ಬೆಂಗಳೂರು,ನ 25: ಸಚಿವ ಸಂಪುಟ ಸಭೆಯಲ್ಲಿ ಚಿಕ್ಕಬಳ್ಳಾಪುರಕ್ಕೆ ತಾಲ್ಲೂಕು ಮಟ್ಟದ ಆಸ್ಪತ್ರೆ,ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಾಣ ವಿಚಾರವಾಗಿ ಸಚಿವ ಡಾ.ಕೆ.ಸುಧಾಕರ್ ಮತ್ತು ಸಚಿವರ ಮಧ್ಯೆ ಭಾರೀ ಜಟಾಪಟಿ ನಡೆಯಿತು.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ಹೊಸದಾಗಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಯ ಜೊತೆಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಿಸುವ ಕಾಮಗಾರಿಗಳ 27 ಕೋಟಿ ರೂ.ಅಂದಾಜು ಪಟ್ಟಿಗೆ ಆಡಳಿತಾತ್ಮ ಕ ಅನುಮೋದನೆ ನೀಡುವ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು.ಆರೋಗ್ಯ ಸಚಿವ ತವರು ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಆಸ್ಪತ್ರೆ ನಿರ್ಮಾಣ ಸಂಬಂಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ.
ಈ ಪ್ರಸ್ತಾವನೆಗೆ ಸಚಿವ ನಾರಾಯಣ ಗೌಡ ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದರು.ನಮಗೂ ಹೊಸ ಆಸ್ಪತ್ರೆ ಕಟ್ಟಡ ಹಂಚಿಕೆ ಮಾಡಿ ಎಂದು ನಾರಾಯಣಗೌಡ ಮುಖ್ಯಮಂತ್ರಿಗೆ ಒತ್ತಾಯಿಸಿದರು.ಈ ಬಗ್ಗೆ ಹಿಂದಿನ ಸಿಎಂ ಯಡಿಯೂರಪ್ಪ ಕೆ.ಆರ್.ಪೇಟೆ ಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದರು. ಆದರೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.ಆದರೆ,ಚಿಕ್ಕಬಳ್ಳಾಪುರದಲ್ಲಿ ಆಸ್ಪತ್ರೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು ಎಂಬ ಮಾಹಿತಿ ಇದೆ.ಕ್ರೀಡಾ ಸಚಿವರ ಆರೋಪಕ್ಕೆ ಎಂಟಿಬಿ ನಾಗ ರಾಜ್,ಜೆ.ಸಿ.ಮಾಧುಸ್ವಾಮಿ,ಡಾ.ಅಶ್ವತ್ಥ ನಾರಾಯಣ್ ಸೇರಿದಂತೆ ಇತರ ಸಚಿವರೂ ದನಿಗೂಡಿಸಿದರು.
ಎಲ್ಲಾ ಸೌಲಭ್ಯ,ಯೋಜನೆಗಳನ್ನು ಸಚಿವರೇ ತಮ್ಮ ಜಿಲ್ಲೆಗೆ ತೆಗೆದುಕೊಂಡು ಹೋದರೆ ನಾವೇನ್ ಮಾಡಬೇಕು.ಈ ಹಿಂದೆ ನೀಡಿ ರುವ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿಲ್ಲ.ಅನುಮೋದನೆ ನೀಡಿರುವ ಯೋಜನೆಗಳಿಗೂ ಬ್ರೇಕ್ ಹಾಕಿದ್ದಾರೆ.ಇವರಿಗೊಂ ದು,ನಮಗೊಂಡು ನ್ಯಾಯವೇಕೆ.ಜಿಲ್ಲಾಸ್ಪತ್ರೆ,ತಾಲೂಕು ಆಸ್ಪತ್ರೆ, ಸುಶ್ರೂಷಕರ ವಸತಿ ಕಟ್ಟಡ ಸೇರಿದಂತೆ ಎಲ್ಲವೂ ಚಕ್ಕಬಳ್ಳಾಪುರ ಕ್ಕೆ ತೆಗೆದುಕೊಂಡು ಹೋಗುವುದು ಸರಿಯೇ ಎಂದು ತಕರಾರು ಎತ್ತಿದ್ದಾರೆ.ಸಂಪುಟ ಸಹೋದ್ಯೋಗಿಗಳ ಮಾತಿಂದ ಸಚಿವ ಸಚಿವ ಸುಧಾಕರ್ ಮುಜುಗರಕ್ಕೆ ಒಳಗಾದರು.
ಸಚಿವರ ವಿರೋಧ ಹೆಚ್ಚಾಗುತ್ತಿದ್ದ ಹಾಗೇ ಕೊನೆಗೆ ಮುಖ್ಯಮಂತ್ರಿ ಪರಿಶೀಲನೆ ಮಾಡೋಣ.ಹಾಗೂ ಇತರ ಸಚಿವರ ನೀಡಿರುವ ಯೋಜನೆಗಳ ಬಗ್ಗೆಯೂ ಸೂಕ್ತ,ಸರಿಯಾದ ತೀರ್ಮಾನ ಕೈಗೊಳ್ಳೋಣವೆಂದು ಪ್ರಸ್ತಾವನೆ ಮುಂದೂಡಿದರು ಎನ್ನಲಾಗಿದೆ.




