ದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಆರಂಭದ ದಿನವೇ ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧನಕರ್ ಅನಾರೋಗ್ಯದ ಕಾರಣ ನೀಡಿ ರಾಜೀನಾಮೆ ನೀಡಿದ್ದರು. ಇವರ ಪದತ್ಯಾಗ ರಾಜಕೀಯವಲಯದಲ್ಲಿ ಸಾಕಷ್ಟು ಚರ್ಚೆಗೆ ನಾಂದಿ ಹಾಡಿದೆ. ವಿಪಕ್ಷಗಳು ಅವರ ರಾಜೀನಾಮೆ ಹಿಂದೆ ಹಲವಾರು ಕಾರಣಗಳಿವೆ ಅಂತ ಹೇಳುತ್ತಿವೆ.ಹಾಗಿದ್ದರೆ ಅನಾರೋಗ್ಯ ಹೊರತು ಪಡಿಸಿ ಅವರ ಈ ನಿರ್ಧಾರಕ್ಕೆ ಇರೋ ಅನ್ಯಕಾರಣಗಳೇನು ಇಲ್ಲಿದೆ ನೋಡಿ.
1) ರಾಜೀನಾಮೆ ಹಿಂದೆ ಸೋಮವಾರ ರಾಜ್ಯಸಭೆಯಲ್ಲಿ ನ್ಯಾ.ವರ್ಮಾ ವಿರುದ್ಧ ವಿಪಕ್ಷಗಳು ನೀಡಿದ್ದ ವಾಗ್ದಂಡನೆ ನೋಟಿಸ್ ಗೆ ಧನಕರ್ ಅವರು ಒಪ್ಪಿಗೆ ನೀಡಿದ್ದು ಮೊದಲ ಕಾರಣವಾಗಿದೆ.
2) ಮನೆಯಲ್ಲಿ ಭಾರೀ ಪ್ರಮಾಣದ ನಗದು ಪತ್ತೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ನ ಮಾಜಿ ನ್ಯಾಯಾದೀಶ ನ್ಯಾ.ವರ್ಮಾ ಅವರಿಗೆ ವಾಗ್ದಾಂಡನೆ ವಿಧಿಸುವ ಸಂಬಂಧ ಸೋಮವಾರ ಲೋಕಸಭೆಯಲ್ಲಿ ಸ್ಪೀಕರ್ ಗೆ ಆಡಳಿತ ಪಕ್ಷದ ಸದಸ್ಯರು ನೋಟಿಸ್ ನೀಡಿದ್ದರು. ಮತ್ತೊಂದೆಡೆ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರ ನೇತೃತ್ವದಲ್ಲಿ ಸದಸ್ಯರು ಸಭಾಧ್ಯಕ್ಷ ಧನಕರ್ ಅವರಿಗೆ ನೋಟಿಸ್ ನೀಡಿದ್ದರು. ಲೋಕಸಭೆಯಲ್ಲಿ ಸ್ಪೀಕರ್ ಗೂ ಮುನ್ನವೇ ರಾಜ್ಯಸಭೆಯಲ್ಲಿ ಧನಕರ್ ಅವರು ನೋಟಿಸ್ ಕುರಿತು ಮುಂದಿನ ಕ್ರಮಕ್ಕೆ ರಾಜ್ಯಸಭೆಯ ಕಾರ್ಯದರ್ಶಿಗೆ ಸೂಚಿಸಿದ್ದರು.
3) ಉಪರಾಷ್ಟ್ರಪತಿ ಹುದ್ದೆಗೇರಿದಾಗಿನಿಂದಲೂ ಕೂಡ ಧನಕರ್ ಅವ್ರು ನ್ಯಾಯಾಂಗದೊಂದಿಗೆ ಮುಸಿಕಿನ ಗುದ್ದಾಟ ಮಾಡುತ್ತಲೇ ಬಂದಿದ್ದರು. ರಾಜ್ಯಸಭೆಯ ಹೊರಗೂ ಒಳಗೂ ಸತತವಾಗಿ ಸರ್ಕಾರದ ವಿಷಯದಲ್ಲಿ ನ್ಯಾಯಾಂಗ ಮಧ್ಯಪ್ರವೇಶವನ್ನು ಕಟುನುಡಿಗಳಲ್ಲಿ ಟೀಕೆ ಮಾಡುತ್ತಿದ್ದರು.
4) ವರ್ಷಾಂತ್ಯದಲ್ಲಿ ಬಿಹಾರ ಚುನಾವಣೆ ನಡೆಯುತ್ತಿದೆ. ಬಿಹಾರದ ಒಬ್ಬರಿಗೆ ಉಪರಾಷ್ಟ್ರಪತಿ ಹುದ್ದೆ ನೀಡಲು ನಿರ್ಧಾರ. ಹೀಗಾಗಿ ಧನಕರ್ ಪದತ್ಯಾಗ ಮಾಡರೋ ಅನುಮಾನ ದಟ್ಟವಾಗಿದೆ.
5) ಮುಂಗಾರು ಅಧಿವೇಶನದ ಮೊದಲ ದಿನ ಸಂಜೆ ದಿಡೀರ್ ರಾಜೀನಾಮೆ ನೀಡಿದ್ದಾರೆ. ಕೆಲ ಸಚಿವರಿಂದ ಆದ ಅಮಾನಕ್ಕೆ ಬೇಸರಗೊಂಡಿದ್ದಾರೆ ಎನ್ನಲಾಗಿದೆ.
ಉಪರಾಷ್ಟ್ರಪತಿಯಾಗಿದ್ದ ಧನಕರ್ ಅವರ ರಾಜೀನಾಮೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ರಾಜೀನಾಮೆ ಬಳಿಕ ಅವರಿಗೆ ರಾಜ್ಯಸಭೆಯ ಒಳಗಾಗಲಿ ಹೊರಗಾಗಲಿ ಸರ್ಕಾರದಿಂದ ಯಾವುದೇ ಗೌರವಪೂರ್ಣವಾದ ವಿದಾಯ ದೊರೆತಿಲ್ಲ. ಸರ್ಕಾರ ಕೂಡ ಅವರ ನಿರ್ಗಮನವನ್ನು ಬಯಸಿತ್ತೇ ಅನ್ನೋ ಅನುಮಾನ ದಟ್ಟವಾಗಿದೆ




