LAKSHMI HEBBALKAR: ದಸರಾ ನೋಡುತ್ತಿರುವುದೇ ಖುಷಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಮೈಸೂರು : ವಿಶ್ವ ಪ್ರಸಿದ್ಧ ಮೈಸೂರು ದಸರಾ ನೋಡಲು ಖುಷಿಯಾಗುತ್ತಿದೆ. ಜೀವನದಲ್ಲಿ ಮೊದಲ ಬಾರಿಗೆ ದಸರಾ ನೋಡುತ್ತಿರುವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಮೈಸೂರಿನ ಶಾರದಾ ದೇವಿನಗರದ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರನ್ನು ಸಚಿವರು ಭೇಟಿಯಾದರು. ಈ ವೇಳೆ ಮಾತನಾಡಿದ ಸಚಿವರು ಜೀವನದಲ್ಲಿ ಒಮ್ಮೆಯಾದರೂ ದಸರಾ ನೋಡಬೇಕು. ಇಂದು ದಸರಾ ನೋಡುವ ಕನಸು ಈಡೇರುತ್ತಿದೆ ಎಂದರು.

ದಸರಾ ನೋಡಲು ಖುಷಿಯಾಗುತ್ತಿದೆ‌. ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಜೊತೆಯಲ್ಲಿ ದಸರಾ ನೋಡುತ್ತಿರುವೆ. ದಸರಾ ವೈಭವವನ್ನು ನೋಡುವುದೇ ಚಂದ ಎಂದು ಸಚಿವರು ತಿಳಿಸಿದರು.

  • ಸಿಎಂ ಭೇಟಿಯಾದ ಸಚಿವರು
    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸಚಿವರು ಕೆಲಕಾಲ ಚರ್ಚೆ ನಡೆಸಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಸಚಿವ ಕೆ.ವೆಂಕಟೇಶ್, ಶಾಸಕರಾದ ಕೃಷ್ಣಮೂರ್ತಿ, ಡಿ.ರವಿ ಶಂಕರ್, ದರ್ಶನ್ ದ್ರುವನಾರಾಯಣ್, ಅನಿಲ್ ಚಿಕ್ಕಮಾದು ಸೇರಿದಂತೆ ಹಲವರು ಉಪಸ್ಥಿತರಿದ್ದರು.
  • ರೈಲು ದುರಂತಕ್ಕೆ ಸಂತಾಪ
    ತಮಿಳುನಾಡಿನ ಪೆರಂಬೂರು ಸಮೀಪ ಮೈಸೂರು ದರ್ಬಾಂಗ್‌ ಎಕ್ಸ್‌ಪ್ರೆಸ್‌ ಹಾಗೂ ಗೂಡ್ಸ್‌ ರೈಲು ನಡುವೆ ಅಪಘಾತಕ್ಕೆ ಸಚಿವರು ಸಂತಾಪ ವ್ಯಕ್ತಪಡಿಸಿದರು. ಅಪಘಾತದಲ್ಲಿ ಮೃತಪಟ್ಟ ಕನ್ನಡಿಗರ ಕುಟುಂಬದೊಂದಿಗೆ ಸರ್ಕಾರ ಇರಲಿದೆ ಎಂದರು.

More News

You cannot copy content of this page