ಹುಬ್ಬಳ್ಳಿ: ವ್ಯಕ್ತಿಯೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಂದು, ಅವರನ್ನು ಊರಿಗೆ ಕರೆ ತರುವಾಗ ಕುಟುಂಬಸ್ಥರು ಗೋಳಾಡುತ್ತ ಅಳುತ್ತಿರುವಾಗ ಒಂದೇ ಒಂದು ಮಾತಿಗೆ ಆ ವ್ಯಕ್ತಿ ಬದುಕಿದ ಸಂಗತಿಯೊಂದು ನಿನ್ನೆ ನಡೆದಿದೆ.
ರೀ ಡಾಬಾ ಬಂತು ಊಟಾ ಮಾಡ ಏಳ್ರಿ ಎಂದಿದ್ದೇ ತಡಾ,, ಸತ್ತ ಮನುಷ್ಯ ಬದುಕುಳಿದ ವಿಸ್ಮಯ ಘಟನೆಯೊಂದು ನಡೆದಿದೆ. ಹಾವೇರಿ ಜಿಲ್ಲೆಯ ಬಂಕಾಪುರ 45 ವರ್ಷದ ಮಂಜುನಾಥ ಗುಡಿಮನಿ ಉರ್ಫ ಮಾಸ್ತರ್ ಎಂಬುವರು ಮೂರು ನಾಲ್ಕು ದಿನದಿಂದ ಅನಾರೋಗ್ಯದಿಂದಾಗಿ ಧಾರವಾಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ಬೆಳಗ್ಗೆ ಆಸ್ಪತ್ರೆಯಲ್ಲಿ 3-4 ಗಂಟೆ ಉಸಿರು ಇಲ್ಲದಿದ್ದಾಗ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ ನಂತರ, ಅವರ ಪತ್ನಿ ಶೀಲಾ, ಸಂಬಂಧಿಕರ ಜೊತೆಗೆ ಆಂಬ್ಯುಲೆನ್ಸ್‌ನಲ್ಲಿ ಬಂಕಾಪುರಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ಊರು ಹತ್ತಿರ ಬರುತ್ತಿದ್ದಂತೆ ಪತ್ನಿ ‘ಡಾಬಾ ಬಂತು ನೋಡು ಊಟ ಮಾಡುತ್ತೀಯಾ?’ ಎಂದು ಗೋಳಾಡಿ ಕಣ್ಣೀರಿಟ್ಟಾಗ ಮೃತವ್ಯಕ್ತಿ ಉಸಿರು ಬಿಟ್ಟಿದ್ದಾನೆ. ಆಗ ಗಾಬರಿಯಾಗಿ ಶಿಗ್ಗಾವಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ತಪಾಸಣೆ ಮಾಡಿದ ವೈದ್ಯರು ಬದುಕಿರುವದನ್ನು ದೃಢಪಡಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ.




