ಬೀದರ್ : ಬಸವಣ್ಣನವರ ಕರ್ಮಭೂಮಿ ಬೀದರ್ ನಲ್ಲಿ ವಿಧಾನ ಪರಿಷತ್ ಚುನಾವಣೆ ಕಾವು ಬಾರಿ ಜೋರಾಗಿ ನಡೆಯುತ್ತಿದೆ. ಭಾಲ್ಕಿ ಕ್ಷೇತ್ರದ ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಾಗೂ ಹಾಲಿ ವಿಧಾನ ಪರಿಷತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಸಹೋದರರು.
ಸಹೋದರರ ನಡುವೆ ನಡೆಯುತ್ತಿರುವ ಈ ಚುನಾವಣಾ ಫೈಟ್ ಗೆ ಇಂದು ಬೀದರ್ ನಲ ಜ್ಯಾಂತಿ ಗ್ರಾಮದಲ್ಲಿ ನಡೆದ ಘಟನೆ ಸಾಕ್ಷಿಯಾಯಿತು. ಅಣ್ಣ ತಮ್ಮಂದಿರಿಬ್ಬರೂ ಬೇರೆ ಬೇರೆ ಪಕ್ಷದ ಪರದಲ್ಲಿದ್ದು ಇಬ್ಬರೂ ಗೆಲುವನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಇಂದು ಉಭಯ ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆಗೆ ಕಾರಣವಾಯಿತು.
ಬಿಜೆಪಿ ಜ್ಯಾಂತಿ ಗ್ರಾಮ ಪಂಚಾಯತಿಗೆ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಕಾರ್ಯಕರ್ತರು ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಇದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಈ ಸಂದರ್ಭದಲ್ಲಿ ಜ್ಯಾಂತಿ ಗ್ರಾಮದಲ್ಲಿ ಉದ್ರಿಕ್ತ ವಾತಾವರಣ ನೆಲೆಗೊಂಡಿತ್ತು.

ಕಾಂಗ್ರೆಸ್ ಪಕ್ಷದಿಂದ ಭಾಲ್ಕಿ ತಾಲೂಕಿನ ಜ್ಯಾ0ತಿ ಗ್ರಾಮದ ವೈಜನಾಥ ಪಾಟೀಲ ಅವರ ತೋಟದ ಮನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಇದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ಅಲ್ಲಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನೆಲೆಗೊಂಡಿತ್ತು. ನಂತರ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿತ್ತು.
ಹಣ ಹಂಚುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆ ಕಾರು ಹಿಂಬಾಲಿಸಿದ ಮುಖಂಡರು
ಬೀದರ್ ಜಿಲ್ಲಾ ಉಸ್ತುವಾರಿ ಸಚಿವರ ತವರೂರಿನಲ್ಲಿ ಔರಾದ್ ನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಚಿವರ ಕಾರು ಹಿಂಬಾಲಿಸಿದ ಘಟನೆ ನಡೆದಿದೆ. ಇನ್ನೊಂದು ಕಡೆ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಭಾಲ್ಕಿನಲ್ಲಿ ಕೆಪಿಸಿಸಿ ರಾಜ್ಯ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಕಾರು ಹಿಂಬಾಲಿಸಿದರು.

ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರ ಕಾರನ್ನು ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ ಹಿಂಬಾಲಿಸಿದ್ದರು. ಸಚಿವರು ಹಾಗೂ ಕಾಂಗ್ರೆಸ್ ಮುಖಂಡರು ಚುನಾವಣೆ ಅವ್ಯವಹಾರ ನಡೆಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಉಭಯ ಪಕ್ಷದ ನಾಯಕರು ಒಬ್ಬರನ್ನೊಬ್ಬರು ಹಿಂಬಾಲಿಸುತ್ತಿದ್ದರು.

ಒಟ್ಟಿನಲ್ಲಿ ಬೀದರ್ ವಿಧಾನ ಪರಿಷತ್ ಕ್ಷೇತ್ರ ಸಹೋದರರ ನಡುವಿನ ಸವಾಲ್ ಆಗಿಪರಿಣಿಸಿದ್ದು, ಯಾರ ಮುಡಿಗೆ ಗೆಲುವು ಬರಲಿದೆ ಎನ್ನುವುದು ಮಾತ್ರ ಇನ್ನೆರೆಡು ದಿನ ಕಾಯಬೇಕು.




