COMMERCIAL GAS CYLINDER RATE REDUCED: ಆರ್ಥಿಕ ವರ್ಷದ ಮೊದಲ ದಿನವೇ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಇಳಿಕೆ

ನವದೆಹಲಿ : ಹಣಕಾಸು ವರ್ಷದ ಮೊದಲ ದಿನವೇ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ. 19 ಕೆಜಿ ಸಿಲಿಂಡರ್ ಬಲೆ 30.50 ರೂಪಾಯಿ ಇಳಿಕೆಯಾಗಿದ್ದು, ಈ ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗಿದೆ.
ದೆಹಲಿಯಲ್ಲಿ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 30.50 ರೂಪಾಯಿ ಇಳಿಕೆ ಕಂಡಿದೆ. ಹಾಗೆಯೇ ಮುಂಬೈ ನಲ್ಲಿ 31.50 ರೂಪಾಯಿ, ಚೆನ್ನೈನಲ್ಲಿ 30.50 ರೂಪಾಯಿ ಮತ್ತು ಕೋಲ್ಕತ್ತಾದಲ್ಲಿ 32 ರೂಪಾಯಿ ಕಡಿಮೆಯಾಗಲಿದೆ.
ಇಳಿಕೆಯ ನಂತರ ದೆಹಲಿಯ ವಾಣಿಜ್ಯ ಬಳಕೆ 19 ಕೆಜಿ ಸಿಲಿಂಡರ್ ಬೆಲೆ 1764.50 ಯಾರಿಗೆ. ಮುಂಬೈನಲ್ಲಿ ಸಿಲಿಂಡರ್ ವೊಂದಕ್ಕೆ 1717.50 , ಕೋಲ್ಕತ್ತಾದಲ್ಲಿ 1879 ರೂಪಾಯಿ ಮತ್ತು ಚೆನ್ನೈನಲ್ಲಿ 1930 ರೂಪಾಯಿ ಮತ್ತು ಬೆಂಗಳೂರಿನಲ್ಲಿ 1830 ರೂಪಾಯಿಗೆ ಲಭ್ಯವಾಗಲಿದೆ.
ಗೃಹ ಬಳಕೆ ಸಿಲಿಂಡರ್ ನಲ್ಲಿ ಯಾವುದೇ ರೀತಿಯ ಬಲಾವಣೆಯಾಗಿಲ್ಲ. ಕಳೆದ ಹದಿನೈದು ದಿನಗಳಲ ಹಿಂದೆಯಷ್ಟೇ 100 ರೂಪಾಯಿ ಇಳಿಕೆಯಾಗಿತ್ತು.

More News