Shreyanka Patil: ಆರ್ ಸಿ ಬಿ ಹುಡುಗರು ಈ ಸಲ ಕಪ್ ಗೆದ್ದು ತರುತ್ತಾರೆ – ಶ್ರೇಯಾಂಕಾ ಪಾಟೀಲ್

ಬೆಂಗಳೂರು: ಹುಡುಗಿಯರು ಕಪ್ ತಂದಿದ್ದಿವಿ ಈ ಸಾರಿ ಹುಡುಗರು ಕಪ್ ತರ್ತಾರೆ . ಈ ಸಲ ಐಪಿಎಲ್ ನಲ್ಲಿ ಆರ್ ಸಿ ಬಿ ಕಪ್ ತರುತ್ತದೆ ಎಂದು ಕ್ರಿಕೆಟ್ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಮಾರತಹಳ್ಳಿಯಲ್ಲಿ ನೂತನ ಗೋಯಾಜ್ ಸಿಲ್ವರ್ ಜ್ಯೂವೆಲ್ಲರಿ 10 ನೇ ಶಾಖೆಯನ್ನ ಇಂದು ಲೋಕಾರ್ಪಣೆ ಮಾಡಲಾಯಿತು. ಮುಖ್ಯ ಅತಿಥಿಯಾಗಿ ಆರ್ ಸಿ ಬಿ ಕ್ರಿಕೆಟರ್ ಶ್ರೇಯಾಂಕಾ ಪಾಟೀಲ್ ಆಗಮಿಸಿದರು. ಕಾರ್ಯಕ್ರಮವನ್ನ ದೀಪ ಬೆಳಗಿಸುವ ಮೂಲಕ ಶ್ರೇಯಾಂಕಾ ಉದ್ಟಾಟಿಸಿದರು. ಈ ವೇಳೆ ಮಳಿಗೆಗಳ ಫೌಂಡರ್ ಅಂಡ್ ಸಿಇಓ ರವಿ
ವೇಮುಲೂರಿ ಹಾಗೂ ಪ್ರಿಯಾಂಕ ಸಹ ಉಪಸ್ಥಿತಿ ಇದ್ದರು.

ಈ ವೇಳೆ ಮಾತನಾಡಿದ ಶ್ರೇಯಾಂಕಾ ಪಾಟೀಲ್ , ಆರ್ ಸಿಬಿ ಈ ಬಾರಿ ಹೆಚ್ಚು ಶ್ರಮ ಹಾಕುತ್ತಿದೆ. ಕಪ್ ಗೆದ್ದು ತರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಾಗೇ ಮಳಿಗೆಯಲ್ಲಿ ಒಂದು ಡಿಸೈನ್ ವಾಚ್ ಕಂಡು ಕಣ್ಣು ಹಾಕಿದ್ದಿನಿ ಎಂದರು.

ಇದೇ ವೇಳೆ ಕಂಪನಿ ಸಿಇಓ ಪ್ರಿಯಾಂಕ ಅವರು ಮಾತನಾಡಿ, ಕಡಿಮೆ ಸಮಯದಲ್ಲಿ ಗೋಯಾಜ್ ಆಭರಣ ಇಂಡಸ್ಟ್ರಿಯಲ್ಲಿ ಒಳ್ಳೆ ಬೆಳೆವಣಿಗೆ ಕಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಹಾಗೇ ,  ಬೆಳ್ಳಿ ಆಭರಣ ಪ್ರಿಯರಿಗಾಗಿ ಉದ್ಟಾಟನೆ ಹಿನ್ನೆಲೆ ವಿಶೇಷ ಆಫರ್ ನೀಡಲಾಗುತ್ತಿದೆ. ಈ ಪ್ರಕಾರ ಪ್ರತಿ 1 ಲಕ್ಷ ಮೇಲ್ಪಟ್ಟ ಸಿಲ್ವರ್ ಜ್ಯೂವೆಲರಿ ಖರೀದಿಗೆ 50 ಸಾವಿರ ಬೆಲೆ ಬಾಳುವ ಡೈಮೆಂಡ್ ನೆಕ್ಲೆಸ್‌ ಹಾಗೂ ಕಿವಿಯೋಲೆ ಉಚಿತವಾಗಿ ನೀಡಲಾಗುತ್ತದೆ. ಪ್ರತಿ 50 ಸಾವಿರ ಮೇಲ್ಪಟ್ಟ ಖರೀದಿಗಾಗಿ 25 ಸಾವಿರ ಬೆಲೆಬಾಳುವ ಟೆಂಪಲ್ ಜ್ಯೂವೆಲರಿ ಉಚಿತ ಹಾಗೂ ಪ್ರತಿ 25 ಸಾವಿರ ಮೇಲ್ಪಟ್ಟ ಖರೀದಿಗಾಗಿ 12,500 ಬೆಲೆಬಾಳುವ ಗುಂಡು ಮಾಲಾ ಉಚಿತವಾಗಿ ನೀಡಲಾಗುತ್ತದೆ. ಮಾರ್ಚ್ 15 ರಿಂದ 23 ರವರೆಗೂ ಈ ಖರೀದಿಸುವ ಗ್ರಾಹಕರಿಗೆ ಈ ಆಫರ್ ಅನ್ವಯ ಆಗುತ್ತದೆ.

ಅಷ್ಟೇ ಅಲ್ಲ , ಬೇರೆ ಬೇರೆ ರಾಜ್ಯಗಳಲ್ಲೂ ಗೋಯಾಜ್ ಸಿಲ್ವರ್ ಜ್ಯೂವೆಲ್ಲರಿಯ 9 ಮಳಿಗೆಗಳೂ ಈಗಾಗಲೇ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.

More News

You cannot copy content of this page