HUBLI GANJA SELLERS ARREST: ಕಮರಿಪೇಟ ಪೊಲೀಸ್ ಕಾರ್ಯಾಚರಣೆ: ನಾಲ್ವರು ಗಾಂಜಾ ಮಾರಾಟಗಾರರ ಬಂಧನ..!

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಗಾಂಜಾ ಘಾಟು ಜೋರಾಗಿದೆ. ಗಾಂಜಾ ಪ್ರಕರಣ ಮಟ್ಟ ಹಾಕಲು ಪೊಲೀಸ್ ಕಮೀಷನರೇಟ್ ದಿಟ್ಟ ನಿರ್ಧಾರ ಮಾಡಿದ್ದು, ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ಕು ಜನ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಕಮರಿಪೇಟ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುನೀಲ್ ಎಂ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಖಾಕಿ ಟೀಮ್ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ 232 ಗ್ರಾಂ ಗಾಂಜಾ ಹಾಗೂ 1000 ರೂಪಾಯಿ ನಗದು, ಎರಡು ಮೊಬೈಲ್ ಸೇರಿ ಒಟ್ಟು 6700 ರೂಪಾಯಿ ಮೌಲ್ಯದ ವಸ್ತುಗಳ ವಶಕ್ಕೆ ಪಡೆದಿದ್ದಾರೆ.

ಕಮರಿಪೇಟ ಮುಖ್ಯ ರಸ್ತೆಯಿಂದ ಮೂರು ಸಾವಿರಮಠಕ್ಕೆ ಹೋಗುವ ಸಾರ್ವಜನಿಕ ರಸ್ತೆಯ ಮೇಲೆ ಗಾಂಜಾ ಮಾರಾಟ ಮಾಡುತ್ತಿದ್ದರು ಎಂಬುವಂತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಹುಬ್ಬಳ್ಳಿ ಕಮರಿಪೇಟ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಇರ್ಫಾನ ಮಹ್ಮದಸಲಿಂ ಬಹ್ಮರವಾಲೆ, ಆಶೀಫ್ ರಫೀಕ ಬಿಜಾಪೂರ, ಸಲ್ಮಾನ ಬಾಬರ ತೇಕಬರಾನ್, ಆಸ್ಪಾಕ ರಿಯಾಜಅಹೃದ ಫೀರಜಾದೆ ಬಂಧಿತ ಆರೋಪಿಗಳಾಗಿದ್ದು, ಪಿಎಸ್ಐ ಸುನೀಲ್ ಎಂ ಆ್ಯಂಡ್ ಟೀಮ್ ಕಾರ್ಯಕ್ಕೆ ಪೊಲೀಸ್ ಆಯುಕ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

More News

You cannot copy content of this page