ಮೀಟೂ ಪ್ರಕರಣ: ಶ್ರುತಿ ಹರಿಹರನ್ ನೊಂದಿಗಿನ ಕಾನೂನು ಸಮರದಲ್ಲಿ ನಟ ಅರ್ಜುನ್ ಸರ್ಜಾಗೆ ಗೆಲುವು

2018 ರಲ್ಲಿ ಭಾರೀ ಸದ್ದು ಮಾಡಿದ್ದ ಮೀಟೂ ಪ್ರಕರಣದಲ್ಲಿ ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಗಂಭೀರ ಆರೋಪ ಮಾಡಿದ್ದರು. ತಮ್ಮ ಜತೆ ಅರ್ಜುನ್ ಸರ್ಜಾ ಅವರು ಅಸಭ್ಯ ರೀತಿಯಲ್ಲಿ ನಡೆದುಕೊಂಡಿದ್ದಾರೆ ಹಾಗೂ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಖುದ್ದಾಗಿ ತೆರಳಿ ದೂರು ನೀಡಿದ್ದರು.
ಈ ಸಂಬಂಧ ಕಳೆದ ಮೂರು ವರ್ಷಗಳಿಂದ ಸಾಕ್ಷ್ಯಾಧಾರಗಳನ್ನು ಒಟ್ಟುಗೂಡಿಸುವಲ್ಲಿ ಕಬ್ಬನ್ ಪಾರ್ಕ್ ಪೊಲೀಸರು ಯಶಸ್ವಿಯಾಗಿರಲಿಲ್ಲ. ಆದ್ದರಿಂದ ಪೊಲೀಸರು ಬಿ ರಿಪೋರ್ಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದರಿಂದ ನಟ ಅರ್ಜುನ್ ಸರ್ಜಾ ಅವರಿಗೆ ಬಿಗ್ ರಿಲೀಫ್ ದೊರೆತಿದೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಅರ್ಜುನ್ ಸರ್ಜಾ ಅವರು, ನಾನು ಕೇರಳಾದಲ್ಲಿ ಶೂಟೆಂಗ್ ನಲ್ಲಿ ಇದ್ದೇನೆ. ನನಗೆ ಜಯ ಸಿಗುತ್ತೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ, ಈ ಹಿನ್ನೆಲೆಯಲ್ಲಿ ಮುಂದಿನ ವಾರ ಬೆಂಗಳೂರಿಗೆ ಆಗಮಿಸಿ ಸಂಪೂರ್ಣ ಮಾಹಿತಿ ಒದಗಿಸುತ್ತೇನೆ ಎಂದು ಹೇಳಿದ್ದಾರೆ.

ಚಲನಚಿತ್ರದ ಸಾಂದರ್ಭಿಕ ಚಿತ್ರ


2018ರಲ್ಲಿ ಅರುಣ್ ವೈದ್ಯನಾಥ್ ಅವರು ನಿರ್ದೇಶಿಸಿರುವ ವಿಸ್ಮಯ ಚಲನಚಿತ್ರದಲ್ಲಿ ಅರ್ಜುನ್ ಸರ್ಜಾ ಹಾಗೂ ಶ್ರುತಿ ಹರಿಹರನ್ ಅವರು ನಟಿಸಿದ್ದರು. ಈ ವೇಳೆ ಅರ್ಜುನ್ ಸರ್ಜಾ ಅವರು ಕಿರುಕುಳ ನೀಡಿದ್ದರು ಎದು ಆರೋಪಿಸಿದ್ದರು. ಈ ಆರೋಪ ಸ್ಯಾಂಡಲ್ ವುಡ್ ನಲ್ಲಿ ಬೆಂಕಿ ಹತ್ತಿಸಿತ್ತು. ಸಾಕಷ್ಟು ಪರ ವಿರೋಧ ಹೇಳಿಕೆಗಳು ಬಂದಿದ್ದವು.
ಹಾಗೆನೇ ಇನ್ನಿತರ ಅನೇಕ ನಟರ ಮೀಟೂ ಪ್ರಕರಣಗಳು ಬಯಲಾಗಿದ್ದವು. ಈ ಹಿನ್ನೆಲೆಯಲ್ಲಿ ಕರ್ನಾಟಕ ವಾಣಿಜ್ಯ ಮಂಡಳಿಯಲ್ಲಿ ಸಂಧಾನ ಸಭೆಗಳನ್ನು ನಡೆಸಲಾಗಿತ್ತು, ಅಂದು ರೆಬಲ್ ಸ್ಟಾರ್ ಅಂಬರೀಷ್ ಅವರ ನೇತೃತ್ವದಲ್ಲಿ ನಡೆದ ಸಂದಾನ ಸಭೆ ಯಶಸ್ಸು ಕಂಡಿರಲಿಲ್ಲ.

More News