ಹೆಲಿಕಾಪ್ಟರ್ ದುರಂತ: ನಾಳೆ ದೆಹಲಿಯಲ್ಲಿ ಲೆಪ್ಟಿನೆಂಟ್ ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಅಂತ್ಯಕ್ರಿಯೆ

ತಮಿಳುನಾಡು : ತಮಿಳುನಾಡಿನನೀಲಗಿರಿ ಜಿಲ್ಲೆಯ ಕೂನೂರು ಬಳಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಅವರ ಅಂತ್ಯಕ್ರಿಯೆ ನಾಳೆ ದೆಹಲಿಯಲ್ಲಿ ಜರುಗಲಿದೆ.


ಇಂದು ಸಂಜೆ ವೇಳೆಗೆ ಮೃತರ ಪಾರ್ಥೀವ ಶರೀರವನ್ನು ನವದೆಹಲಿಗೆ ತೆಗೆದುಕೊಂಡು ಹೋಗಲಾಗಿದ್ದು, ನಾಳೆ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದ್ದು, ನಂತರ ಕಾಮರಾಜ್ ಮಾರ್ಗ್ ನಿಂದ ಬ್ರಾರ್ ಸ್ಕ್ವೇರ್ ಚಿತಾಗಾರದವರೆಗೂ ಮೆರವಣಿಗೆ ನಡೆಸಲಾಗುವುದು.


ಈ ಮಧ್ಯೆ ನವದೆಹಲಿಯಲ್ಲಿರುವ ಬಿಪಿನ್ ರಾವತ್ ಅವರ ನಿವಾಸಕ್ಕೆ ಸೇನಾ ಸಿಬ್ಬಂದಿಗಳು ರಕ್ಷಣೆ ನೀಡಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಅನ್ನು ಮಾಡಲಾಗಿದೆ.


ತಮಿಳುನಾಡಿನ ರಕ್ಷಣಾ ಕಾಲೇಜಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ದೆಹಲಿಯಿಂದ ತೆರಳುತ್ತಿದ್ದಾಗ ತಮಿಳುನಾಡಿ ಕೂನೂರು ಬಳಿ ಹೆಲಿಕಾಪ್ಟರ್ ದುರಂತಕ್ಕೀಡಾಗಿತ್ತು. ಈ ದುರ್ಘಟನೆಯಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಸೇರಿದಂತೆ ಒಟ್ಟು 13 ಜನರು ಮೃತಪಟ್ಟಿದ್ದರು.

More News