ಸುವರ್ಣ ವಿಧಾನಸೌಧ (ಬೆಳಗಾವಿ): ಬೆಳಗಾವಿಯಲ್ಲಿ ಮಂಗಳವಾರ ನಡೆದ ಪಂಚಮಸಾಲಿ ಸಮುದಾಯದ ಮೀಸಲಾತಿ ಸಂಬಂಸಿದ ಪ್ರತಿಭಟನೆಯಲ್ಲಿ ಲಾಠಿ ಚಾರ್ಜ್ ಮಾಡಿದ್ದು ಸರಿಯಾಗಿದೆ.ಕಾನೂನು ಸುವ್ಯವಸ್ಥೆ ಪಾಲನೆ ಉದ್ದೇಶದಿಂದ ಸರ್ಕಾರ ತನ್ನ ಜವಾಬ್ದಾರಿ ಸರಿಯಾಗಿ ನಿಭಾಯಿಸಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸಮರ್ಥಿಸಿದ್ದಾರೆ.
ವಿಧಾನ ಮಂಡಲ ಅವೇಶನದಲ್ಲಿ ಲಾಠಿ ಜಾರ್ಚ್‌ಗೆ ಸಂಬಂಸಿದಂತೆ ಹೇಳಿಕೆ ನೀಡಿದ ಅವರು, ನಾನು ಮಂಗಳವಾರ ನಡೆದ ಘಟನೆಗೆ ಮಾತ್ರ ಸೀಮಿತಗೊಳಿಸಿ ಹೇಳಿಕೆ ನೀಡುತ್ತಿದ್ದೇನೆಘಿ. ಬೆಳಗಾವಿಯಲ್ಲಿ ಡಿ.9ರಿಂದ ಚಳಿಗಾಲದ ಅವೇಶನ ನಡೆಯುತ್ತದೆಂದು ಘೋಷಿಸಿದ ನಂತರ ಜಯಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕುರಿತು ಬೆಳಗಾವಿಯಲ್ಲಿ 5ಸಾವಿರ ಟ್ರ್ಯಾಕ್ಟರ್ ತಂದು ಪ್ರತಿಭಟನೆಗೆ ಕರೆ ಕೊಟ್ಟಿದ್ದರು.ಪ್ರತಿಭಟನೆ ಎಲ್ಲರ ಹಕ್ಕುಘಿ, ಆದರೆ 5ಸಾವಿರ ಟ್ರ್ಯಾಕ್ಟರ್‌ಗಳನ್ನು ಬೆಳಗಾವಿಗೆ ತರಲು ನಿರಾಕರಿಸಿ, ಟ್ರ್ಯಾಕ್ಸ್ ಅಥವಾ ಕ್ರೂಸರ್ ವಾಹನಗಳಲ್ಲಿ ಬಂದು ನಿರ್ದಿಷ್ಟ ಸ್ಥಳಗಳಲ್ಲಿ ಪ್ರತಿಭಟನೆಗೆ ಅವಕಾಶ ನೀಡಲಾಗಿತ್ತು. ಸುವರ್ಣ ವಿಧಾನಸೌಧದ 500ಮೀ. ವ್ಯಾಪ್ತಿಯಲ್ಲಿ ಪ್ರತಿಬಂಧಕಾಜ್ಞೆ ವಿಸಿ, ನಿರ್ಬಂತ ಪ್ರದೇಶದ ಬಗ್ಗೆಯೂ ಆದೇಶ ಹೊರಡಿಸಲಾಗಿತ್ತು ಎಂದರು.
ಧಾರವಾಡ ಹೈಕೋರ್ಟ್ ಕೂಡ ಶಾಂತಿಯುತ ಪ್ರತಿಭಟನೆಗೆ ಸ್ಥಳ ನಿಗದಿಪಡಿಸಿ ಅವಕಾಶ ಕಲ್ಪಿಸಲು ಮತ್ತು ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ ನೀಡಿತ್ತು. ಸ್ವತಃ ಮುಖ್ಯಮಂತ್ರಿಗಳು, ಸಚಿವರಾದ ಮಹದೇವಪ್ಪ, ಸುಧಾಕರ್, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ವೆಂಕಟೇಶ್ ಅವರನ್ನು ಪ್ರತಿಭಟನಾ ಸ್ಥಳಕ್ಕೆ ತೆರಳಿ, ಸ್ವಾಮೀಜಿಗಳೂ ಸೇರಿದಂತೆ ಕೆಲ ಮುಖಂಡರನ್ನು ಭೇಟಿಯಾಗಿ, ಮಾತುಕತೆಗೆ ಬರುವಂತೆ ಆಹ್ವಾನಿಸಲು ತಿಳಿಸಿದರು. ಆದರೆ ಮುಖಂಡರು ಸಚಿವರ ಮಾತಿಗೆ ಸ್ಪಂದಿಸದೇ, ಮುಖ್ಯಮಂತ್ರಿಗಳೇ ಪ್ರತಿಭಟನಾ ಸ್ಥಳಕ್ಕಾಗಮಿಸಬೇಕು ಎಂದು ಆಗ್ರಹಿಸಿದರು.ಎಲ್ಲ ಪ್ರತಿಭಟನೆಗಳಿಗೂ ಮುಖ್ಯಮಂತ್ರಿಗಳೇ ಹೋಗಬೇಕೆಂದರೆ ಅದು ಸಾಧ್ಯವೇ? ಎಂದು ಪ್ರಶ್ನಿಸಿದರು.
ಟ್ರ್ಯಾಕ್ಟರ್‌ಗಳು ಬರಬಾರದು ಎಂಬ ಆದೇಶವಿದ್ದರೂ 20 ಟ್ರ್ಯಾಕ್ಟರ್‌ಗಳಿಂದ ಬ್ಯಾರಿಕೇಡ್‌ಗಳನ್ನು ತಳ್ಳಲಾಗುತ್ತದೆ,ಅದನ್ನು ಪೊಲೀಸರು ತಡೆದಾಗ ಅವರಿಗೆ ಕಲ್ಲಿಂದ ಹೊಡೆಯುತ್ತಾರೆ. ಈ ವೇಳೆ 24 ಜನ ಪೊಲೀಸರೂ ಗಾಯಗೊಂಡಿದ್ದಾರೆ. ಈ ಬಗ್ಗೆ ಸೂಕ್ತ ವಿಡಿಯೋ ದಾಖಲೆಗಳಿವೆ.
10ಸಾವಿರ ಜನ ಸುವರ್ಣ ವಿಧಾನಸೌಧದೆಡೆಗೆ ನುಗ್ಗಿದರೆ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ ಎಂಬ ಕಾರಣಕ್ಕಾಗಿಯೇ ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿ, ಅದನ್ನು ತಡೆದಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದರೆ ಪ್ರತಿಪಕ್ಷದವರು ಪ್ರಶ್ನೆ ಮಾಡುತ್ತಾರೆ, ಜವಾಬ್ದಾರಿಯುತ ಸರ್ಕಾರ ನಮ್ಮದು ಎಂದು ಸಮಜಾಯಿಸಿ ನೀಡಿದರು.
ಪ್ರತಿಭಟನಾಕಾರರಿಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಎಲ್ಲಾ ರೀತಿಯ ಅವಕಾಶ ನೀಡಲಾಗಿತ್ತು. ಆದರೆ ಪ್ರತಿಭಟನಾಕಾರರು ಕಾನೂನು ಮತ್ತು ಸುವ್ಯವಸ್ಥಗೆ ಭಂಗ ತರುವ ರೀತಿಯಲ್ಲಿ ಆದೇಶಗಳನ್ನು ಉಲ್ಲಂಘಿಸಿ ಸುವರ್ಣ ವಿಧನಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಕ್ಕೆ ಲಘು ಲಾಠಿ ಪ್ರಹಾರ ನಡೆಸಲಾಗಿದೆ. ಪ್ರತಿಭಟನಾಕಾರರನ್ನು ಮುಂಜಾಗ್ರತಾ ಬಂಧನ ಮಾತ್ರ ನಡೆಸಲಾಗಿತ್ತು ಎಂದರು.
ಆರಗ ಜ್ಞಾನೇಂದ್ರಘಿ, ಆರ್. ಅಶೋಕ ಕೂಡ ಗೃಹ ಸಚಿವರಾಗಿದ್ದರು. ಒಂದು ವೇಳೆ ನೀವೇ ಈ ಪರಿಸ್ಥಿತಿಯಲ್ಲಿದ್ದರೆ ಏನು ಮಾಡುತ್ತಿದ್ದೀರಿ ಎಂದು ಡಾ. ಪರಮೇಶ್ವರ್ ಮರುಪ್ರಶ್ನೆ ಹಾಕಿದರು.




