ಹೈದರಾಬಾದ್ : ವಿಭಿನ್ನ ಪಾತ್ರಗಳಲ್ಲಿ ಸೈ ಎನಿಸಿಕೊಂಡಿರುವ ಪ್ರತಿಭಾವಂತ ಕಲಾವಿದೆ ನಟಿ ಸಮಂತಾ(Samantha ruth prabhu). ಕೌಟುಂಬಿಕ ಸಿನೆಮಾಗಳಲ್ಲಿ ಹೆಚ್ಚಾಗಿ ನಟಿಸಿರುವ ಅವರನ್ನು ಅನೇಕರು ಮನೆ ಮಗಳಂತೆ ಪ್ರೀತಿಸುತ್ತಿದ್ದರು ಹಾಗೂ ಅಷ್ಟೇ ಖ್ಯಾತಿ ಪಡೆದಿದ್ದಾರೆ.
ಈಗಾಗಲೇ ಅವರು ನಟಿಸಿದ ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿಯಲ್ಲಿ ಅವರ ನಟನೆಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಈಗ ಅವರು ಈ ಹಿಂದಿಗಿಂತಲೂ ಹೆಚ್ಚು ಹೆಚ್ಚು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ.
ಪತಿ ನಾಗ ಚೈತನ್ಯ ಅವರೊಂದಿಗಿನ ದಾಂಪತ್ಯ ಅಂತ್ಯಗೊಂಡ ನಂತರ ಸಮಂತಾ ಚಲನಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದ್ದಕ್ಕಿಂತೆಯೇ ನಾಗಚೈತನ್ಯ ಮತ್ತು ಸಮಂತಾ ದಾಂಪತ್ಯದಲ್ಲಿನ ಬಿರುಕು ಅವರ ಅಭಿಮಾನಿಗಳಲ್ಲಿ ಸಾಕಷ್ಟು ನಿರಾಶೆಯನ್ನುಂಟು ಮಾಡಿತ್ತು. ಆದರೆ, ಅವರು ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡುವುದರ ಮೂಲಕ ಸುದ್ದಿಯಲ್ಲಿದ್ದಾರೆ.

ಅಂತರಾಷ್ಟ್ರೀಯ ಪ್ರಾಜೆಕ್ಟ್ ವೊಂದರಲ್ಲಿ ಬ್ರಿಟಿಷ್ ನಿರ್ದೇಶಕ ಫಿಲಿಪ್ ಜಾನ್ ಅವರ ಜೊತೆ ಕೆಲಸ ಮಾಡವುದಾಗಿ ಸಮಂತಾ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಜಾನ್ ಫಿಲಿಪ್ ಅವರ ನಿರ್ದೇಶನದ ಅರೇಂಜ್ ಮೆಂಟ್ಸ್ ಆಫ್ ಲವ್ ಸಿನೆಮಾದಲ್ಲಿ ಸಮಂತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಫಿಲಿಪ್ ಜಾನ್ ಅವರನ್ನು ತಬ್ಬಿಕೊಂಡಿರುವ ಫೋಟೋ ಸಮಂತಾ ಅಪ್ ಲೋಡ್ ಮಾಡುವುದರ ಜತೆಗೆ ಈ ಅವಕಾಶ ದೊರೆತಿರುವುದು ಸಂತಸ ತಂದಿದೆ ಎಂದು ಬರೆದಿದ್ದಾರೆ ಹಾಗೆಯೇ ಈ ಹಿಂದೆ ಸಮಂತಾ ನಟಿಸಿದ್ದ ಓಹ್ ಬೇಬಿ ಸಿನೆಮಾವನ್ನು ನಿರ್ಮಾಣ ಮಾಡಿದ್ದ ಗುರು ಫಿಲ್ಮ್ ಬ್ಯಾನರ್ ಮೂಲಕವೇ ಅರೇಂಜ್ ಮೆಂಟ್ಸ್ ಆಫ್ ಲವ್ ಸಿನೆಮಾ ತಯಾರಾಗುತ್ತಿದ್ದು, ನನ್ನನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದಿದ್ದಾರೆ.

‘ಇದು ನನಗೆ ಹೊಸ ಪ್ರಪಂಚ. ನಾನು 2009 ರಲ್ಲಿ ಕೊನೆ ಬಾರಿಗೆ ಆಡಿಷನ್ ನೀಡಿದ್ದೆ, ‘ಏ ಮಾಯ ಚೇಸಾವೆ’ ಚಿತ್ರಕ್ಕಾಗಿ. ಈಗ ಮತ್ತೆ 12 ವರ್ಷಗಳ ನಂತರ ಆಡಿಷನ್ ನೀಡಿದ್ದೇನೆ. ಸಾಕಷ್ಟು ನರ್ವಸ್ ಆಗಿದ್ದೆ, ಅಂತರರಾಷ್ಟ್ರೀಯ ಖ್ಯಾತಿಯ ಫಿಲಿಪ್ ಜಾನ್ ಜತೆ ಕೆಲಸ ಮಾಡುವುದು ತುಂಬಾ ಅಪರೂಪದ ಅವಕಾಶ,ಇದನ್ನು ಕಾತರದಿಂದ ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.




