ಬೆಂಗಳೂರು: ಮಳೆಯ ಅಭಾವದಿಂದಾಗಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮರಗಳು ಒಣಗಿ ಬುಡ ಸಮೇತ ಬೀಳುತ್ತಿದ್ದು, ಮರಗಳ ಹಸಿ ರೆಂಬೆಗಳು ಸಹ ಆಕಸ್ಮಿಕವಾಗಿ ಮುರಿದು ಬೀಳುತ್ತಿರುವುದು ವರದಿಯಾಗುತ್ತಿವೆ. ಇದರಿಂದ ಸಾರ್ವಜನಿಕರಿಗೆ ಹಾಗೂ ಆಸ್ತಿ ಪಾಸ್ತಿಗೆ ಹಾನಿಯಾಗುತ್ತಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಈಗಾಗಲೇ ರಸ್ತೆ ಬದಿ/ಸರ್ಕಾರಿ ಜಾಗಗಳಲ್ಲಿ ಒಣಗಿರುವ/ಅಪಾಯ ಸ್ಥಿತಿಯ ಮರಗಳು ಹಾಗೂ ಒಣಗಿರುವ ರೆಂಬೆ ಕೊಂಬೆಗಳನ್ನು ಅರಣ್ಯ ವಿಭಾಗದಿಂದ ತೆರವುಗೊಳಿಸುವ ಕಾರ್ಯವನ್ನು ನಿರ್ವಹಿಸಲಾಗುತ್ತಿದ್ದು, ಬೆಂಗಳೂರು ನಗರದ ಸಾರ್ವಜನಿಕರು ತಮ್ಮ ಪ್ರದೇಶಗಳಲ್ಲಿ ಒಣಗಿರುವ/ಅಪಾಯ ಸ್ಥಿತಿಯ ಮರಗಳು ಹಾಗೂ ಒಣಗಿರುವ ಅಪಾಯ ಸ್ಥಿತಿಯ ರೆಂಬೆಗಳು ಕಂಡುಬಂದರೆ ಬಿಬಿಎಂಪಿ ಅರಣ್ಯ ಇಲಾಖೆಯ ಈ ಕೆಳಕಂಡ ಅಧಿಕಾರಿಗಳಿಗಳಿಗೆ ದೂರವಾಣಿ ಮುಖೇನ (ವಾಟ್ಸ್ ಅಪ್ ಫೋಟೋ ಲಗತ್ತಿಸಿ) ಮಾಹಿತಿ ನೀಡಬಹುದಾಗಿದೆ.

ಪೂರ್ವ ವಲಯ: ತಿಮ್ಮಪ್ಪ- -9380090027
ಪಶ್ಚಿಮ ವಲಯ: ಶಿವರಾಮು-9449659252
ದಕ್ಷಿಣ ವಲಯ: ಹರೀಶ್ ಹೆಚ್.ಆರ್- 9480685039
ದಾಸರಹಳ್ಳಿ- ಚಂದ್ರಪ್ಪ-9164042566
ಬೊಮ್ಮನಹಳ್ಳಿ- ನರೇಂದ್ರ ಬಾಬು/ಮಹೇಶ್ ಜೆ.ಆರ್- 9580685399/9480685399
ಯಲಹಂಕ-ಚಂದ್ರಪ್ಪ.ವಿ/ ಮುತ್ತುರಾಜು-9164042566/9483139438
ರಾಜರಾಜೇಶ್ವರಿ ನಗರ-ಎಸ್.ಆರ್.ಕೃಷ್ಣ/ಜಗದೀಶ್-77606553545/9880516322
ಮಹದೇವಪುರ- ಪುಷ್ಪ ಎಂ/ಸುದರ್ಶನ್-8147276414/9480685541
ಈ ವಲಯಗಳ ಅರಣ್ಯಾಧಿಕಾರಿಗಳಿಗೆ ಸಾರ್ವಜನಿಕರು ಮಾಹಿತಿ ನೀಡಿ ಹಾನಿಯನ್ನು ತಪ್ಪಿಸಲು ಬಿಬಿಎಂಪಿ ಪ್ರಕಟಣೆ ಮೂಲಕ ಕೋರಿದೆ.