ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವಮಳೆಯ ಅಬ್ಬರ ಬಿರುಸುಪಡೆದುಕೊಂಡಿದೆ. ಕರಾವಳಿ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ರಾಜ್ಯದಲ್ಲಿ ಅತ್ಯಧಿಕ ಮಳೆ ಧರ್ಮಸ್ಥಳದಲ್ಲಿ ದಾಖಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಅತ್ಯಧಿಕ 15 ಸೆಂಟಿಮೀಟರ್ ಮಳೆಯಾಗಿದೆ. ಇಂದು ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆ ಆಗಿದೆ
ಕೇವಲ ದಕ್ಷಿಣ ಒಳನಾಡು ಮಾತ್ರವಲ್ಲ ಉತ್ತರ ಒಳನಾಡಿನಲ್ಲಿ ಕೂಡ ವ್ಯಾಪಕ ಮಳೆ ಸುರಿದಿದೆ. ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಳೆ ಆಗಿದೆ
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ 10 ಸೆಂಟಿಮೀಟರ್ ಮಳೆ ಸುರಿದಿದೆ.ದಾವಣಗೆರೆ ಜಿಲ್ಲೆಯಲ್ಲಿ 8 ಸೇಮಿ ಮಳೆ ಆಗಿದೆ ಗದಗ ಜಿಲ್ಲೆಯಲ್ಲಿ 7 cm ಮಳೆ ಆಗಿದೆ

ಹವಾಮಾನ ಮುನ್ಸೂಚನೆ
ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ.
ಕರಾವಳಿ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ
ಶಿವಮೊಗ್ಗ, ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರ, ಕೊಡಗು, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ಹಾಸನ ಜಿಲ್ಲೆಗಳಲ್ಲಿ ಯೆಲ್ಲೋ ಆರ್ಲಟ್ ಘೋಷಿಸಲಾಗಿದೆ.ಉತ್ತರ ಒಳನಾಡಿನಲ್ಲಿ ಹಗುರದಿಂದ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ
ಬೆಂಗಳೂರಿನಲ್ಲಿ ಹಗುರ ಮಳೆ ಮುನ್ಸೂಚನೆ

ಬೆಂಗಳೂರಿನಲ್ಲಿ ಇಂದಿನಿಂದ 23 ವರೆಗೆ ಹಗುರದಿಂದ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ 24ರಿಂದ ಬೆಂಗಳೂರಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ.
ಹವಾಮಾನ ಇಲಾಖೆ ತಜ್ಞ ಸಿ.ಎಸ್ ಪಾಟೀಲ್ ಈ ಮಾಹಿತಿ ನೀಡಿದ್ದಾರೆ.
ಕೋಲಾರದಲ್ಲಿ ಗುಡುಗು ಸಹಿತ ಮಳೆ

ರಾಜ್ಯದ ಕೋಲಾರ ಜಿಲ್ಲೆಯಲ್ಲಿ ಇಂದು ಗುಡುಗು ಸಹಿತ ಭಾರಿ ಮಳೆಯಾಗಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ವಾಹನ ಸವಾರರು ಪರದಾಡಿದರು.
ಜೋರು ಗಾಳಿ ಮಳೆಗೆ, ಟೊಮೆಟೊ ಹಾಗು ಮಾವು ಬೆಳೆಗೆ ಹಾನಿ ಸಂಭವಿಸಿದೆ
ಆನೇಕಲ್ ನಲ್ಲಿ ಜಿಟಿ ಜಿಟಿ ಮಳೆ
ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ಇಂದು ಕೂಡ ಮಳೆಯಾಗಿದೆ. ಜಿಟಿ ಜಿಟಿ ಮಳೆಯಾಗಿದೆ. ಆನೇಕಲ್, ಅತ್ತಿಬೆಲೆ, ಚಂದಾಪುರ ಮತ್ತು ಜಿಗಣಿ ಸುತ್ತಮುತ್ತ ಮಳೆ ಸುರಿದಿದೆ
ಕಡೂರಿನಲ್ಲಿ ವರುಣಾರ್ಭಟ

ಕಡೂರಿನಲ್ಲಿ ರಾತ್ರಿ ಸುರಿದ ವರುಣಾರ್ಭಟಕ್ಕೆ ಅವಾಂತರ ಸೃಷ್ಟಿಯಾಗಿದೆ. ಭಾರೀ ಮಳೆಗೆ ಕೆರೆಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ.
ಕೆರೆಯಲ್ಲಿ ನೀರು ಹೆಚ್ಚಾದ ಹಿನ್ನೆಲೆ ಕೆರೆಯ ಕಟ್ಟೆ ಒಡೆದು ಹೋಗಿದೆ. ಕಡೂರು ತಾಲೂಕಿನ ಪಿ.ಕೋಡಿಹಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ