ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಗಳು ಕುರ್ಚಿ ಬಲಪಡಿಸಿಕೊಳ್ಳೋಕೆ ಹಾಸನದಲ್ಲಿ ಸಮಾವೇಶ ಮಾಡುತ್ತಿದ್ದಾರೆ. ನಿನ್ನೆ ದಿನ ಸ್ವ ಪಕ್ಷದಲ್ಲಿಯೇ ಪಕ್ಷವನ್ನು ಬಿಟ್ಟು ವೈಯಕ್ತಿಕವಾಗಿ ಸಮಾವೇಶ ಮಾಡಲಾಗುತ್ತಿದೆ ಎಂದು ಆಕ್ಷೇಪ ಬಂದಿದೆ ಎಂದರು.
ಜೆಪಿ ನಗರ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು,ರಾಷ್ಟ್ರೀಯ ನಾಯಕರ ಗಮನ ಸೆಳೆಯೋಕೆ ಶಕ್ತಿ ಪ್ರದರ್ಶನ ಸಮಾವೇಶ ಮಾಡ್ತಿದ್ದಾರೆ. ಅನ್ನೊಂದು ನಮ್ಮ ಅನಿಸಿಕೆ ಜೆಡಿಎಸ್ ಮತ್ತು ಬಿಜೆಪಿಗೆ ಈ ಸಮಾವೇಶದ ಮೂಲಕ ಏನು ಸಂದೇಶ ಕೊಡೋಕೆ ಅಲ್ಲ ಎಂದರು.
ಯಾವ ಪುರುಷಾರ್ಥಕ್ಕೆ ಸಮಾವೇಶ
ಹಾಸನದಲ್ಲಿ ಸಮಾವೇಶ ಮಾಡುವುದರಿಂದ ಜೆಡಿಎಸ್ ಗೆ ಹಿನ್ನಡೆ ವಿಚಾರಕ್ಕೆ ಮಾತನಾಡಿದ ಅವರು, ಸಮಾವೇಶ ಯಾರು ಎಲ್ಲಿ ಬೇಕಾದರು ಮಾಡಬಹುದು ಇದ್ರಿಂದ ಹಿನ್ನಡೆ ಆಗುವ ಪ್ರಶ್ನೆ ಇಲ್ಲ.ಇನ್ನು ಚುನಾವಣೆಗೆ ಮೂರುವರೆ ವರ್ಷ ಬಾಕಿ ಇದೆ ಸಮಾವೇಶ ಯಾವ ಪುರುಷಾರ್ಥಕ್ಕೆ ಮಾಡ್ತಿದ್ದಾರೆ ಗೊತ್ತಿಲ್ಲ ಎಂದು ಕಿಡಿಕಾರಿದರು.
ಸರ್ಕಾರದ ವೈಫಲ್ಯಗಳನ್ನು ಈ ಸಮಾವೇಶ ಮಾಡ್ತಿದ್ದಾರೆ. ಸರ್ಕಾರದ ಸಾಧನೆಗಳು ಏನಿದೆ ಎಂಬುದು ಜನ ಸಾಮಾನ್ಯರ ಪ್ರಶ್ನೆ ಆಗಿದೆ. ಈ ಸರ್ಕಾರ ಭ್ರಷ್ಟಾಚಾರ ಹಗರಣಗಳಲ್ಲಿ ಮುಳುಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಹೊಸಪೇಟೆ ಕಾಂಗ್ರೆಸ್ ಶಾಸಕರೇ ಎರಡು ಗ್ಯಾರಂಟಿ ಕಡಿಮೆ ಮಾಡಿ ನಮಗೆ ಅನುದಾನ ಕೊಡಿ ಎಂದು ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ
ಒಂದೂವರೆ ವರ್ಷ ಆಗಿದೆ ಆಡಳಿತಕ್ಕೆ ಬಂದು. ಕಾಂಗ್ರೆಸ್ ಶಾಸಕರೇ ಪ್ರತಿಕ್ರಿಯೆ ಕೊಡ್ತಾ ಇರೋದನ್ನ ನೋಡಿದ್ದೇವೆ. ಈ ತರ ಹೇಳಿಕೆ ಕೊಟ್ಟ ಸಂಜೆಯ ಒಳಗೆ ಯೂಟರ್ನ್ ಹೊಡೆಸಿದ್ರು ಇದು ಕಾಂಗ್ರೆಸ್ ಶಾಸಕರ ಪರಿಸ್ಥಿತಿ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅನುದಾನ ನಿಡ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ. ಆಗಿದ್ದಾಗ ಜೆಡಿಎಸ್ ಬಿಜೆಪಿ ಶಾಸಕರ ಪರಿಸ್ಥಿತಿ ಏನಾಗಿದೆ. ಒಂದು ರೂಪಾಯಿ ಅನುದಾನ ಬಿಡುಗಡೆ ಆಗಿಲ್ಲ.ನಯಾ ಪೈಸೆ ಇವತ್ತು ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಕೊಡ್ತಾ ಇಲ್ಲ.ಈ ಪರಿಸ್ಥಿತಿ ಇವತ್ತು ರಾಜ್ಯದಲ್ಲಿ ಇದೆ ಎಂದು ಕಿಡಿಕಾರಿದರು.
ಹೆಚ್ಚು ಪ್ಯಾಕೇಜ್ ಎಲ್ಲಿ ಸಿಗುತ್ತೊ ಅಲ್ಲಿಗೆ ಯೋಗೇಶ್ವರ್ ಹೋಗ್ತಾರೆ
ಜೆಡಿಎಸ್ ಶಾಸಕರನ್ನ ಕಾಂಗ್ರೆಸ್ ಗೆ ಕರೆತರುವ ಕುರಿತು ಸಿಪಿ ಯೋಗೇಶ್ವರ್ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಅತಿ ಹೆಚ್ಚು ಪ್ಯಾಕೇಜ್ ಎಲ್ಲಿ ಸಿಗುತ್ತೆ ಅಂತ ಕಾಂಗ್ರೆಸ್ ಗೆ ಹೋಗಿದ್ದಾರೆ. ಎಷ್ಟು ದಿನ ಕಾಂಗ್ರೆಸ್ ನಲ್ಲಿ ಉಳಿಯುತ್ತಾರೆ ಅನ್ನೋದು ಪ್ರಶ್ನೆ. ಅವರನ್ನ ನಂಬಿಕೊಂಡು ನಮ್ಮ ಶಾಸಕರು ಕಾಂಗ್ರೆಸ್ ಗೆ ಹೋಗುವ ಪರಿಸ್ಥಿತಿ ಇಲ್ಲ ಎಂದು ಕಿಡಿಕಾರಿದರು.
ನಮ್ಮಲ್ಲಿ ಅಸಮಾಧಾನಿತರು ಇಲ್ಲ
ನಮ್ಮ ಪಕ್ಷದ ಶಾಸಕರು ರಾಜಕೀಯ ಹೊರತುಪಡಿಸಿ ಭಾವನಾತ್ಮಕವಾದ ರಕ್ತಗತ ಸಂಪರ್ಕ ಹೊಂದುಕೊಂಡಿದ್ದಾರೆ. ನನ್ನ ಜೊತೆ ನಮ್ಮ ಶಾಸಕರು ನಿರಂತರ ಸಂಪರ್ಕದಲ್ಲಿದ್ದಾರೆ ಕ್ಷೇತ್ರದ ಅನುದಾನ ಸಮಸ್ಯೆ ಬಗ್ಗೆಯೂ ಚರ್ಚೆ ಮಾಡುತ್ತಿದ್ದಾರೆ
ನಮ್ಮ ಯಾವುದೇ ಶಾಸಕರು ಅಸಮಾಧಾನಿತರು ಇಲ್ಲ. ಅಸಮಾಧಾನಿತರು ಕಾಂಗ್ರೆಸ್ ನಲ್ಲಿ ಹೆಚ್ಚಾಗಿದ್ದಾರೆ.ಕಾಂಗ್ರೆಸ್ ನಲ್ಲಿಯೇ ಆ ಪರಿಸ್ಥಿತಿ ಇದೆ.139 ಶಾಸಕರನ್ನ ಕಾಂಗ್ರೆಸ್ ಪಕ್ಷ ಉಳಿಸಿಕೊಳ್ಳುವ ಕೆಲಸ ಮಾಡಲಿ ಎಂದರು.
ಒಂದು ಸಮುದಾಯ ಓಲೈಕೆಗೆ ಮತ್ತೊಂದು ಸಮುದಾಯವನ್ನ ಟಾರ್ಗೆಟ್
ಒಕ್ಕಲಿಗ ಸ್ವಾಮೀಜಿ ವಿರುದ್ಧ ಎಫ್ಐಆರ್, ನೋಟಿಸ್ ವಿಚಾರಕ್ಕೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದ ಮೇಲೆ ಒಂದು ಸಮುದಾಯ ಓಲೈಕೆ ಮಾಡಿಕೊಳ್ಳೋಕೆ ಮತ್ತೊಂದು ಸಮುದಾಯವನ್ನ ಟಾರ್ಗೆಟ್ ಮಾಡ್ಕೊಂಡು ಹೋಗ್ತಾ ಇದ್ದಾರೆ. ಇದಕ್ಕೆ ಮುಂದಿನ ದಿನಗಳಲ್ಲಿ ಜನತೆ ಉತ್ತರ ಕೊಡ್ತಾರೆ ಕಾದು ನೋಡಬೇಕು ಎಂದು ತಿಳಿಸಿದರು.
ಜಿ.ಟಿ. ದೇವೇಗೌಡರ ಅಸಮಾಧಾನ ವಿಚಾರ. ಇದು ಇದೇ ಮೊದಲೇನು ಅಲ್ಲ ಈ ಹಿಂದೆ ವೈಮನಸ್ಸು ಬಂದಾಗ ನಾನೇ ಸೇತುವೆಯಾಗಿ ಕೆಲಸ ಮಾಡಿದ್ದೀನಿ. ಅವರನ್ನ ಮತ್ತೆ ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ಈ ಹಿಂದೆ ಪ್ರಮಾಣಿಕ ಕೆಲಸ ಮಾಡಿದ್ದೇನೆ. ಈಗಲೂ ಸಣ್ಣಪುಟ್ಟ ವೈಮನಸ್ಸನ್ನ ಹೊರ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಅದನ್ನ ಪಕ್ಷದ ಹಿರಿಯ ಶಾಸಕರು, ನಾವೆಲ್ಲ ಸೇರಿ ಸರಿ ಮಾಡುತ್ತೇವೆ ಎಂದರು.