ವಿಚಾರಣೆಗೆ ಹಾಜರಾದ ಶಾಸಕ ಎಸ್ ಆರ್ ವಿಶ್ವನಾಥ್ : ಪೊಲೀಸರಿಗೆ ದಾಖಲೆ ಹಸ್ತಾಂತರ

ಬೆಂಗಳೂರು : ಕೊಲೆ ಸಂಚು ಪ್ರಕರಣ ಸಂಬಂಧ ಇಂದು ಶಾಸಕ ಎಸ್ ಆರ್ ವಿಶ್ವನಾಥ್ ರಾಜಾನುಕಂಟೆ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿ ಮಾಹಿತಿ ಹಾಗೂ ದಾಖಲಾತಿಗಳನ್ನು ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ‌ಸಂಬಂಧಿಸಿದಂತೆ ಪೊಲೀಸರಿಗೆ ಪ್ರಕರಣದ ಸಂಬಂಧ ವಿಡಿಯೋ ಸೇರಿದಂತೆ ಹಲವು ದಾಖಲೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು. ಸುಮಾರು ಅರ್ಧ ಗಂಟೆ ನಡೆದ ವಿಚಾರಣೆಯಲ್ಲಿ ನಾನು ಶಾಸಕನಾದ ನಂತರ ಈ ರೀತಿ ಕುತಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.
ಯಲಹಂಕದ ಹೋಟೆಲ್‌ ಒಂದರಲ್ಲಿ ನಾಲ್ವರು ಶಾರ್ಫ್ ಶೂಟರ್ ಅವರು ತಂಗಿದ್ದರು, ವಿಡಿಯೋದಲ್ಲಿ ಈ ಆರೋಪಿಗಳು ಚರ್ಚಿಸಿದ್ದಾರೆ, ಈ ಎಲ್ಲಾ‌ ಮಾಹಿತಿ ಆಧರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ ಎಂದು ವಿಶ್ವನಾಥ್ ತಿಳಿಸಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಡಿವೈಎಸ್ ಪಿ
ಕೊಲೆ ಸಂಚು ಪ್ರಕರಣವನ್ನು ದೊಡ್ಡ ಬಳ್ಳಾಪುರ ಡಿವೈಎಸ್ಪಿ ನಾಗರಾಜ್ ಅವರಿಂದ ತನಿಖೆ ನಡೆಸಲು ದೊಡ್ಡಬಳ್ಳಾಪುರ ಎಸ್ಪಿ ವಂಶಿಕೃಷ್ಣ ಅವರು ಆದೇಶಿಸಿದ್ದಾರೆ.
ಈ ಮಧ್ಯೆ, ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣನಿಗೆ ರಾಜಾನುಕುಂಟೆ‌ ಪೊಲೀಸರಿಂದ ಇಂದು ನೋಟಿಸ್ ನೀಡುವ ಸಾಧ್ಯತೆಗಳಿದ್ದು, ಇಂದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟೀಸ್ ಜಾರಿ ಮಾಡುವ ಸಾಧ್ಯತೆಗಳಿವೆ.

More News