಕಾರಣ ಎಂದು ಆರೋಪಿಸಿದ ಅವರು, ಕರೋನಾ ವೇಳೆ ಮೃತರ ಆತ್ಮಕ್ಕೆ ಶಾಂತಿ ಸಿಗಬೇಕು ಅಂದ್ರೆ ಡಾ.ಸುಧಾಕರ್ ಸೋಲಬೇಕು, ಕಳೆದ ಚುನಾವಣೇಲಿ ಹರಿಹರ ಬ್ರಹ್ಮಬಂದರೂ ಡಾ.ಸುಧಾಕರ್ ಗೆಲ್ತಾರೆ ಎಂದಿದ್ದರು, ಅಂತಹ ಸುಧಾಕರ್ ನ ಸಾಮಾನ್ಯ ಪ್ರದೀಪ್ ಈಶ್ವರ್ ಸೋಲಿಸಿದ್ದರು ಎಂದರು.
ಇದೀಗ ಡಾ.ಸುಧಾಕರ್ ಗೆ ಬಿಜೆಪಿ ಹೈಕಮ್ಯಾಂಡ್ ಟಿಕೆಟ್ ನೀಡಿ ತಪ್ಪು ಮಾಡಿದೆ, ದುರಹಂಕಾರಿ, ಇತರರನ್ನು ಸಮಾನವಾಗಿ ಕಾಣದ, ಕೆಳಜಾತಿ ಜನರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳದ, ಡಾ.ಕೆ.ಸುಧಾಕರ್ ಸೋಲಬೇಕಂದು ವಹ್ನಿಕುಲ ಕ್ಷತ್ರಿಯ ಸಮಾಜದ ಯುವ ಮುಖಂಡ ಹೂಡಿ ವಿಜಯ್ ಕುಮಾರ್ ಕರೆ ನೀಡಿದ್ದಾರೆ. ಕರೆ ನೀಡಿದ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.




