ಶಾಸಕರ ಕೊಲೆ ಸಂಚು ಪ್ರಕರಣ: ಪ್ರಾಥಮಿಕ ತನಿಖೆ ಬಳಿಕ ಹೆಚ್ಚಿನ ತನಿಖೆಯ ಬಗ್ಗೆ ನಿರ್ಧಾರ: ಸಿಎಂ

ಬೆಂಗಳೂರು: ಕೊಲೆ ಸಂಚು ಆರೋಪದ ಹಿನ್ನೆಲೆಯಲ್ಲಿ ಇಂದು ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಗಂಭೀರ ಚರ್ಚೆ ನಡೆಸಿದರು.
ನಂತರ ಆರ್ ಟಿ ನಗರದ ಅವರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಪ್ರಕರಣ ಸಂಬಂಧ ಉನ್ನತ ಮಟ್ಟದ ತನಿಖೆಗೆ ನಡೆಸಲು ವಿಶ್ವನಾಥ್ ಅವರು ಆಗ್ರಹಿಸಿದ್ದಾರೆ. ಆದರೆ, ಪ್ರಾಥಮಿಕ ತನಿಖೆ ನಡೆಯುತ್ತಿದೆ, ಈ ತನಿಖೆಯಲ್ಲಿ ಸತ್ಯಾಂಶ ತಿಳಿದ ಬಳಿಕ ಮುಂದಿನ ತನಿಖೆಗೆ ವಹಿಸಲಾಗುವುದು ಎಂದ ಅವರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ತಮ್ಮದೇನು ಪಾತ್ರ ಇಲ್ಲ ಎಂದು ವಿಶ್ವನಾಥ್ ಸ್ಪಷ್ಟನೆ ನೀಡಿದ್ದಾರೆ, ಮೊದಲಿಂದಲೂ ನನ್ನ ವಿರುದ್ಧ ಸಂಚು ನಡೀತಿದೆ, ಈ ವಾರದಲ್ಲಿ ಕೊಲೆ ನಡೆಸುವ ಸ್ಕೆಚ್ ತನಕ ಅವರು ಹೋಗಿದ್ದಾರೆ, ತಮಗೆ ಭದ್ರತೆ ಬೇಕಾಗಿದೆ ಎಂದು ಮನವಿ ಮಾಡಿದ್ದಾರೆ ಎಂದು ಸಿಎಂ ವಿವರಿಸಿದರು.
ಈ ಪ್ರಕರಣ ಸಂಬಂಧ ಸಮಗ್ರ ತನಿಖೆಯಾಗಬೇಕು, ಇದರ ಹಿಂದೆ ಯಾರು ಇದ್ದಾರೆ ಅನ್ನೋದು ತಿಳಿಯಬೇಕು, ಈ ಹಿನ್ನೆಲೆಯಲ್ಲಿ ನಿಧಾನವಾದರೂ ಸರಿ ಸೂಕ್ತ ರೀತಿಯ ರೀತಿಯ ತನಿಖೆಯಾಗಬೇಕು ಎಂದು ವಿಶ್ವನಾಥ್ ಮುಖ್ಯಮಂತ್ರಿ ಅವರ ಬಳಿ ಒತ್ತಾಯಿಸಿದ್ದಾರೆ ಎಂದು ಅವರು ವಿವರಿಸಿದರು.

ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ, ಇದರಿಂದ ಸತ್ಯಾಂಶಹೊರಬರಲಿದೆ ಎಂದು ಹೇಳಿದರು.
ದೆಹಲಿಗೆ ತೆರಳಿದ ಮುಖ್ಯಮಂತ್ರಿ
ಕೇಂದ್ರ ಜಲಶಕ್ತಿ ಮತ್ತು ಆರೋಗ್ಯ ಸಚಿವರನ್ನು ಭೇಟಿ ಮಾಡಲು ನವದೆಹಲಿಗೆ ತೆರಳುತ್ತಿದ್ದೇನೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು. ಸಿಎಂ ಅವರ ಜತೆಯಲ್ಲಿಯೇ ಅವರ ಕಾರಿನಲ್ಲೇ ವಿಶ್ವನಾಥ್ ಹೊರಟರು. ಕೇಂದ್ರ ಸಚಿವರುಗಳ ಭೇಟಿ ನಂತರ ಇಂದು ಸಂಜೆಯೇ ಮುಖ್ಯಮಂತ್ರಿ ಅವರು ಬೆಂಗಳೂರಿಗೆ ವಾಪಾಸ್ಸಾಗಲಿದ್ದಾರೆ.

More News