ಶ್ರೀಮುರುಳಿ ಹೊಸ ಅಧ್ಯಾಯ“ಬಘೀರ”. ಖಂಡಿತಾ – ಕಾಡಿ ಕಾಪಾಡುತ್ತಾನೆ
ಬೆಂಗಳೂರು : ಬಾಲ್ಯದಿಂದಲೂ ಶಿಸ್ತು ಅನ್ನೋದನ್ನ ಮೈಗೂಡಿಸಿಕೊಂಡ ಬಾಲಕ ಪೊಲೀಸ್ ಅಧಿಕಾರಿ ಆಗುತ್ತಾನೆ.ಆತನೇ ವೇದಾಂತ್ (ಶ್ರೀಮುರುಳಿ ).ಅನ್ಯಾಯ, ಮೋಸ, ವಂಚನೆ, ಅತ್ಯಾಚಾರ ಅವರಿಸಿರೋ ಸಮಾಜವನ್ನ ಹೇಗಾದ್ರೂ ಸ್ವಚ್ಛಗೊಳಿಸಬೇಕು ಅನ್ನೋ ಆಸೆಗೆ ಬಿದ್ದ ವೇದಾಂತ್ ಗೆ (ಶ್ರೀಮುರುಳಿ)ಅಧಿಕಾರದಲ್ಲಿದ್ದುಕೊಂಡು ಏನೂ ಮಾಡಲು ಆಗೋದಿಲ್ಲ. ಮೇಲಾಧಿಕಾರಿಗಳ ಒತ್ತಡಕ್ಕೆ ಮಣಿದು ವೇಷ ಧರಿಸಿ ರಾತ್ರಿ ಬಘೀರನಾಗುತ್ತಾನೆ.
‘ಬಘೀರ‘ನಾಗಿ ರಾತ್ರಿ ವೇಳೆ ಬದಲಾಗೋ ವೇದಾಂತ್ ಕತ್ತಲಲ್ಲಿ ರಾಕ್ಷಸನಂತೆ ಖದೀಮರನ್ನ ಕಾಡಿಬಿಡುತ್ತಾನೆ. ಹೇಗೆ ಮತ್ತು ಯಾಕೆ ಅನ್ನೋದನ್ನ ದೀಪಾವಳಿ ಸಂಭ್ರಮದಲ್ಲಿರೋ ನೀವುಗಳು ಫ್ಯಾಮಿಲಿ ಜೊತೆ ಹತ್ತಿರದ ಥೀಯೇಟರ್ ಗೆ ಹೋಗಿ ನೋಡಿ.
‘ಬಘೀರ‘ ಸಿನಿಮಾ ಸಮಾಜದಲ್ಲಿ ನಿತ್ಯ ನಡೆಯೋ ಹಲವು ವಿಚಾರ ನಿಜ ಜೀವನದಲ್ಲಿ ಪ್ರತಿಯೊಬ್ಬರೂ ಅನುಭವಿಸೋ ಸವಾಲು ಅಂತಾನೇ ಹೇಳಬಹುದು. ಪ್ರತಿಯೊಬ್ಬರೂ ಬಘೀರ ಸಿನಿಮಾದಲ್ಲಿ ರಾಕ್ಷಸರಂತೆ ನಟಿಸಿದ್ದಾರೆ. ಬೋರು ಅನ್ನೋ ಪದಕ್ಕೆ ಜಾಗವೇ ಕೊಟ್ಟಿಲ್ಲ ಶ್ರೀಮುರುಳಿ ಅಂಡ್ ಟೀಮ್. ಶ್ರೀಮುರುಳಿ ಅವರಿಗೆ ಬಘೀರ ಹೊಸ ಅಧ್ಯಾಯ ಅಂತಾನೇ ಹೇಳಬಹುದು. ಮೇಕಿಂಗ್ ಅದ್ಭುತ ಅನಿಸುತ್ತೆ. ದೃಶ್ಯಾವಳಿ ಮಾತ್ರ ಕಣ್ಣಿಗೆ ಹಬ್ಬ. ರಾಣಾ ಪಾತ್ರದಲ್ಲಿ ಗರುಡಾ ರಾಮ್ ಸಖತ್ ಆಗಿ ನಟಿಸಿದ್ದಾರೆ. ಹೀರೋಯಿನ್ ರುಕ್ಮಿಣಿ ವಸಂತ್ ಗೆ ಸ್ಪೇಸ್ ಕಡಿಮೆ ಆದರೂ ಕೊಟ್ಟ ಪಾತ್ರವನ್ನ ಕ್ಯೂಟ್ ಆಗಿ ನಿಭಾಯಿಸಿದ್ದಾರೆ.
ಚಿತ್ರಕ್ಕೆ ಪ್ರಶಾಂತ್ ನೀಲ್ ಅವರ ಕಥೆ ಇದೆ. “ಬಘೀರ ಎಂದರೆ ನೈಟ್ ಹಂಟರ್, ಇದು ರಾತ್ರಿ ವೇಳೆ ಬೇಟೆಯಾಡುತ್ತದೆ. ನಮ್ಮ ಚಿತ್ರದ ಕಥೆ ಹೆಚ್ಚಿನ ಭಾಗ ರಾತ್ರಿಯಲ್ಲೇ ನಡೆಯುತ್ತದೆ. ಸೂಪರ್ ಹೀರೋ ಕಥಾಹಂದರ ಸಿನಿಮಾಗಳನ್ನು ಕನ್ನಡದಲ್ಲಿ ತುಂಬಾ ರೇರ್. ಸೊ ಮೂರು ವರ್ಷಗಳ ನಿರಂತರ ಪ್ರಯತ್ನ ಪಕ್ಕಾ ನಿಮಗೆ ಇಷ್ಟ ಆಗುತ್ತೆ
ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ ಕಿರಗಂದೂರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಡಾ. ಸೂರಿ ಆ್ಯಕ್ಷನ್ ಕಟ್ ಹೇಳಿದ್ದಾರೆ.