ಭ್ರ್ರಷ್ಟ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪ ತಿ ಆಳ್ವಿಕೆ ಜಾರಿಗೊಳಿಸಿ : ರಾಜ್ಯಪಾಲರ ಭೇಟಿ ಮಾಡಿ ದಾಖಲೆ ಸಮೇತ ದೂರು ನೀಡಿದ ಕಾಂಗ್ರೆಸ್ ನಾಯಕರು

ಬೆಂಗಳೂರು :ರಾಜ್ಯದಲ್ಲಿ ನಡೆಯುತ್ತಿರುವ ಕಮಿಷನ್ ದಂದೆ ಬಗ್ಗೆ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಅವರನ್ನು ವಿಧಾನ ಸಭೆ ಪ್ರತಿಪಕ್ಷದ ನಾಯಕರ ಜೊತೆ ಭೇಟಿ ಮಾಡಿದ್ದೇವೆ.ರಾಜ್ಯದ ಅತ್ಯಂತ ಭ್ರಷ್ಟ ಬಿಜೆಪಿ ಸರಕಾರವನ್ನು ಕಿತ್ತೊಗೆಯಬೇಕು.ಸಂವಿ ಧಾನದ 356 ನೇ ಪರಿಚ್ಛೇದದ ಪ್ರಕಾರ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದೇವೆ ಎಂ ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ವಿಪಕ್ಷ ನಾಯಕರು ಹಾಗೂ ಪಕ್ಷದ ಶಾಸಕರ ಜೊತೆ ರಾಜ್ಯಪಾಲರನ್ನು ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಅವರು ನಾನಾ ಇಲಾಖೆಗಳಲ್ಲಿ ಕಮಿಷನ್ ಹಿಂಸೆ ಬಗ್ಗೆ ದೂರಿ ಪ್ರಧಾ ನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.ತಮಗಾಗುತ್ತಿರುವ ನೋವು,ಕಿರುಕುಳ ತಡೆಯಲಾರದೆ ದೂರು ಕೊಟ್ಟಿದ್ದಾರೆ .ಅವರ ನೋವು ನೋಡಿಕೊಂಡು ಸುಮ್ಮನೆ ಕೂರಲು ನಮಗೆ ಸಾಧ್ಯವಿಲ್ಲ.ನಿನ್ನೆ,ಇವತ್ತು ನೋಡಿದ್ದೀರಲ್ಲ.ಭ್ರಷ್ಟ ಅಧಿಕಾರಿಗಳು, ಸಿಬ್ಬಂದಿ ಮೇಲೆ ನಡೆಯುತ್ತಿರುವ ಎಸಿಬಿ ದಾಳಿಯನ್ನು.ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿರುವುದಕ್ಕೆ ಇದು ಚಿಕ್ಕ ಸ್ಯಾಂಪ ಲ್ ಎಂದು ಅವರು ಸಮರ್ಥನೆ ನೀಡಿದರು.

ಸರಕಾರದ ದುರಾಡಳಿತ,ಭ್ರಷ್ಟಾಚಾರದ ಬಗ್ಗೆ ಹಂತ-ಹಂತವಾಗಿ ಹೋರಾಟ ರೂಪಿಸುತ್ತೇವೆ.ಪಕ್ಷದ ನಾಯಕರ ಜತೆ ಚರ್ಚಿಸಿ,ಈ ಬಗ್ಗೆ ತೀರ್ಮಾನ ಮಾಡುತ್ತೇವೆ.ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ.ಭಾರತದ ಇತಿಹಾಸದಲ್ಲೇ ಕರ್ನಾಟಕಕ್ಕೆ ದೊಡ್ಡ ಕಳಂಕ ಬಂದಿ ದೆ.ಲೋಕೋಪಯೋಗಿ,ಜಲ ಸಂಪನ್ಮೂಲ,ಸಣ್ಣ ನೀರಾವರಿ,ಬೃಹತ್ ನೀರಾವರಿ,ಗ್ರಾಮೀಣಾಭಿವೃದ್ಧಿ ಸೇರಿದಂತೆ ನಾನಾ ಇಲಾಖೆ ಗಳ ಒಂದು ಲಕ್ಷಕ್ಕೂ ಹೆಚ್ಚು ಗುತ್ತಿಗೆದಾರರು ಇದ್ದಾರೆ.ಏನೇ ಕೆಲಸ ಮಾಡಿದರೂ ಅಧಿಕಾರಿಗಳು,ರಾಜಕಾರಣಿಗಳಿಗೆ ಶೇಕಡಾ 40 ರಿಂದ 56 ರಷ್ಟು ಕಮಿಷನ್ ಕೊಡಬೇಕು ಎಂದು ಸಂಘದ ಅಧ್ಯಕ್ಷ ಕೆಂಪಣ್ಣನವರು ಪ್ರಧಾನಿಗೆ ದೂರಿದ್ದಾರೆ. ಮಾಧ್ಯಮಗಳಲ್ಲೂ ಇದು ವರದಿ ಆಗಿದೆ ಎಂದು ಹೇಳಿದರು.

ಪ್ರಧಾನಿಗಳಿಗೆ ಹೋಗಿರುವ ದೂರಿನ ಪ್ರತಿಯನ್ನು ಪತ್ರ ಸಮೇತ ರಾಜ್ಯಪಾಲರಿಗೆ ನೀಡಿದ್ದೇವೆ.ಈ ಸರ ಕಾರವನ್ನು ವಜಾ ಮಾಡ ಬೇಕು.ಗುತ್ತಿಗೆದಾರರ ಸಂಘದ ದೂರಿನ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯ ಮೂರ್ತಿಗಳಿಂದ ತನಿಖೆ ಮಾಡಿಸಬೇಕು ಎಂದು ರಾಜ್ಯ ಪಾಲರನ್ನು ಒತ್ತಾಯಿಸಿದ್ದೇವೆ.ಇದರ ಜತೆಗೆ ನಾನಾ ಇಲಾಖೆಯ ಕಾಮಗಾರಿಗಳ ಅಂದಾಜು ವೆಚ್ಚ ಡಬಲ್ ಆಗುತ್ತಿದೆ.100 ಕೋಟಿ ರುಪಾಯಿ ಕಾಮಗಾರಿಗೆ 200 ಕೋಟಿ ರುಪಾಯಿ ತೋರಿಸಲಾಗುತ್ತಿದೆ.ಅದರ ಬಗ್ಗೆಯೂ ನಮ್ಮ ಬಳಿ ದಾಖಲೆಗಳು ಇವೆ.ಒಂದೆರಡು ದಿನದಲ್ಲೇ ಅವುಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದರು.

ಹಿಂದೆ ಯಡಿಯೂರಪ್ಪನವರ ಸರಕಾರ ಇದ್ದಾಗ ಕೆಲವು ಮಂತ್ರಿಗಳು ಅದರಲ್ಲೂ ವಿಶೇಷವಾಗಿ ನೀರಾವರಿ, ಕಾರ್ಪೊರೇಷನ್ ನಲ್ಲಿ ಡಬಲ,ಡಬಲ್ ಲೆಕ್ಕ ನೀಡಲಾಗಿದೆ.ಯಾವ,ಯಾವ ಇಲಾಖೆಯಲ್ಲಿ ಎಷ್ಟೆಷ್ಟು ವ್ಯವಹಾರ ನಡೆದಿದೆ ಎಂಬುದನ್ನು ದಾಖಲೆ ಸಮೇತ ಸದ್ಯದಲ್ಲೇ ಬಿಡುಗಡೆ ಮಾಡುತ್ತೇನೆಂದು ಅವರು ಸರ್ಕಾರಕ್ಕೆ ಸವಾಲು ಹಾಕಿದರು.

More News