BAGINA TO KABINI DAM: ಸಂಕಷ್ಟ ಕಾಲದಲ್ಲಿ ಕಾಪಾಡಿದ ಕಬಿನಿಗೆ ಕೋಟಿ ವಂದನೆಗಳು: ಡಿಸಿಎಂ ಡಿಕೆ ಶಿವಕುಮಾರ್

ಎಚ್.ಡಿ. ಕೋಟೆ: “ಸಂಕಷ್ಟ ಕಾಲದಲ್ಲಿ ನಮ್ಮನ್ನು ಕಾಪಾಡಿದ ಕಪಿಲಾ ನದಿಗೆ ನಮ್ಮೆಲ್ಲರ ನಮನಗಳು. ಈ ನದಿ ನಮ್ಮ ಗೌರವ ಉಳಿಸಿದೆ” ಎಂದು ಹೇಳಿದರು.

ಕಬಿನಿ ಅಣೆಕಟ್ಟಿಗೆ ಬಾಗಿನ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು “ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿಲ್ಲದೆ ಇದ್ದಾಗ, ಕಾವೇರಿ ನೀರು ಹರಿಸಬೇಕು ಎನ್ನುವ ತೀರ್ಪು ಬಂದಾಗ, ಎಲ್ಲ ಸಂಕಷ್ಟ ಕಾಲದಲ್ಲೂ ಕಪಿಲಾ ನದಿಯಿಂದ ನೀರು ಹರಿಸಲಾಗಿದೆ” ಎಂದರು.

ಕಳೆದ ವರ್ಷ ಕಬಿನಿಯಲ್ಲಿ ನೀರಿರಲಿಲ್ಲ. ಈ ಬಾರಿ ಮೈತುಂಬಿ ಹರಿಯುತ್ತಿದೆ. ಕಪಿಲಾ ನದಿಗೆ ನಮ್ಮಿಂದ ಹಾಗೂ ಸರ್ಕಾರದಿಂದ ಕೋಟಿ ಕೋಟಿ ನಮನಗಳು” ಎಂದು ಸಂತಸ ವ್ಯಕ್ತಪಡಿಸಿದರು.

More News