Guarantee Schemes: ಗ್ಯಾರಂಟಿಗೆ ಸರ್ಕಾರ ವಾರಂಟಿ : ಸಿಎಂ ಸಲಹೆಗಾರ ಬಸವರಾಜ್ ರಾಯರೆಡ್ಡಿ

ಬೆಂಗಳೂರು: ಪಂಚ ಗ್ಯಾರಂಟಿ ಪರಿಷ್ಕರಣೆ ವಿಚಾರ ಸರ್ಕಾರದ ಮುಂದೆ ಇಲ್ಲ.ಆದರೆ ಹಣಕಾಸಿನ ವಿಚಾರವಾಗಿ ಒತ್ತಡ ಇದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸ್ಪಷ್ಟಪಡಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಮುಂದಿನ ವರ್ಷದಿಂದ ನಮಗೆ ಸಮಸ್ಯೆ ಆಗುವುದಿಲ್ಲ ಎಂಬ ವಿಶ್ವಾಸ ಇದೆ.ಮುಂದಿನ‌ ಬಜೆಟ್ 4 ಲಕ್ಷ ಕೋಟಿಗಿಂತ ಹೆಚ್ಚಾಗುತ್ತದೆ.ಸರ್ಕಾರಿ ನೌಕರರು ಗ್ಯಾರಂಟಿ ಲಾಭ ಪಡೆಯುತ್ತಿದ್ದಾರೆ.ಅದರ ಪರಿಷ್ಕರಣೆ ಬಗ್ಗೆ ಚರ್ಚೆಯಾಗಿದೆ.ಬದಲಾವಣೆ ಬಗ್ಗೆ ಚರ್ಚೆಯಾಗಿಲ್ಲ. ಗ್ಯಾರಂಟಿಗಳನ್ನು ಸರ್ಕಾರಿ ನೌಕರರು ಪಡೆಯುತ್ತಿರುವ ಬಗ್ಗೆ ಕೆಲವರು ಆಕ್ಷೇಪ ಎತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತಾ ಸಿಎಂ ಸ್ಪಷ್ಟನೆ ನೀಡಿದ್ದಾರೆ. ಗ್ಯಾರಂಟಿ ಬಗ್ಗೆ ನಾವು ವಾರಂಟಿನು ಕೊಡುತ್ತೇವೆ ಎಂದರು.

ಆಗಸ್ಟ್ 28, 29, 30 ರಂದು 16ನೇ ಹಣಕಾಸಿನ ಆಯೋಗ ರಾಜ್ಯಕ್ಕೆ ಭೇಟಿ ಕೊಡಲಿದೆ. ಅದಕ್ಕೆ ಏನೆಲ್ಲಾ ಮಾಹಿತಿ ನೀಡಬೇಕೆಂಬ ಬಗ್ಗೆ ಚರ್ಚೆಯಾಗಿದೆ. ನಮಗೆ 15ನೇ ಹಣಕಾಸು ಆಯೋಗದಲ್ಲಿ ಏನೆಲ್ಲಾ ತೊಂದರೆ, ಅನ್ಯಾಯವಾಗಿದೆ ಎಂದು ಚರ್ಚೆಯಾಗಿದೆ. ನಮ್ಮ ರಾಜ್ಯಕ್ಕೆ ಆಗಿರುವ ಅನ್ಯಾಯಗಳ ಬಗ್ಗೆ ವಿವರಣೆ ನೀಡಲು ಚರ್ಚೆಯಾಗಿದೆ. ಮುಂದೆ ನಮ್ಮ ರಾಜ್ಯಕ್ಕೆ ನಿಗದಿ ಪಡಿಸಿದ ಹಣ ಬರಬೇಕು ಎಂದು 16 ಹಣಕಾಸು ಆಯೋಗಕ್ಕೆ ಮನವಿ ಮಾಡುತ್ತೇವೆ ಎಂದರು.

15ನೇ ಹಣಕಾಸು ಆಯೋಗ ಶಿಫಾರಸ್ಸಿನಂತೆ ಕರ್ನಾಟಕಕ್ಕೆ 11,500 ಕೋಟಿ ಬರಬೇಕಿತ್ತು. ಆದರೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ ನಲ್ಲಿ ಹಣ ಕೊಟ್ಟಿದ್ದೇವೆ ಅಂತಾ ಹೇಳಿದ್ದಾರೆ. ಆದರೆ ಅವರು ವಾಸ್ತವವಾಗಿ ಕೊಟ್ಟಿಲ್ಲ, ಅವರು ಡಬಲ್ ಸ್ಟಾಂಡ್ ನಿಲುವು ಹೊಂದಿದ್ದಾರೆ. 16ನೇ ಹಣಕಾಸು ಆಯೋಗದ ಮುಂದೆ ಪ್ರಸ್ತಾಪ ಮಾಡುತ್ತೇವೆ ಎಂದರು.

ಬೆಂಗಳೂರು ರಸ್ತೆಗಳು ಗುಂಡಿ ಬಿದ್ದಿರುವ ವಿಚಾರವಾಗಿ ಸಚಿವ ಕೃಷ್ಣ ಬೈರೇಗೌಡರ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಬೆಂಗಳೂರಿನಲ್ಲಿ ರಸ್ತೆ ಹಾಳಾಗಿರೋದು ನಿಜ. ಬೆಂಗಳೂರು ನಗರಾಭಿವೃದ್ಧಿ ಸಚಿವರು ಬಿಬಿಎಂಪಿ ನೋಡಿಕೊಳ್ತಾರೆ ಎಂದರು.

More News