ಚೆನ್ನೈ : ಕಿರಾತಕ ಖ್ಯಾತಿಯ ಬಹುಭಾಷಾ ನಟ ಡೇನಿಯಲ್ ಬಾಲಾಜಿ (48) ಇಂದು ಬೆಳಗ್ಗೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಇತ್ತೀಚೆಗೆ ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಸತತ ಚಿಕಿತ್ಸೆಯ ನಂತರವೂ ಅವರು ಇಂದು ಬೆಳಗ್ಗೆ ನಿಧನಹೊಂದಿದ್ದಾರೆ.
ತಮಿಳು ಕಿರುತೆರೆಯ ಮೂಲಕ ಡೇನಿಯಲ್ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ಚಿತ್ತಿ ಧಾರವಾಹಿಯಲ್ಲಿ ಅವರು ನಟಿಸಿದ ಪಾತ್ರಕ್ಕೆ ಖ್ಯಾತಿ ಗಳಿಸಿದ್ದರು. ನಂತರ ಅವರು ಬಿಗೆ ಸ್ಕ್ರೀನ್ ನಲ್ಲಿ ನಟಿಸಿದ್ದರು. ಸುಮಾರು 40 ಕ್ಕೂ ಹೆಚ್ಚು ತಮಿಳು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
ಯಶ್ ಅಭಿನಯದ ಕಿರಾತಕ ಚಿತ್ರದಲ್ಲೂ ಅಭಿನಯಿಸಿದ್ದರಿಂದ ಅವರಿಗೆ ಕಿರಾತಕ ಎಂದೇ ಖ್ಯಾತಿ ಪಡೆದಿದ್ದರು. ಇದರ ಜತೆ ಮಲಿಯಾಳಂ ಮತ್ತು ತೆಲುಗು ಚಿತ್ರದಲ್ಲೂ ನಟಿಸಿದ್ದರು.
ಡೇನಿಯಲ್ ಅವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಇಂದು ಸಂಜೆ ಪುರಸೈವಾಲ್ಯಂನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.