ಕಾವೇರಿ ನದಿ ಸಂಗಮ-ಮೇಕೆದಾಟು ಬಳಿ ಡಿ.ಕೆ.ಶಿವಕುಮಾರ್ ಸುತ್ತಾಟ : ಜಾಲಿ ಮೂಡಲ್ಲಿ ಪೋಟೋ ಸೆಷನ್

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮೇಕೆದಾಟು ಹಾಗೂ ಸಂಗಮದಲ್ಲಿ ಬಳಿ ಕಾವೇರಿ ನದಿಯಲ್ಲಿ ದೋಣಿಯಲ್ಲಿ ವಿಹರಿಸಿ, ಅಲ್ಲಿಲ್ಲಿ ನಿಂತು ಪರಿಶೀಲನೆ ನಡೆಸಿ, ಪೋಟೋ ಸೆಷನ್ ನಡೆಸಿ ಸಂಭ್ರಮಿಸಿದರು.

ಜನವರಿ ತಿಂಗಳಲ್ಲಿ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡುವಂತೆ ಹಾಗೂ ರಾಜ್ಯ ಸರ್ಕಾರ ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ಮೇಕೆದಾಟುವಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಕೈಗೊಂಡಿದೆ.

ಇದರ ಭಾಗವಾಗಿ ಡಿ.ಕೆ.ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ತೆಪ್ಪದಲ್ಲಿ ಕುಳಿತು ಕೆಲಹೊತ್ತು ಸಂಭ್ರಮಿಸಿದರೆ. ನದಿ ಪಾತ್ರದ ಪ್ರದೇಶದಲ್ಲಿ ಸುತ್ತಾಡಿ ಪೋಟೋ ಸೆಷನ್ ನಡೆಸಿದ್ದಾರೆ. ಡಿ.ಕೆ.ಶಿವಕುಮಾರ್ ಹಾವ, ಭಾವ, ಸಂಭ್ರಮವು ವಿಡಿಯೋ ಮತ್ತು ಪೋಟೋಗಳಲ್ಲಿ ಸೆರೆಯಾಗಿದೆ.

ಮೇಕೆದಾಟು ಹೋರಾಟಕ್ಕೆ ಪೋಟೋ ಸೆಷನ್ ನಡೆಸಿ, ವಿಡಿಯೋ ಮತ್ತು ಪೊಟೋ ಶೂಟ್ ನಡೆಸಿದ ಬಳಿಕ ಜಾಗೃತಿ ಕಾರ್ಯಕ್ರಮ ರೂಪಿಸುವ ಡಿ.ಕೆ.ಶಿವಕುಮಾರ್ ಪ್ರಯತ್ನಕ್ಕೆ ಅವರ ಕ್ಯಾಮೆರಾ ಟೀಂ ಮಾಡಿದ ಎಡವಟ್ಟು  ಡಿ.ಕೆ.ಶಿವಕುಮಾರ್ ಭಾರೀ ಮುಜುಗರವನ್ನುಂಟು ಮಾಡಿದೆ.

More News