CONGRESS JANANDOLANA: ಅಭಿವೃದ್ಧಿ ಹರಿಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಜೊತೆಗೆ ನಾವಿದ್ದೇವೆ: ಸಚಿವ ಮುನಿಯಪ್ಪ

ಮೈಸೂರು: ಭ್ರಷ್ಟ ಬಿಜೆಪಿ ಹಾಗೂ ಜೆಡಿಎಸ್ ಪಾಪ ಪೀಡಿತರ ಯಾತ್ರೆ ವಿರುದ್ದ ಬೃಹತ್ ಜನಾಂದೋಲನ ಸಮಾವೇಶದಲ್ಲಿ ಮಾನ್ಯ ಆಹಾರ ನಾಗರಿಕ ಸರಬರಾಜು ಮಾತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ನವರು ಭಾಗವಹಿಸಿ ಮಾತನಾಡಿದರು.

ಇಂದು ಮೈಸೂರು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಸಚಿವರು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಈ ರಾಜ್ಯದ ಜನ ಸ್ಪಷ್ಟವಾದ ಬಹುಮತವನ್ನು ನೀಡುವುದರ ಮೂಲಕ ನಮ್ಮ ಸರ್ಕಾರ ಜನಪರವಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡುತ್ತಿದ್ದೇವೆ

ನಾವು ಘೋಷಣೆ ಮಾಡಿದ ಐದು ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ರಚಸಿದ 100 ದಿನಗಳ ಒಳಗೆ ಈಡೇರಿಸಿದ್ದೇವೆ.

ಈ ಯೋಜನೆಗಳನ್ನು ಅನುಷ್ಠಾನ ಮಾಡುವ ಸಂದರ್ಭದಲ್ಲಿ ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ,ರಾಹುಲ್ ಗಾಂಧಿ,ಪ್ರಿಯಾಂಕ ಗಾಂಧಿ,ವೇಣುಗೋಪಾಲ, ಸುರ್ಜೇವಾಲ ರವರ ನೇತೃತ್ವದಲ್ಲಿ ರಾಜ್ಯದ ಜನತೆಗಾಗಿ ಅನುಷ್ಠಾನ ಮಾಡಿದ್ದೇವೆ.

ಈ ಯೋಜನೆಗಳು ರಾಜ್ಯದ 4.50 ಕೋಟಿ ಜನರಿಗೆ ತಲುಪಿದ್ದಾವೆ ಮುಖ್ಯಮಂತ್ರಿಗಳು ಬೆಳಗಾವಿ ಅಧಿವೇಶನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಕ್ಕೆ ಆಯವ್ಯಯ ದಲ್ಲಿ ಸುಮಾರು 24 % ರಷ್ಟು ಅನುದಾನವನ್ನು ಮೀಸಲಿಟ್ಟು
ಅಭಿವೃದ್ಧಿಗೆ ಸಹಕಾರಿಯಾಗಿದ್ದಾರೆ.
ಈ ಮೂಲಕ ಡಾ.ಬಿಆರ್ ಅಂಬೇಡ್ಕರ್ ರವರ ಕನಸನ್ನು ನನಸು ಮಾಡಿದ ಕೀರ್ತಿ ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲುತ್ತದೆ.

ಈ ನಾಡಿನ ಜನತೆ ನಮಗೆ ಸ್ಪಷ್ಟವಾದ 136 ಸ್ಥಾನಗಳ ಬಹುಮತವನ್ನು ನೀಡಿದ್ದಾರೆ

ಬಿಜೆಪಿ ಮತ್ತು ಜೆಡಿಎಸ್ ನ ನಾಯಕರು ಬೆಟ್ಟವನ್ನು ಅಗೆದು ಇಲಿಯನ್ನು ಹುಡುಕಲು ಹೊರಟಿದ್ದಾರೆ ಮೂಡದ ಯಾವುದೋ ಒಂದು ಸೈಟಿನ ಕ್ಷುಲ್ಲಕ ಕಾರಣಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ.

ಮುಖ್ಯಮಂತ್ರಿಗಳ ರಾಜೀನಾಮೆ ಯನ್ನು ಕೇಳುವುದು ಇವರ ಹಗಲು ಕನಸು ಇವರು ಪಾದಯಾತ್ರೆ ಮಾಡುವುದು ಮೇಕೇದಾಟು ಯೋಜನೆಯ ಜಾರಿಗಾಗಿ…..
ಬಯಲುಸೀಮೆಗೆ ನೀರಾವರಿ ಕೋಡಿಸುವಸಲುವಾಗಿ……….ಯೇ ವರೆತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ನಮಗೆ ಜನಾಶೀರ್ವಾದ ಮಾಡಿದ್ದಾರೆ ನಮ್ಮ ಸರ್ಕಾರ ನಿಮ್ಮ ಅಭಿವೃದ್ಧಿಗಾಗಿ ಬಂದಿದೆ
ನಮ್ಮ ಎಲ್ಲಾ ಮಂತ್ರಿ ಮಂಡಲ ಹಾಗೂ ನಮ್ಮೆಲ್ಲಾ ಶಾಸಕರು ಮುಖ್ಯಮಂತ್ರಿಗಳ ಪ್ರವಾಗಿದ್ದೇವೆ.
ಅವರೊಂದಿಗೆ ನಾವಿದ್ದೇವೆ ಅವರ ರಾಜೀನಾಮೆ ಕೊಡಿಸುವುದು ಸಾದ್ಯವಿಲ್ಲಾ…..ಅವರನ್ನು ಕದುಲಿಸಲು ನಾವು ಬಿಡುವುದಿಲ್ಲಾ
ಈ ಬೆಜೆಪಿ ಮತ್ತು ಜೆಡಿಎಸ್ ನವರ ಪಾದಯಾತ್ರೆ ಎಂಬುವುದು ಬರೀ ನಾಟಕವಾಗಿದೆ ಈ ಪಾದಯಾತ್ರೆಗೆ ಅರ್ಥ ವಿಲ್ಲಾ ಇವರು ಮೇಕೇದಾಟು ಯೋಜನೆ ಜಾರಿಗಾಗಿ ಪಾದಯಾತ್ರೆ ಮಾಡಲಿ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ,ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವರಾದ ಎಚ್.ಕೆ ಪಾಟೀಲ್, ಪರಮೇಶ್ವರ್,ಮಹದೇವಪ್ಪ,ಎಂ.ಬಿ ಪಾಟೀಲ್,ಸತೀಶ್ ಜಾರಕಿಹೋಳಿ, ವೆಂಕಟೇಶ್, ಜಮೀರ್ ಅಹ್ಮದ್ ಖಾನ್,ಕೃಷ್ಣ ಬೈರೇಗೌಡ,ಈಶ್ವರ್ ಖಂಡ್ರೆ,ರಾಮಲಿಂಗಾರೆಡ್ಡಿ, ಪ್ರಯಾಂಕ ಖರ್ಗೆ,ರಹೀಂಖಾನ್,ಸುಧಾಕರ್, ಬೈರತಿ ಸುರೇಶ್,ಹಾಗೂ ಸಂಸದರು ಶಾಸಕರು ನಿಗಮದ ಅಧ್ಯಕ್ಷರು,ಕೆಪಿಸಿಸಿ ಪಧಾದಿಕಾರಿಗಳು, ಮಹಿಳಾ ಘಟಕದ ನಾಯಕರು ಮುಖಂಡರು, ಕಾರ್ಯಕರ್ತರು, ಉಪಸ್ಥಿತರಿದ್ದರು.

More News