ಖಾಸಗಿ ಅಂಗ ಪ್ರದರ್ಶನ ಮಾಡಿದ ನಟಿಗೆ ಚಿತ್ರರಂಗ ತೊರೆಯಲು ಸೂಚಿಸಿದ ತಾಯಿ

ಚಿತ್ರರಂಗದಲ್ಲಿ ಫೇಮಸ್ ಆಗಲು ಅನೇಕರು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಕೆಲವು ನಟಿಯರಂತೂ ಕೇವಲ ಫೋಟೋ ಶೂಟ್ ಗಾಗಿ ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡುತ್ತಾರೆ. ನಾನಾ ರೀತಿಯ ಬಟ್ಟೆ, ಅನೇಕ ರೀತಿಯ ಹಾವಭಾವಗಳನ್ನು ಪ್ರದರ್ಶಿಸಿ, ಮಿಂಚಲು ಯತ್ನಿಸುತ್ತಾರೆ. ಈ ಫೋಟೋ ಶೂಟ್ ನಿಂದಲೇ ಅನೇಕರು ಚಿತ್ರರಂಗ ಪ್ರವೇಶ ಮಾಡಿದ್ದಾರೆ.
ಆದರೆ, ನಟಿ ಪಾಯಲ್ ರಜಪೂತ್ ಅವರು ಫೋಟೋ ಶೂಟ್ ವೇಳೆ ಮುಜುಗರ ಅನುಭವಿಸುವಂತಾಗಿರುವ ಘಟನೆ ನಡೆದಿದೆ. ಅವರು ಧರಿಸಿದ್ದ ಬಟ್ಟೆಯೇ ಅವರಿಗೆ ಮುಳುವಾಗಿ ಪರಿಣಮಿಸಿತ್ತು. ಆದ್ದರಿಂದ ಅವರು ಈ ವಿಚಾರದಲ್ಲಿ ಸಾಕಷ್ಟು ಟೀಕೆಗಳನ್ನು ಕೇಳುವಂತಾಗಿದೆ. ನಟಿ ತಾಯಿಯಿಂದಲೇ ನಿಂದನೆಗೆ ಒಳಗಾದ ಘಟನೆ ನಡೆದಿದೆ.


ಕಡು ಹಳದಿ ಬಣ್ಣದ ಬಟ್ಟೆಯನ್ನು ಧರಿಸಿದ್ದ ಪಾಯಲ್ ಇತ್ತೀಚೆಗೆ ಅದರ ಫೋಟ್ ಶೂಟ್ ನಡೆಸಿದ್ದರು. ಶೂಟ್ ವೇಳೆ ಅವರು ಧರಿಸಿದ್ದ ಕೋಟ್ ಗೆ ಬಟನ್ ಹಾಕಿರಲಿಲ್ಲ. ಇದರಿಂದ ಅವರ ಖಾಸಗಿ ಅಂಗಾಂಗ ಪ್ರದರ್ಶನಗೊಂಡಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.


ಟ್ರೋಲಿಗರು ಈ ವಿಡಿಯೋಗೆ ಕೆಟ್ಟದಾಗಿ ಕಮಂಟ್ ಮಾಡಿದ್ದರು. ಇದನ್ನು ಗಮನಿಸಿದ ಪಾಯಲ್ ಅವರ ತಾಯಿ ಮಗಳನ್ನು ಕರೆದು ಬುದ್ದಿವಾದ ಹೇಳಿದ್ದಾರೆ. ಈ ವಿಡಿಯೋವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ, ಚಿತ್ರರಂಗ ತೊರೆದು ಮನೆಗೆ ಬರುವಂತೆ ಸೂಚನೆ ನೀಡಿದ್ದಾರೆ.

ಇದಕ್ಕೆ ಪಾಯಲ್ ಒಪ್ಪಿಲ್ಲ ಬದಲಾಗಿ ತಾಯಿಯ ಮನವೊಲಿಸುವ ಕೆಲಸ ಮಾಡಿದ್ದಾರೆ. ಇದಕ್ಕೆ ಒಪ್ಪಿರುವ ತಾಯಿ ಮುಂಬರುವ ದಿನಗಳಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ ಎಂದು ಪಾಯಲ್ ರಜಪೂತ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

More News