HUBBALLI INCIDENT: ಯುವಕನ ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣ: 9 ಜನರ ಬಂಧನ

ಹುಬ್ಬ‍ಳ್ಳಿ: ವಿವಾಹಿತ ಮಹಿಳೆ ಜೊತೆ ಮಾತನಾಡಿದ್ದಾಗಿ ಆರೋಪಿಸಿ ಯುವಕನೊಬ್ಬನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿರುವಂತಹ ಪ್ರಕರಣಕ್ಕೆ ಸಂಬಂದಿಸಿದಂತೆ ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡು 9 ಜನರನ್ನ ಬಂದಿಸಿದ್ದು ಈ ಗಲಾಟೆಗೆ ಬಳಸಿದ ಎರಡು ಆಟೊ ಹಾಗು ಒಂದು ಬೈಕ್ ಸೀಜ್ ಮಾಡಲಾಗಿದೆ.

ಈ ಪ್ರಕರಣ ಕುರಿತು ಕಮೀಷನರ್ ಹೇಳಿಕೆ ನೀಡಿದ್ದು.
ಮೂರು ಮಕ್ಕಳಿರುವ ವಿವಾಹಿತ ಮಹಿಳೆಗೆ ಮುಜಫರ್ ಎಂಬಾತನು ಪೊನ್ ಮುಖಾಂತರ ಕಿರುಕುಳ ಕೊಡುತ್ತಾ
ಕಾಡಿಸುವದು ಮತ್ತು ಕಿರುಕುಳ ನೀಡುತ್ತಿದ್ದು ಮನೆಯವರ ಗಮನಕ್ಕೆ ಬಂದ ನಂತರ ತಿಳಿ ಹೇಳಿದರು ಇತನು ಸುದಾರಿಸದೆ ಆ ಮಹಿಳೆಯ ಮನೆಗೆ ಯಾರು ಇಲ್ಲದ ಸಮಯದಲ್ಲಿ ಬಂದು ಕಿರುಕುಳ ನೀಡಿದ್ದು ಈ ಗಲಾಟೆಗೆ ಕಾರಣವಾಗಿದ್ದು ಈ ಮಹಿಳೆಯ ಮನೆಯವರು ಬುದ್ದಿ ಹೇಳಿದಾಗ ಅವರ ಮಾತನ್ನು ಲೆಕ್ಕಿಸದೆ ಪದೆ ಪದೆ ಪೊನ್ ಮಾಡುವದು ಮತ್ತೆ ಇವರ ಗಮನಕ್ಕೆ ಬಂದಾಗ ಹುಬ್ಬಳ್ಳಿಯ ಗ್ರಾಮಿಣ ಸ್ಟೇಷನ್ ಸರಹದ್ದಿಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಲಾಗಿದೆ ,ಕೊಲೆ ಪ್ರಯತ್ನ ಹಾಗು ಮಹಿಳೆ ಜೊತೆ ಅನುಚಿತ ವರ್ತನೆ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ,
ಹಲ್ಲೆ ಮಾಡಿದವರು ಹಾಗು ಮಹಿಳೆಗೆ ಕಿರುಕುಳದ ಆರೋಪಿ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ಪ್ರಕರಣ ತನಿಖೆ ಮಾಡಲಾಗುತ್ತಿದೆ…

ಮುಜಫರ್ ಕಲಬುರ್ಗಿ ಮಹಿಳೆಯ ಜೊತೆ ಅನುಚಿತ ವರ್ತನೆ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.

ಈ ಪ್ರಕರಣದ ಆರೋಪಿಗಳು
1. ಮಹ್ಮದ್ ಅಲಿ ತಾರೀಹಾಳ ಸಾ: ಜನ್ನತನಗರ

2. ಮಲ್ಲಿಕ ತಾರೀಹಾಳ ಸಾ: ರಜಿಯಾಟೌನ್

3. ಮಾಬುಬಲಿ ತಾರೀಹಾಳ ಸಾ: ಜನ್ನತನಗರ

4. ಇಸ್ಟೈಲ್ ಮಾಳೇಕರ್ ಸಾ: ಟಿಪ್ಪುನಗರ

5. ನದೀಮ್ ಖಾನ್ ಕೆರೆಕಟ್ಟಿ ಸಾ: ಟಿಪ್ಪುನಗರ

6. ಖಾಜಾಮೈನುದ್ದೀನ್ ಧಾರವಾಡ ಸಾ: ಟಿಪ್ಪುನಗರ

7. ಎಂಡಿ ಸಾದೀಕ್ ಸಗರಿ ಸಾ: ಟಿಪ್ಪುನಗರ

8. ಜುಬೇರ್ ಹಾವೇರಿ ಸಾ: ಜನ್ನತನಗರ

9. ಎಂಡಿ ಇರ್ಫಾನ್ ಕೆರಕಟ್ಟಿ ಸಾ: ಆನಂದ ನಗರ, ಹಳೇಹುಬ್ಬಳ್ಳಿ

More News

You cannot copy content of this page