ಶ್ರೀಮುರುಳಿ ನಟನೆಯ ಮದಗಜ ರಿಲೀಸ್: ಮೊದಲ ದಿನ ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್

ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ಶ್ರೀಮುರುಳಿ ನಟಿಸಿರುವ ಮದಗಜ ಸಿನೆಮಾ ಇಂದು ರಿಲೀಸ್ ಆಗಿದೆ. ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುವ ಚಿತ್ರತಂಡ ರಿಲೀಸ್ ಮಾಡಿದ ಸಿನೆಮಾಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಯೋಗ್ಯ ಚಲನಚಿತ್ರದ ಮೂಲಕ ತಮ್ಮ ಖ್ಯಾತಿಯನ್ನು ಇಮ್ಮಡಿಗೊಳಿಸಿದ್ದ ನಿರ್ದೇಶಕ ಮಹೇಶ್ ಕುಮಾರ್ ಅವರ ನಿರ್ದೇಶನದಲ್ಲಿ ಮದಗಜ ಸಿನೆಮಾ ಮೂಡಿಬಂದಿದೆ. ಶ್ರೀಮುರುಳಿ ಭರಾಟೆ ಸಿನೆಮಾದ ಬಳಿಕ ಮದಗಜ ಚಿತ್ರವನ್ನು ಒಪ್ಪಿಕೊಂಡಿದ್ದರು.
ಮದಗಜ ಸಿನೆಮಾ ಸೆಟ್ಟೇರಿದ ದಿನದಿಂದ ಬಹಳಷ್ಟು ಕ್ರೇಜ್ ಹುಟ್ಟುಹಾಕಿತ್ತು. ಜತೆಗೆ ನಾಯಕ ಶ್ರೀಮುರುಳಿ ಅವರೊಂದಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಟ್ಯೂನ್ ನಲ್ಲಿ ಮೂಡಿಬಂದಿರುವ ಹಾಡುಗಳು ಪ್ರೇಕ್ಷಕರ ಮನಸೆಳೆದಿವೆ.


ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜಗಪತಿ ಬಾಬು ಅವರ ಎಂದಿನ ಅಬ್ಬರ ಚಿತ್ರದಲ್ಲಿ ಉತ್ತಮವಾಗಿ ಮೂಡಿಬಂದಿದೆ. ಹಾಗೆಯೇ ಶಿವರಾಜ್ ಕೆ ಆರ್ ಪೇಟೆ ಮತ್ತು ಚಿಕ್ಕಣ್ಣ ಅವರ ಕಾಮಿಡಿ ಪ್ರೇಕ್ಷಕರನ್ನು ನಗಿಸುವಲ್ಲಿ ಯಶಸ್ವಿಯಾಗಿದೆ.
ಒಟ್ಟಿನಲ್ಲಿ ಮದಗಜ ಚಿತ್ರಮಂದಿರಗಳಲ್ಲಿ ಲಗ್ಗೆ ಇಟ್ಟಿದ್ದು, ಪ್ರೇಕ್ಷಕರು ಯಾವ ರೀತಿ ಸ್ವೀಕರಿಸಲಿದ್ದಾರೆ ಅನ್ನೋದು ಕಾದು ನೋಡಬೇಕಾಗಿದೆ.

More News