COME TO THE PUBLIC DEBATE: ರಾಜ್ಯಕ್ಕೆ ಅನುದಾನ ಕೊಟ್ಟಿದ್ದರೆ ಪಬ್ಲಿಕ್ ಡಿಬೇಟ್ ಗೆ ಬನ್ನಿ: ಪಂಥಾಹ್ವಾನ ನೀಡಿದ್ದೇನೆ ಸ್ವೀಕರಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹ

ಬೆಂಗಳೂರು : ಬಿಜೆಪಿಯವರು ಹೇಳೋದು ಮನ್ ಕಿ ಬಾತ್ ಹೊರತು ಜನ್ ಕಿ ಬಾತ್ ಅಲ್ಲಾ, ನೀವ್ ಕರೆಕ್ಟ್ ಇದ್ದೀರಾ ಅಂದರೆ ಪಬ್ಲಿಕ್ ನಲ್ಲಿ ಡಿಬೇಟ್ ಮಾಡ್ರಿ, ಕನ್ನಡಿಗರಿಗೆ ಯಾವುದೇ ರೀತಿ ಅನ್ಯಾಯವಾಗಿಲ್ಲ ಎಂದು ಹೇಳ್ತಿದ್ದಿರಲ್ಲಾ,ಅದನ್ನ ಚರ್ಚೆ ಮಾಡಿ, ನಿರ್ಮಲಾ ಸೀತಾರಾಮನ್ ಅವರಿಗೆ ಯಾಕೆ ಹೆದರಿಕೆ, ಮೋದಿಯವರಿಗೆ ಹಾಗೂ ಅಮಿತ್ ಶಾ ಅವರಿಗೆ ಯಾಕೆ ಹೆದರಿಕೆ ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಯವರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಬೆಂಗಳೂರಿನಲ್ಲಿ ಇಂದು ನಡೆದ ಮಾದ್ಯಮ ಸಂವಹನ ಮತ್ತು ಸಾಮಾಜಿಕ ಜಾಲತಾಣ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನಿರ್ಮಲಾ ಸಿತಾರಾಮನ್ ಅವರು ಹಿಟ್ ಆ್ಯಂಡ್ ರನ್ ಮಾಡುತ್ತಿದ್ದಾರೆ, ಚರ್ಚೆಗೆ ಕರೆದಿದ್ದೀವಲ್ಲಾ,ಕಂದಾಯ ಸಚಿವರು ಕುಳಿತುಕೊಳ್ಳೋಕೆ ರೆಡಿ ಇದ್ದಾರೆ, ನೀವು ಧೈರ್ಯ ತೋರಿಸಿ ಎಂದು ಸವಾಲು ಹಾಕಿದರು.
ಮೋದಿಯವರಿಗೆ ಪ್ರೆಸ್ ನವರನ್ನ ಎದಿರಿಸೋ ಧೈರ್ಯ ಇಲ್ಲ, ಮೋದಿಯವರೇ ಪ್ರೆಸ್ ನವರಿಗೆ ಹೆದರಿದಾಗ ಉಳಿದ ಕ್ಯಾಬಿನೆಟ್ ಸಚಿವರು ಏನು ಮಾಡ್ತಾರೆ ? ಎಂದು ಪ್ರಶ್ನಿಸಿದರು. 10ವರ್ಷದಲ್ಲಿ ಒಂದ್ ಪ್ರಶ್ನೆಯನ್ನಾದರೂ ಸ್ವೀಕಾರ ಮಾಡಿದ್ದಾರಾ? ಅಮಿತ್ ಶಾ ರಾಜ್ಯಕ್ಕೆ ಬಂದು ಮಾತನಾಡಿದ್ದು ಅಪ್ಪಟ ಸುಳ್ಳು. ಅವರು ಮಿನಿಸ್ಟರ್ ಆಪ್ ಮಿಸ್ ಇನ್ಪಾರ್ಮೇಶನ್ ಆಗ್ಬೇಕಿತ್ತು, ಸಿಎಂ ಅವರು ಪಿಎಂ ಗೆ ಭೇಟಿ ಮಾಡಿದ್ದು ಸುಳ್ಳಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಚೆನ್ನಾಗಿ ಬರ ನಿರ್ವಹಣೆ ಮಾಡುತ್ತಿದೆ, ಇದನ್ನೆ ರಾಷ್ಟ್ರ ಮಟ್ಟದಲ್ಲಿ ಅಳಿವಡಿಸಿಕೊಳ್ಳಬೇಕು, ಆದ್ರೆ, ಅಮಿತಾ ಶಾ ಇಷ್ಟು ಸುಳ್ಳು ಯಾಕೆ ಹೇಳುತ್ತಿದ್ದಾರೆ, 25 ಬಿಜೆಪಿ ಸಂಸದರು ಏನು ಕೆಲಸ ಮಾಡಿಲ್ಲ,
ಒಂದೂವರೆ ತಿಂಗಳ ಮುಂಚಿತವಾಗಿ ನಾವು ಮನವಿ ಕೊಟ್ಟಿದ್ದೇವೆ, ನಾವು ಅಮಿತಾ ಶಾ ಅವರನ್ನು ಭೇಟಿ‌ ಮಾಡಿದ್ದು, ಕ್ರಿಕೆಟ್ ಟಿಕೆಟ್ ಕೇಳೋಕೆ ಹೋಗಿದ್ವಾ, ಬರ ನಿರ್ವಹಣೆಗಾಗಿ‌ ಮನವಿ ಮಾಡಲು ಹೋಗಿದ್ವಿ ಎಂದು ಬಿಜೆಪಿಯವರನ್ನು ತರಾಟೆಗೆ ತೆಗೆದುಕೊಂಡರು.
ಅಮಿತ್ ಶಾ ಸುಳ್ಳುಗಳ ಸರದಾರ
ಸಿಎಂ ಸಿದ್ದರಾಮಯ್ಯ ಅವರು, ಸಚಿವ ಕೃಷ್ಣಬೈರೇಗೌಡ ಭೇಟಿ ಮಾಡಿದ್ರು ಅದು‌ ಸುಳ್ಳಾ? ಎನ್ನುವುದನ್ನು ವಿಜಯೇಂದ್ರ ಮತ್ತು ಆರ್.ಅಶೋಕ್ ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹಿಸಿದ ಅವರು, ರಾಜ್ಯ ಮಟ್ಟದ ಬಿಜೆಪಿ ನಾಯಕರು ಈ ಬಗ್ಗೆ ಮಾತನಾಡ್ಬೇಕು, ರಾಜ್ಯದಲ್ಲಿ ಬಿಜೆಪಿಯವರು 8 ಕ್ಷೇತ್ರಗಳನ್ನೂ ದಾಟುವುದಿಲ್ಲ, ಇದನ್ನ ಆರ್ ಎಸ್ ಎಸ್ ನವರೇ ಹೇಳುತ್ತಿದ್ದಾರೆ, ಆದ್ದರಿಂದ ಸುಳ್ಳು ಹೇಳಿ ಜಯ ಪಡೆಯುವುದಕ್ಕೆ ಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಎನ್ ಐಎ ನಲ್ಲಿ ವರದಿ ನೀಡಿದ್ದು, ಬಿಜೆಪಿಯ ಕಾರ್ಯಕರ್ತರೊಬ್ಬರು ಭಾಗಿಯಾಗಿದ್ದರು ಎಂಬ ಮಾಹಿತಿ ಇದೆ, ತನಿಖೆ ನಡೆಯುತ್ತಿದೆ, ಕೇಂದ್ರದ ಸರ್ಕಾರದ ಅಂಗ ಸಂಸ್ಥೆ ಈ ವಿಚಾರವನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.
ಗ್ಯಾರಂಟಿಗಳ ಲಾಭ ಪಡೆಯುತ್ತಿರುವವರೇ ಬಿಜೆಪಿಯವರು
25 ಗ್ಯಾರೆಂಟಿ ಯೋಜನೆಗಳ ಬಗ್ಗೆ ಬಿಜೆಪಿ ನಾಯಕರ ಟೀಕೆ ವಿಚಾರವಾಗಿ ಮಾತನಾಡಿದ ಅವರು, ಯಾರು ಟೀಕೆ ಮಾಡುತ್ತಾರೆ? ಬಿಜೆಪಿ ಮುಖಂಡರಾ? ಬಿಜೆಪಿ ಕಾರ್ಯಕರ್ತರಾ?, ನಮ್ಮ ಗ್ಯಾರೆಂಟಿ ಯೋಜನೆಗಳನ್ನ ಹೆಚ್ಚು ತೆಗೆದುಕೊಳ್ತಿರೋದೆ ಬಿಜೆಪಿ ಕಾರ್ಯಕರ್ತರು, ಬಿಜೆಪಿ ಮುಖಂಡರು ನಮ್ಮ‌ ಗ್ಯಾರೆಂಟಿಗಳನ್ನ ಟೀಕೆ ಮಾಡ್ತಾರೆ ಎಂದು ಟೀಕಿಸಿದರು.
ಬಿಜೆಪಿಗೆ ಸೋಲಿನ ಭಯ
ಬಿಜೆಪಿಗೆ ಸೋಲಿನ ಭಯ ಬಂದಿದೆ, ದೇಶದಲ್ಲಿ 200 ಸೀಟ್ ದಾಟಲ್ಲ ಅಂತಿದೆ, ರಾಜ್ಯದಲ್ಲಿ 8 ಸೀಟ್ ಬಂದ್ರೆ ಹೆಚ್ಚು, ಇದನ್ನು ಆರ್ ಎಸ್ ಎಸ್ ನಾಯಕರು ‌ಹೇಳಿದ್ದು, ಬಿಜೆಪಿಯಲ್ಲಿ ಒಳ ಜಗಳ ನಡೆಯುತ್ತಿದೆ,
ಬಿಜೆಪಿ ಕುಟುಂಬ ರಾಜಕೀಯದಿಂದ ಕಲುಷಿತವಾಗಿದೆ ಎಂದು ಯತ್ನಾಳ್, ಈಶ್ವರಪ್ಪ, ಸಿ ಟಿ ರವಿ ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಮೇಶ್ವರಂ ಕೆಫೆ ವಿಚಾರಣೆ ವಿಚಾರ ಸಂಬಂಧ ಮೀಡಿಯಾದಲ್ಲಿ ಒಂದು ವರದಿ ಬಂದಿದೆ. ಬಿಜೆಪಿ ಕಾರ್ಯಕರ್ತನ ವಿಚಾರಣೆಯಾಗಿದೆ ಎಂದು, ನಾವು ಕೇಳುತ್ತಿದ್ದೇವೆ ಅವರು ಆರೋಪಿನಾ, ಸಾಕ್ಷಿಯಾ,
ಯಾವ ವಿಚಾರಕ್ಕೆ ವಿಚಾರಣೆ ಮಾಡಿದ್ದು, ತನಿಖೆ NIA ಮಾಡುತ್ತಿದೆ, ಹೀಗಾಗಿ ಸ್ಪಷ್ಟಿಕರಣ ನೀಡಲಿ ಎಂದು ಆಗ್ರಹಿಸಿದರು.
ಪುಲ್ವಾಮಾ ದಾಳಿ ಬಗ್ಗೆ ಕಾಂಗ್ರೆಸ್ ಶಾಸಕರ ಹೇಳಿಕೆ‌ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಪುಲ್ವಾಮಾ ವಿಚಾರವಾಗಿ ಅಂದಿನ ಜಮ್ಮು ಕಾಶ್ಮೀರ ಗವರ್ನರ್ ಮಲಿಕ್ ಮಾತಾನಾಡಿದ್ದಾರೆ, ಈ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ಮಾಡಿದರು, ನನ್ನ ಕೈ ಕಾಲು ಕಟ್ಟಿ ಹಾಕಿದ್ರು ಅಂತ ಬಹಿರಂಗವಾಗಿ ಹೇಳಿದ್ದಾರೆ, ಪುಲ್ವಾಮಾ ಸೇಫ್ ಜಾಗ, ಅಲ್ಲಿ ಆರ್ ಡಿ ಎಕ್ಸ್ ಹೇಗೆ ಹೋಯ್ತು, ಇದರ ವಿಚಾರಣೆ ನಡೆಯಬೇಕಲ್ವಾ, ಐದು ವರ್ಷವಾಗಿದೆ ಘಟನೆಯಾಗಿ ಇನ್ನೂ ಯಾಕೆ ಸಾಕ್ಷಿ ಸಿಕ್ಕಿಲ್ಲ, ಈ ಘಟನೆ ಬಗ್ಗೆ ನಾವ್ಯಾರು ಪ್ರಶ್ನೆ ಕೇಳಬಾರದಾ ಎಂದು ಪ್ರಶ್ನಿಸಿದರು.
ಅಮಿತ್ ಶಾ ಹಿಂದೆ ಕಾರ್ಯಕರ್ತರನ್ನ ಉದ್ದೇಶಿಸಿ ಹೇಳಿದ್ರು, ನಮ್ಮ ಸಾಮಾಜಿಕ ಜಾಲತಾಣದ ಕಾರ್ಯಕರ್ತರ ಸಾಮರ್ಥ್ಯದಿಂದ ಸತ್ಯವನ್ನ ಸುಳ್ಳು ಮಾಡಬಹುದು ಎಂದಿದ್ದರು, ಬಿಜೆಪಿಯವರು ಹತ್ತು ವರ್ಷದ ಹಿಂದೆ ಅಚ್ಚೇದಿನ್ ಕೊಡ್ತಿನಿ ಎಂದು ಬಂದಿದ್ರು, ಒಳ್ಳೆಯ ಸರ್ಕಾರ ಕೊಡುವ ಭರವಸೆ ಕೊಟ್ಟು ಬಂದಿರೊದು, ಆದ್ರೆ ಅಧಿಕಾರಕ್ಕೆ ಬಂದ ಮೇಲೆ ಏನ್ ಮಾಡಿದ್ದಾರೆ ಇವರು ಎಂದು ಪ್ರಶ್ನಿಸಿದರು.
ನಾವು ಭಾರತ್ ಜೋಡೊ‌ ಎನ್ನುತ್ತಿದ್ದೇವೆ, ಅವರು ತೋಡೊ ಅಂತಾರೆ ಅಷ್ಟೇ ಬಿಜೆಪಿ ಕಾಂಗ್ರೆಸ್ ಗೆ ವೆತ್ಯಾಸ ಎಂದರು. ಮಸಲ್, ಮನಿ, ಮಿಸ್ ಇನ್ಪಾರ್ಮೇಷನ್ ಚುನಾವಣೆಗೆ ಸಮಸ್ಯೆಯಾಗ್ತಿದೆ ಎಂದು ಚುನಾವಣಾ ಆಯೋಗವೇ ಹೇಳ್ತಿದೆ, ಸ್ವತಃ ಪ್ರಧಾನಿ ಕೂಡ ಮಿಸ್ ಇನ್ಫಾರ್ಮೇಶನ್ ಬಗ್ಗೆ ಮಾತಾಡಿದ್ದಾರೆ, ಬಿಜೆಪಿ ಐಟಿ ಸೆಲ್ ಬಂದ್ ಮಾಡಿದ್ರೆ ಮಿಸ್ ಇನ್ಫಾರ್ಮೇಶನ್ ಕಡಿಮೆ ಯಾಗುತ್ತೆ ಎಂದರು.
ಸಂಸದರು ಮೋದಿ ಹೆಸರನ್ನ ಹೇಳಿ ಮತ ಕೇಳ್ತಿದ್ದಾರೆ, ಅವರು ಏನ್ ಮಾಡಿದ್ದಾರೆ ಎನ್ನೋದು ಹೇಳ್ತಿಲ್ಲ, ಲೋಕಲ್ ಸಮಸ್ಯೆಗಳನ್ನ ನಾವು ಜನರ ಮುಂದಿಡಬೇಕು, ಮೋದಿ ಗ್ಯಾರಂಟಿ ಎಂದು ಅವರು ಹೇಳ್ತಿದ್ದಾರೆ, ಮೋದಿ‌ ಗ್ಯಾರಂಟಿಯಲ್ಲಿಯೂ ಕನ್ನಡಿಗ ಬೆವರಿನ‌ ಶ್ರಮವಿದೆ, ಜಲಜೀವನ್ ಮಿಷನ್ ಯೋಜನೆಯಲ್ಲಿಯೂ ನಮ್ಮದು 50% ಇದೆ ಎಂದರು.

More News