ಬೆಂಗಳೂರು : ಚೆಲುವಿನ ಚಿತ್ತಾರದ ಬೆಡಗಿ ಅಮೂಲ್ಯ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಇನ್ನು ನಾವು ನಾವಿಬ್ಬರಲ್ಲ ಎಂದು ನಟಿ ಅಮೂಲ್ಯ ಅವರ ಪತಿ ಜಗದೀಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಮೂಲ್ಯ ಅವರ ಫೋಟೋ ಸಮೇತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಜಗದೀಶ್ ಅವರು ಸಿಹಿಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಂತೆ ಅವರಿಗೆ ಅನೇಕರು ಶುಭ ಕೋರಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಬಹಳ ಬ್ಯುಸಿ ನಟಿಯಾಗಿದ್ದ ಅಮೂಲ್ಯ ಇತ್ತೀಚಿನ ದಿನಗಳಲ್ಲಿ ಯಾವುದೇ ಹೊಸ ಸಿನೆಮಾಗಳನ್ನು ಒಪ್ಪಿಕೊಂಡಿರಲಿಲ್ಲ. ಕುಟುಂಬದ ಕಡೆ ಹೆತ್ತು ಗಮನ ನೀಡಿದ್ದ ಅವರು ಈಗ ತಾಯಿಯಾಗುತ್ತಿರುವ ಸುದ್ದಿ ತಿಳಿದು ಅವರ ಬೆಂಬಲಿಗರು ಖುಷಿಪಟ್ಟಿದ್ದು, ಅಮೂಲ್ಯ ಪತಿ ಟ್ಯಾಗ್ ಮಾಡಿರುವ ಫೋಟೋ ಸಾಕಷ್ಟು ವೈರಲ್ ಆಗಿದೆ.

ಬಾಲನಟಿಯಾಗಿ ಚಿತ್ರರಂಗಕ್ಕೆ ಆಗಮಿಸಿದ ಅಮೂಲ್ಯ ಅವರು, ಚೆಲುವಿನ ಚಿತ್ತಾರ ಚಿತ್ರದಲ್ಲಿ ಹಿರೋಯಿನ್ ಆಗಿದ್ದರು, ಇದು ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ಗಳಿಸಿದ ಸಿನೆಮಾವಾಗಿತ್ತು. ದುನಿಯಾ ವಿಜಯ್, ಗಣೇಶ್, ಯಶ್ ಸೇರಿದಂತೆ ಅನೇಕ ಸ್ಟಾರ್ ನಟರ ಜತೆ ಇವರು ಕೆಲಸ ಮಾಡಿದ್ದಾರೆ.
2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಅಮೂಲ್ಯ, ನಾನು ನನ್ನ ಕನಸು ಸಿನೆಮಾದಲ್ಲಿ ಬಹುಭಾಷಾ ಕಲಾವಿದ ಪ್ರಕಾಶ್ ರೈ ಜತೆ ತೆರೆಹಂಚಿಕೊಂಡು ಅತೀ ಜನಮನ್ನಣೆಯನ್ನು ಗಳಿಸಿದ್ದರು. ಮಾಸ್ತಿಗುಡಿ ಚಿತ್ರ ಅಮೂಲ್ಯ ಅವರ ಕೊನೆ ಚಿತ್ರವಾಗಿತ್ತು ನಂತರ ಅವರು ಚಿತ್ರದಲ್ಲಿ ನಟಿಸದೇ ಕುಟುಂಬದ ಕಡೆ ಹೆಚ್ಚು ಒತ್ತು ಕೊಟ್ಟಿದ್ದರು.




