HK PATIL ON BJP-JDS PROTEST: ವಿರೋಧ ಪಕ್ಷಗಳ ಧರಣಿ ನಾಟಕವಷ್ಟೆ- ಹೆಚ್ ಕೆ ಪಾಟೀಲ್

ಬೆಂಗಳೂರು- ಇಂದು ವಿಧಾನಸೌಧದಲ್ಲಿ ಕಾನೂನು, ಸಂಸದೀಯ ಮತ್ತು ಪ್ರವಾಸೋದ್ಯಮ ಸಚಿವರಾದ ಹೆಚ್ ಕೆ ಪಾಟೀಲ್, ವಿಪಕ್ಷಗಳ ಧರಣಿ ಕುರಿತು ಅಸಮಾಧಾನ ವ್ಯಕ್ತ ಪಡಿಸಿದರು. ಈ ಬಗ್ಗೆ ಮಾತನಾಡಿದ ಅವರು, ನಿನ್ನೆ ಪ್ರತಿಪಕ್ಷದವರು ಅಹೋರಾತ್ರಿ ಧರಣಿ ಮಾಡಿದ್ದಾರೆ. ನಿಲುವಳಿ ಪ್ರಸ್ತಾಪ ಯಾಕೆ ಮಾಡಬಾರದು ಎನ್ನೊದನ್ನ ವಿವರಿಸಿದ್ದಾರೆ. ಇಷ್ಟೆಲ್ಲ ಇದ್ರೂ ಅವರು ಧರಣಿ ಮಾಡಿದ್ದಾರೆ. ರಾಜಕೀಯ ತಂತ್ರಕ್ಕೆ ಅವರು ವಿಧಾನಸಭಾ ಅಧಿವೇಶನ ಉಪಯೋಗ ಮಾಡಿಕೊಂಡಿದ್ದಾರೆ. ಈಗಾಗ ಈ ತನಿಖೆಯನ್ನ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶೃ ಮೂಲಕ ಮಾಡಲಾಗುತ್ತಿದೆ. ಆಪಾದನೆ ಅವರ ಮೇಲಿದ್ರೂ ಸಿಎಂ ತನಿಖೆಗೆ ಆಯೋಗ ರಚಿಸಿದ್ದಾರೆ. ತನ್ನ ಮೇಲೆ ಆಪಾದನೆ ಇದ್ದಾಗ ಯಾರಾದರೂ ಒಬ್ಬ ಮುಖ್ಯಮಂತ್ರಿ ತನಿಖಾ‌ ಆಯೋಗ ರಚಿಸಿರೋ‌ ಉದಾಹಣೆ ಇದೆಯಾ.. ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ ಬೋಮ್ಮಾಯಿ ಆಯೋಗ ರಚನೆ ಮಾಡಿದ್ರಾ..? ವಿರೋಧ ಪಕ್ಷ ಸಿಎಂ ನಿಲುವನ್ನ ಪ್ರಶಂಸೆ ಮಾಡಬೇಕಿತ್ತು. ಇದು ಕೇವಲ ರಾಜಕೀಯ ನಾಟಕ ಅಷ್ಟೆ. ಉತ್ತರ ಕನ್ನಡದಲ್ಲಿ ಮಲೆನಾಡಲ್ಲಿ ಸಾಕಷ್ಟು ಅನಾಹುತ ಆಗಿದೆ
ಆದರೆ ಇದರ ಬಗ್ಗೆ ಚರ್ಚೆ ಮಾಡಿಲ್ಲ. ಒನ್ ನೇಷನ್ ಒನ್ ಎಲೆಕ್ಷನ್ ವಿಚಾರದ ಬಿಲ್ ಇದೆ. ನೀಟ್ ವಿರೋಧಿಸಿ ಸಿಇಟಿ ಮರು ಸ್ಥಾಪಿಸುವ ಬಿಲ್ ಇದೆ.ಹತ್ತಾರು ಜನರ ಪರವಾದ ಬಿಲ್ ಬಗ್ಗೆ ಮಾತನಾಡ್ತಿಲ್ಲ. ವಿಪಕ್ಷಗಳ ಧರಣಿ ಕೇವಲ ರಾಜಕೀಯ ಡ್ರಾಮ ಅಷ್ಟೇ ಎಂದರು

More News

You cannot copy content of this page