ನಾಗಮಂಗಲ: ಮಳೆಗಾಗಿ ನಾಗಮಂಗಲದಲ್ಲಿ ಈ ದಿನ ಕತ್ತೆಗಳಿಗೆ ಮದುವೆ ಮಾಡಿ ಮಳೆರಾಯನನ್ನ ನಾಗಮಂಗಲದ ರಾಜಭೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ಕಳೆದ ವರ್ಷದಂತೆ ಈ ವರ್ಷ ಮಳೆಯಾಗದೇ ಇದ್ದ ಕಾರಣ ನಾಗಮಂಗಲದ ರೈತ ವರ್ಗದವರು ಒಟ್ಟಿಗೆ ಸೇರಿ ಕತ್ತೆಗಳಿಗೆ ಮದುವೆ ಮಾಡುವುದರ ಮೂಲಕ ನಾಗಮಂಗಲದ ಪ್ರಮುಖ ಬೀದಿಯಲ್ಲಿ ಮಳೆರಾಯನ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಮನೆಯ ಜನತೆ ಬಿಂದಿಗೆಗಳಲ್ಲಿ ಮಳೆರಾಯನಿಗೆ ನೀರನ್ನು ಉಯ್ಯುವುದರ ಮೂಲಕ, ಬಾರೋ ಬಾರೋ ಮಳೆರಾಯ ಎಂದು ಮಳೆರಾಯನ ಕೂಗುತ್ತಾ ಸಾಗಿದರು. ಈ ಸಂದರ್ಭದಲ್ಲಿ ಮಾಜಿ ನಾಗಮಂಗಲ ಪಟ್ಟಣ ಪಂಚಾಯತಿ ಸದಸ್ಯರಾದ ರಾಮಕೃಷ್ಣರವರು, ಮಳೆರಾಯನನ್ನು ಹೊತ್ತು ಸಾಗಿದರು. ಜನರೆಲ್ಲರ ಬಿಂದಿಗೆ ಬಿಂದಿಗೆ ನೀರಿನ ಸುರುವಿಕೆಯಲ್ಲಿ ನೆನೆದರು. ಈ ಸಂದರ್ಭದಲ್ಲಿ ಮಕ್ಕಳೆಲ್ಲರೂ ಗ್ರಾಮದ ಜನತೆಗಳೆಲ್ಲರೂ ಕತ್ತೆ ಮದುವೆಯನ್ನು ನೋಡಿ ಸಂಭ್ರಮಿಸಿ ಮನೆಗಳಿಂದ ನೀರನ್ನು ತಂದು ಎರಚುವುದರ ಮೂಲಕ ಸಂಭ್ರಮಿಸಿದರು.. ಮಳೆಗಾಗಿ ನಾಗಮಂಗಲದಲ್ಲಿ ಈ ರೀತಿ ಮಳೆರಾಯನನ್ನು ಮಾಡಿಕೊಂಡು ಕತ್ತೆಗಳಿಗೆ ಮದುವೆ ಮಾಡಿ ಬೀದಿಗಳಲ್ಲಿ ಮೆರವಣಿಗೆ ಮಾಡುವ ಸಂಪ್ರದಾಯ ನಡೆದುಕೊಂಡು ಬಂದಿತ್ತು.
ನಾಗಮಂಗಲದಲ್ಲಿ ಜಿಡಿ ಮಳೆ ಆರಂಭ….
ಈ ದಿನ ನಾಗಮಂಗಲದಲ್ಲಿ ನಡೆದಂತಹ ಕತ್ತೆಗಳ ಮದುವೆ ಹಾಗೂ ಮಳೆರಾಯನ ಮೆರವಣಿಗೆಯಿಂದಾಗಿ ಸಂಜೆ ಸುಮಾರಿನಲ್ಲಿ ಮಳೆ ಪ್ರಾರಂಭವಾಗಿ ನಾಗಮಂಗಲ ಪಟ್ಟಣಕ್ಕೆ ತಂಪನ್ನು ಎರಚುವಂತಹ ವಾತಾವರಣ ಕಂಡುಬಂತು. ಇದರಿಂದ ಜನರು ಸಂತಸಗೊಂಡರು ನಾಗಮಂಗಲದ ಜನತೆ ಮಳೆರಾಯನ ನೆನೆದು ಈ ದಿನ ಮಾಡಿದ ಕತ್ತೆಗಳ ಮದುವೆ, ಮಳೆರಾಯನ ಮೆರವಣಿಗೆಯಿಂದ ಮಳೆಯ ತಂಪನ್ನೆರೆದು ಸಂತುಷ್ಟವಾಯಿತು. ಎಂದು ಆನಂದಗೊಂಡರು. ಕತ್ತೆಗಳ ಮೆರವಣಿಗೆ ನೇತೃತ್ವವನ್ನು ಮೇಗಲ ಕೇರಿಯ ಮಹದೇವು ಹಾಗೂ ಸಂಗಡಿಗರು ಸಡಗರದಿಂದ ನಡೆಸಿಕೊಟ್ಟರು.