ಬೆಂಗಳೂರು: ಒಮಿಕ್ರಾನ್ ರೂಪಾಂತರಿಯಿಂದ ಮೂರನೇ ಅಲೆ ಭೀತಿ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ನೋಡೆಲ್ ಅಧಿಕಾರಿಗಳ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ರೂಪಾಂತರಿ ಒಮಿಕ್ರಾನ್ ವೈರಾಣು ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ತಿಳಿಸಲಾಗಿತ್ತು.ಈ ಸಂಬಂಧ ಇನ್ನೂ ಹೆಚ್ಚಿನ ನಿಗಾವಣೆ ಮತ್ತು ಸಮರ್ಥ ರೀತಿಯಲ್ಲಿ ಮೇಲುಸ್ತುವಾರಿ ಮಾಡಲು ಉನ್ನತ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ.ಈ ಸಂಬಂಧ 7 ಐಎಎಸ್ ಅಧಿಕಾರಿಗಳ ತಂಡ ರಚಿಸಿ ವಿವಿಧ ವಿಭಾಗಗಳಿಗೆ ನೋಡೆಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ.
ಮುನೀಶ್ ಮೌದ್ಗಿಲ್- ರಾಜ್ಯ ವಾರ್ ರೂಂ & ಲಿಕ್ವಿಡ್ ಆಕ್ಸಿಜನ್ ಪೂರೈಕೆ ವಿಭಾಗದ ನೋಡೆಲ್ ಅಧಿಕಾರಿ
ಪಂಕಜ್ ಕುಮಾರ್ ಪಾಂಡೆ- ಹೋಮ್ ಐಸೋಲೇಷನ್ ನಿರೀಕ್ಷಣಾ ನೋಡೆಲ್ ಅಧಿಕಾರಿ
ಎಂ. ಶೀಖಾ- ವಿದೇಶದಿಂದ ಬರುವ ಪ್ರಯಾಣಿಕರ ಟ್ರ್ಯಾಕಿಂಗ್ ಮತ್ತು ಸ್ಕ್ರೀನಿಂಗ್ ನೋಡೆಲ್ ಅಧಿಕಾರಿ
ಪ್ರತಾಪ್ ರೆಡ್ಡಿ ಮತ್ತು ಗುಂಜನ್ ಕೃಷ್ಣ- ಆಕ್ಸಿಜನ್ ಸರಬರಾಜು
ಶಿಲ್ಪಾನಾಗ್- ನೋಡೆಲ್ ಅಧಿಕಾರಿಗಳ ನಿರೀಕ್ಷಕರು, ರಾಜ್ಯ ನಿರೀಕ್ಷಕರ ಘಟಕ
ಕುಮಾರ್ ಪುಷ್ಕರ್- ಬೆಡ್ ಮ್ಯಾನೇಜ್ಮೆಂಟ್ ಸಿಸ್ಟಮ್ ನೋಡೆಲ್ ಅಧಿಕಾರಿ
ಎಂ.ಟಿ ರೇಜು- ಮೆಡಿಸಿನ್ ನೋಡೆಲ್ ಅಧಿಕಾರಿ




