PETROL DIESEL PRICE HIKE: ಪೆಟ್ರೋಲ್- ಡಿಸೇಲ್ ದರ ಏರಿಕೆ; ಜನರ ಜೇಬಿಗೆ ಕತ್ತರಿ ಹಾಕಿದ ರಾಜ್ಯ ಸರ್ಕಾರ; ಉಗ್ರವಾದ ಹೋರಾಟ ಮಾಡ್ತೆವೆ ಕೇಂದ್ರ ಸಚಿವ ಜೋಶಿ ಎಚ್ಚರಿಕೆ

ಹುಬ್ಬಳ್ಳಿ: ರಾಜ್ಯ ಸರ್ಕಾರ ಮುಂದಾಲೋಚನೆ ಇಲ್ಲದೇ ಐದು ಗ್ಯಾರಂಟಿ ಘೋಷಣೆ ಮಾಡಲಾಗಿತ್ತು. ಈಗ ಆರ್ಥಿಕ ಹೊರೆ ತಡೆಯಲು ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಮಾಡಿದ್ದಾರೆ. ರಾಜ್ಯ ಸರ್ಕಾರ ಗ್ಯಾರಂಟಿಗಾಗಿ ಖಜಾನೆಯಿಂದ ದುಡ್ಡು ಖರ್ಚು ಮಾಡಲಾಗ್ತಿದೆ. ದಿನನಿತ್ಯದ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ.
ಗ್ಯಾರೆಂಟಿಯಿಂದ ಉಚಿತ ಕೊಡ್ತೇವೆ ಅಂತಾ ದರ ಏರಿಕೆ ಮಾಡಿ ಜನಸಾಮಾನ್ಯರ ಜೇಬಿಗೆ ಹೊರೆ ಆಗಿದೆ. ಜಾಗತಿಕ ಯುದ್ಧ, ತೀವ್ರ ಬರಗಾಲದಿಂದ ಸಂಕಷ್ಟ ಎದರುಸುತಿದ್ದಾರೆ ಇದರ ಮಧ್ಯ ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡ್ತಿದೆಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿ ಕಾರಿದರು.

ಇನ್ನು ಅನೇಕ ಕಡೆ ಬೆಳೆಗಳು ಸರಿಯಾಗಿ ಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬೆಲೆ ನಿಯಂತ್ರಣಕ್ಕೆ ಮುಂದಾಯಿತು. ಸರಿಯಾದ ರೀತಿಯಲ್ಲಿ ಪೂರೈಕೆ ಇರದ ಕಾರಣ ಆಹಾರ ಧಾನ್ಯ ಸಿಗಲಿಲ್ಲ ಈಗಲೂ ಸಿಗತಾ ಇಲ್ಲ.
ನೈಸರ್ಗಿಕವಾಗಿ ಅದು ಆಗಿದ್ದು. ಇನ್ನು ಮಾನವ ನಿರ್ಮಿತವಾದ ಪೆಟ್ರೋಲ್ ಡಿಸೈಲ್ ಬೆಲೆ ಜಾಸ್ತಿ ಮಾಡತಾ ಇದ್ದಾರೆ.
ಹಾಗಾದಾರೇ ಏನು ಗ್ಯಾರಂಟಿ ಕೊಟ್ಟಿರಿ.
ಈಗ ಪೆಟ್ರೋಲ್ ಮೂರುವರೆ ರೂಪಾಯಿ ಜಾಸ್ತಿ ಮಾಡಿದಿರಿ, ಇದರಿಂದ ಬಸ್ ದರ, ಹಾಲಿನ ದರ, ಅಕ್ಕಿ, ಎಲ್ಲವೋ ಹೆಚ್ಚಾಗುತ್ತದೆ. ಸರ್ಕಾರದ ಬಡ ವಿರೋಧ ನೀತಿ ವಿರೋಧಿಸುತ್ತೇನೆ. ಇನ್ನೊಂದು ಸಂಗತಿ ಎಂದರೆ ಗ್ಯಾರಂಟಿ ಗ್ಯಾರಂಟಿ ಎಂದರು ಜನರು ತಿರಸ್ಕಾರ ಮಾಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸಿದ್ದಾರೆ. ದ್ವೇಷ ಸಾಧಿಸುವುದಿಂದಲೇ ಈ ರೀತಿ ಬೆಲೆ ಏರಿಕೆ ಮಾಡಿದ್ದಾರೆ.
ಜನಸಾಮಾನ್ಯರ ಮೇಲೆ ಹಗೆ ತೀರಿಸಿಕೊಳ್ಳಲು ಇದಾಗಿದೆ. ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಸಿದುಕೊಂಡಿದ್ದಾರೆ. ರಾಜ್ಯ ಸರ್ಕಾರದ ಹಿಂದೆ ಬೆಲೆ ಏರಿಕೆ ವಿರುದ್ಧ ಶವ ಯಾತ್ರೆ ಮಾಡಿದ್ದರು. ನಾವು ಕಾಂಗ್ರೆಸ್ ಸರಕಾರದ ವಿರುದ್ಧ ಉಗ್ರ ಸ್ವರೂಪದ ಹೋರಾಟ ಮಾಡಲಾಗುವುದು ಎಂದರು.

More News