ಆಂಧ್ರದ ಮಾಜಿ ಸಿಎಂ, ಕರ್ನಾಟಕದ ಮಾಜಿ ರಾಜ್ಯಪಾಲ ಕೆ ರೋಸಯ್ಯ ನಿಧನ

ಆಂಧ್ರಪ್ರದೇಶ : ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಕರ್ನಾಟಕದ ಮಾಜಿ ರಾಜ್ಯಪಾಲರಾಗಿದ್ದ ಕೆ ರೋಸಯ್ಯ ಇಂದು ಬೆಳಗ್ಗಿನ ಜಾವ ನಿಧನ ಹೊಂದಿದ್ದಾರೆ. 88 ವರ್ಷ ವಯಸ್ಸಿನ ಅವರು ಕೆಲವು ವಯೋ ಸಹಜ ಕಾಯಿಲೆಯಿಂದ ಕಳೆದ ಹಲವಾರು ದಿನಗಳಿಂದ ಬಳಲುತ್ತಿದ್ದರು.
ಬಂಜಾರಹಿಲ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಕೊನೆಯುಸಿರು ಎಳೆದಿದ್ದಾರೆ. ಕೆ ರೋಸಯ್ಯಅವರು ಕಾಂಗ್ರೆಸ್ ನ ಹಿರಿಯ ನಾಯಕರಾಗಿದ್ದು, ಎಂಎಲ್ ಸಿಯಾಗಿ 1964ರಲ್ಲಿ ವಿಧಾನಪರಿಷತ್ ಗೆ ಆಗಮಿಸಿ ಮುಖ್ಯಮಂತ್ರಿಯಾಗಿದ್ಗರು.
ಅವಿಭಜಿತ ಆಂಧ್ರಪ್ರದೇಶದ ಹಣಕಾಸು ಸಚಿವರಾಗಿ ಅವರು ಏಳು ಬಾರಿ ಬಜೆಟ್ ಮಂಡನೆ ಮಾಡಿದ ದಾಖಲೆ ಮಾಡಿದ್ದರು. ಅಂದಿನ ಮುಖ್ಯಮಂತ್ರಿ ವೈ ಎಸ್ ರಾಜಶೇಖರ ರೆಡ್ಡಿ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಅವರು ಮುಖ್ಯಮಂತ್ರಿಯಾಗಿದ್ದರು.
1933ರ ಜುಲೈ 4 ರಂದು ಆಂಧ್ರದ ಗುಂಟೂರು ಜಿಲ್ಲೆಯ ಮೆಮೂರಿನಲ್ಲಿ ಜನಿಸಿದ್ದರು. ಗುಂಟೂರಿನಲ್ಲಿಯೇ ಅವರು ವಾಣಿಜ್ಯ ಪದವಿ ಪಡೆದಿದ್ದರು.

More News