National Tennis Volleyball Games: ರಾಷ್ಟ್ರೀಯ ಟೆನ್ಸಿಸ್ ವಾಲಿಬಾಲ್ ಕ್ರೀಡಾಕೂಟಕ್ಕೆ ಚಾಲನೆ

ಕಂಠೀರವ ಕ್ರೀಡಾಂಗಣ: ಕರ್ನಾಟಕ ಟೆನ್ಸಿಸ್ ವಾಲಿಬಾಲ್ ಅಸೋಸಿಯೇಷನ್ ವತಿಯಿಂದ 26ನೇ ಸೀನಿಯರ್ ಮತ್ತು ಹಿರಿಯರ ಟೆನ್ನಿಸ್ ವಾಲಿಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿ.

ಮಾಜಿ ಲೋಕಸಭಾ ಸದಸ್ಯರಾದ ವಿ.ಎಸ್.ಉಗ್ರಪ್ಪ , ಮಾಜಿ ಬಿಬಿಎಂಪಿ ಸದಸ್ಯ ಮೋಹನ್ ಕುಮಾರ್, ಯುವ ಕಾಂಗ್ರೆಸ್ ಮಾಜಿ ಕಾರ್ಯಾಧ್ಯಕ್ಷ ಹೆಚ್.ಎಸ್.ಮಂಜುನಾಥ್ ಗೌಡರವರು, ಕೆ.ಟಿ.ಎಸ್.ವಿ ಅಧ್ಯಕ್ಷರಾದ ತುಳಸಿರಾಮ್, ಪ್ರಧಾನ ಕಾರ್ಯದರ್ಶಿ ವಿ.ನಾಗೇಶ್ವರ್ ರಾವ್ , ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಲತಾಗೌಡ ಮತ್ತು ಚಂದ್ರಶೇಖರ್, ಅಂತರಾಷ್ಚ್ರೀಯ ಮಾಜಿ ಓಲಂಪಿಕ್ ಕ್ರೀಡಾಪಟು ಸತ್ಯನಾರಾಯಣ್ ರವರು ಪಂದ್ಯಾವಳಿಗಳಿಗೆ ದೀಪ ಬೆಳಗಿಸಿ ಚಾಲನೆ ನೀಡಿದರು.

ವಿ.ಎಸ್.ಉಗ್ರಪ್ಪರವರು ಮಾತನಾಡಿ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ, ದೃಹಿಕವಾಗಿ ಸಂತೋಷ ಮತ್ತು ಆರೋಗ್ಯ ಲಭಿಸುತ್ತದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸಹಕಾರ ಪ್ರೋತ್ಸಹ ನೀಡುತ್ತಿದ್ದಾರೆ.

ಮನುಷ್ಯ ಆರೋಗ್ಯವಂತರಾಗಿ ಮತ್ತು ಮಾನಸಿಕವಾಗಿ ಸಧೃಡವಾಗಿ ಇರಬೇಕು ಎಂದರೆ ಯೋಗ, ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು.

ಎಲ್ಲ ರಾಜ್ಯದ ಕ್ರೀಡಾಪಟುಗಳು ದೇಶಕ್ಕಾಗಿ ಆಡಬೇಕು, ಜಾತಿ, ಧರ್ಮ ಮುಖ್ಯವಲ್ಲ ಮಾನವೀಯತೆ ಧರ್ಮ ಮುಖ್ಯ.

ಯುವಕರ ಕೈಯಲ್ಲಿ ದೇಶ ಇದೆ ಅದರಿಂದ ಯುವ ಸಮುದಾಯ ಮಾನಸಿಕ, ದೃಹಿಕ ಸಧೃಢವಾದ ದೇಶ ಕಟ್ಟಬಹುದು.

ಎರಡು ದಿನಗಳ ಕಾಲ ನಡೆಯುವ ಟೆನ್ಸಿಲ್ ವಾಲಿಬಾಲ್ ಪಂದ್ಯದಲ್ಲಿ ಕರ್ನಾಟಕ, ಹರಿಯಾಣ, ದೆಹಲಿ, ಕೇರಳ, ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್,ಹಿಮಾಚಲ್ ಪ್ರದೇಶ, ಛತ್ತಿಸ್ ಗಡ್ ರಾಜ್ಯದ ನೂರಾರು ಕ್ರೀಡಾಪಟುಗಳು ಭಾಗವಹಿಸಿದ್ದರು.

More News