PRAHLAD JOSHI: ಗೆಲ್ಲುವ ಪಕ್ಷಗಳಲ್ಲಿ ಚುನಾವಣೆ ಸಂದರ್ಭದಲ್ಲಿ ಗೊಂದಲಗಳು ಸಹಜ: ಸಚಿವ ಪ್ರಹ್ಲಾದ ಜೋಶಿ

ಹುಬ್ಬಳ್ಳಿ: ಗೆಲ್ಲುವ ಪಕ್ಷಗಳಲ್ಲಿ ಚುನಾವಣೆ ಸಂದರ್ಭದಲ್ಲಿ ಗೊಂದಲಗಳಿರುವುದು ಸಹಜ, ಬಿಜೆಪಿಯಲ್ಲಿ ಚಿತ್ರದುರ್ಗದ ಟಿಕೆಟ್ ವಿಚಾರದಲ್ಲಿರುವ ಗೊಂದಲವನ್ನು ನಾಯಕರು ಪರಿಹರಿಸುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈ ಕುರಿತಂತೆ ಕೇಂದ್ರದ ನಾಯಕರೊಂದಿಗೆ ಮಾತನಾಡಿದ್ದೇನೆ. ಚುನಾವಣೆಯಲ್ಲಿ ವಿರೋಧಿಗಳನ್ನು ಟೀಕಿಸುವ ಭರದಲ್ಲಿ ನಾಲಗೆಯ ಮೇಲೆ ಹಿಡಿತ ಕಳೆದುಕೊಳ್ಳಬಾರದು ಎಂದರು.

ಮಂಡ್ಯ ಟಿಕೆಟ್ ವಿಚಾರದ ಕುರಿತಂತೆ ಸುಮಲತಾ ಅವರನ್ನು ಸಮಾಧಾನಗೊಳುಸುವ ಕೆಲಸ ನಡೆದಿದೆ ಎಂದು ಹೇಳಿದರು.

ಮುರಾಘಮಠ ಸ್ವಾಮೀಜಿ ತಮ್ಮ ಹೇಳಿಕೆ ಬದಲಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.

ಸಿದ್ದರಾಮಯ್ಯ ಅವರ ಮಗ ಯತ್ತಿಂದ್ರ ಅವರು ಬಳಸುತ್ತಿರುವ ಭಾಷೆ ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ. ಈಗಾಗಲೇ ಅಮಿಶ್ ಶಾ ವಿರುದ್ದದ ಪ್ರಕರಣವನ್ನು ಕೋರ್ಟ್ ವಜಾ ಮಾಡಿದ್ದು ಅವರು ಅಪರಾಧಿಯಲ್ಲ ಎನ್ನುವುದು ಸಾಭೀತಾಗಿದೆ. ಈ ವೇಳೆ ಅಮಿತ್ ಮೇಲೆ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಪ್ರಲ್ಹಾದ್ ಜೋಶಿ ಹೇಳಿದರು.

More News

You cannot copy content of this page