ಬೆಂಗಳೂರು: ನೀನು ಭ್ರಷ್ಟಾಚಾರದ ಪಿತಾಮಹ, ನೀನು ಭ್ರಷ್ಟಾಚಾರಿ ಅಂತ ಇಡೀ ಲೋಕಕ್ಕೆ ಗೊತ್ತು.ಇದು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಬಿಜೆಪಿ ಸದಸ್ಯ ಅಶ್ವಥ್ ನಾರಾಯಣ್ ಮಧ್ಯೆ ಸದನದಲ್ಲಿ ನಡೆದ ಪರಸ್ಪರ ವಾಕ್ಸಮರ.
ನಿಯಮ 69ರಡಿ ರಸಗೊಬ್ಬರ ಕೊರತೆ ವಿಚಾರವಾಗಿ ಚರ್ಚೆ ವೇಳೆ ಬಿಜೆಪಿ ಸದಸ್ಯ ಸಿ.ಎನ್.ಅಶ್ವಥ್ ನಾರಾಯಣ್ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಪರಸ್ಪರ ವಾಗ್ದಾಳಿ ನಡೆಸಿದರು.ರಸಗೊಬ್ಬರ ಸಮಸ್ಯೆ ಇರುವುದಕ್ಕೆ ನಾವು ಮಾತನಾಡುತ್ತಿರುವುದು ಸಚಿವರು ಉತ್ತರ ಕೊಡಲಿ ಎಂದು ಅಶ್ವಥ್ ನಾರಾ ಯಣ್ ಏರು ದನಿಯಲ್ಲಿ ಮಾತನಾಡಿದರು.ಈ ವೇಳೆ ಗೋಲಿಬಾರ್ ಆಗಿದ್ದು ಯಾವ ಸರ್ಕಾರದಲ್ಲಿ ನಿಮ್ಮ ಸರ್ಕಾರದಲ್ಲಿ ಆಗಿದ್ದು ಎಂದು ಸಚಿವ ಚೆಲುವರಾಯಸ್ವಾಮಿ ತಿರುಗೇಟು ನೀಡಿದರು.
ಮಾತಿನ ವೇಳೆ ಸಿ
ಎನ್.ಅಶ್ವಥ್ ನಾರಾಯಣ್, ಸ್ಮಾರ್ಟ್ ಮೀಟರ್ ಅಲ್ಲಿ ಉತ್ತರ ಕೊಡಲು ಆಗದೆ ದಮ್ ಇಲ್ಲದೆ ಓಡೋಗಿರುವವರು ನೀವು ಎಂದು ಸಚಿವ ಕೆ.ಜೆ.ಜಾರ್ಜ್ ಮೇಲೆ ಹರಿಹಾಯ್ದರು.
ಅಶ್ವಥ್ ನಾರಾಯಣ್ ಇಡೀ ಡಿಪಾರ್ಟ್ಮೆಂಟ್ ಲೂಟಿ ಹೊಡೆದವರು ನೀವು ಎಂದು ಕೆ.ಜೆ.ಜಾರ್ಜ್ ಆರೋಪಿಸಿ ದರು.ಈ ವೇಳೆ ಕೊಲೆಗಡುಕ ಸರ್ಕಾರ,ಅಸಮರ್ಥರು, ಭ್ರಷ್ಟಾಚಾರ ಸರ್ಕಾರ ಎಂದು ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದರು.
ಭ್ರಷ್ಟಾಚಾರ ಪಿತಾಮಹ ನೀನು ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಅಶ್ವಥ್ ನಾರಾಯಣ ವಾಗ್ದಾಳಿ ನಡೆಸಿದರು. ಯಾರನ್ನು ಕೇಳಿದರು ಗೊತ್ತಾಗುತ್ತದೆ ಯಾರಪ್ಪ ಭ್ರಷ್ಟಾಚಾರದ ಪಿತಾಮಹ ಎಂದು ಅಶ್ವಥ್ ನಾರಾಯಣ್ ತಿರುಗೇಟು ನೀಡಿದರು.ರಾಮನಗರಕ್ಕೆ ಬಂದಿದ್ದಲ್ಲಪ್ಪ ಒಂದು ಸೀಟು ಬರಲಿಲ್ಲ ನಿನಗೆ.ಒಬ್ಬ ಮೈನಾರಿಟಿ ಸಚಿವರಿಗೆ ಅಸಮರ್ಥರು ಎಂದು ನೀನು ಹೇಳುತ್ತಿದ್ದೆಯಾ ಎಂದು ಪ್ರಶ್ನಿಸಿದರು. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ಮಧ್ಯೆ ವಾಕ್ಸಮರ ಉಂಟಾಯಿತು.
ಒಬ್ಬರಿಗೊಬ್ಬರು ವೈಯಕ್ತಿಕ ವಾಗಿ ನಿಂದಿಸಿಕೊಂಡು ಧಿಕ್ಕಾರ ಕೂಗಿ ಆಕ್ರೋಣ ವ್ಯಕ್ತಪಡಿಸಿದರು.




