ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗ ಸೆ. 22 ರಿಂದ ಆ.7ರವೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯಲಿದ್ದು, ಎಲ್ಲರೂ ಜಾಗ್ರತೆಯಿಂದ ಭಾಗವಹಿಸಿ,ಸಮೀಕ್ಷೆಗೆ ಸಹಕರಿಸಿ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 22 ಸೆಪ್ಟೆಂಬರ್ 2025 ಅಕ್ಟೋಬರ್ 7ರ ರೊಳಗೆ ಸಮೀಕ್ಷೆ ಮುಗಿಸಲು ತೀರ್ಮಾನಿಸಲಾಗಿದ್ದು, ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಡಿಸೆಂಬರ್ ಒಳಗಡೆ ವರದಿ ಕೊಡುವುದಾಗಿ ಹೇಳಿದೆ.ಈ ಸಮೀಕ್ಷೆಯನ್ನು ಸೆ.22ರಿಂದ ಅ.7ರ ವರೆಗೆ ನಡೆಸಲಿದ್ದಾರೆ. ಈ ಅವಧಿಯಲ್ಲಿ ದಸರಾ ರಜೆ ಇದೆ.ಟೀಚರ್ಸ್ ಗಳನ್ನು ಉಪಯೋಗಿಸಿ ಸಮೀಕ್ಷೆ ನಡೆಸಲಾಗುವುದು. 1,75,000 ಸರ್ಕಾರಿ ಶಾಲಾ ಶಿಕ್ಷಕರುಗಳನ್ನು ವಿಶೇಷ ಭತ್ಯೆ ನೀಡಿ ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದೇವೆ. ಮಧುಸೂದನ್ ಅವರ ಸಮಿತಿ ಮತ್ತು ಹಿಂದುಳಿದ ವರ್ಗಗಳ ಆಯೋಗ ವೈಜ್ಞಾನಿಕ ಮಾನದಂಡದಲ್ಲಿ ಸಮೀಕ್ಷೆ ನಡೆಸಿ ಡಿಸೆಂಬರ್ ಒಳಗೆ ವರದಿ ನೀಡಲಿದ್ದಾರೆ ಎಂದರು.

ಎಲ್ಲಾ ಜಾತಿ-ಧರ್ಮದವರ ದತ್ತಾಂಶ ಅಂಗೈಯಲ್ಲಿದ್ದರೆ ಮಾತ್ರ ಸಾಮಾಜಿಕ ನ್ಯಾಯ ದ ವಿಶೇಷ ಕಾರ್ಯಕ್ರಮ ಗಳನ್ನು ರೂಪಿಸಲು ಸಾಧ್ಯ. ಅಮೆರಿಕದಲ್ಲೂ ಕರಿಯರಿಗೆ affirmative action ಅಂತ ಇದೆ.ನಮ್ಮಲ್ಲಿ ಮೀಸಲಾತಿ ಇದೆ.ಹೊಸದಾಗಿ 7 ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ ಸ್ಥಿತಿ ಗತಿ ಅರಿಯಲು ಈ ಸಮೀಕ್ಷೆ ನಡೆಸಲಾಗುತ್ತಿದೆ. ಆದಷ್ಟೂ ಜಾಗ್ರತೆಯಿಂದ ಸಮೀಕ್ಷೆ ನಡೆಸಿ ವರದಿ ಕೊಡಲು ಸೂಚನೆ ನೀಡಿದ್ದೇವೆ.ಸದ್ಯ 1574 ಜಾತಿಗಳು ಇವೆ. ಒಟ್ಟು 60 ಪ್ರಶ್ನೆಗಳನ್ನು ಸಿದ್ಧಪಡಿಸ ಲಾಗಿದ್ದು, ಈ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದರು.
ಸದ್ಯ 425 ಕೋಟಿ ರೂ. ನೀಡಲಾಗುವುದು
ಗಣತಿದಾರರಗೆ ವಿಶೇಷ ಭತ್ಯೆ ನೀಡಲಾಗುತ್ತದೆ. ಗಣತಿದಾರರಿಗೆ 20,000 ರೂ. ವರೆಗೆ ಭತ್ಯೆ ನೀಡಲಾಗುತ್ತದೆ.ಬೆಸ್ಕಾಂ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರಿಗೆ ತಲಾ 2,000 ರೂ.ಗೌರವಧನ ಕೊಡಲಾಗುತ್ತದೆ. 325 ಕೋಟಿ ರೂ. ಯಷ್ಟು ಭತ್ಯೆ ವೆಚ್ಚ ಬೀಳಲಿದೆ. 423 ಕೋಟಿ ರೂ.ಸದ್ಯಕ್ಕೆ ಕೊಡುವುದಾಗಿ ಹೇಳಿದ್ದೇವೆ. ಇನ್ನೂ ಅಗತ್ಯ ಬಿದ್ದರೆ ಹೆಚ್ಚಿನ ಹಣ ಕೊಡಲಾಗುತ್ತದೆ ಎಂದರು.
ಆಧಾರ್ ಗೆ ಮೊಬೈಲ್ ಗೆ ನಂಬರ್ ಲಿಂಕ್ ಮಾಡಿ ಸಮೀಕ್ಷೆ
ಆರ್ ಆರ್ ನಂ. ಮೂಲಕ ಎಸ್ಕಾಂ ಸಿಬ್ಬಂದಿ ಮನೆ ಮನೆಗೆ ಜಿಯೋ ಟ್ಯಾಗ್ ಮಾಡುತ್ತಾರೆ. ಅವರು ಮನೆಗಳಿಗೆ ಯುಹೆಚ್ ಐಡಿ ನಂ. ಇರುವ ಸ್ಟಿಕ್ಕರ್ ಕೊಡುತ್ತಾರೆ. ಸುಮಾರು 2 ಕೋಟಿ ಮನೆಗಳಿಗೆ ಇದನ್ನು ಅಂಟಿಸಲಾಗುತ್ತದೆ. ಈವರೆಗೆ 1.55 ಕೋಟಿ ಮನೆಗಳಿಗೆ ಈ ಸ್ಟಿಕ್ಕರನ್ನು ಅಂಟಿಸಲಾಗಿದೆ. ಬಳಿಕ ಮನೆ ಮನೆಗೆ ಗಣರಿದಾರರು ಬಂದು ಸರ್ವೆ ಮಾಡುತ್ತಾರೆ.ಅವರು ಆಧಾರ್ ನಂ. ಪಡಿತರ ಚೀಟಿ ನಂ.ನ್ನು ಮೊಬೈಲ್ ಗೆ ಲಿಂಕ್ ಮಾಡುತ್ತಾರೆ. ಮೊಬೈಲ್ ಇಲ್ಲದೇ ಹೋದರೆ ಅಲ್ಲೂ ಸರ್ವೆ ಮಾಡಲಾಗುವುದು ಎಂದು ತಿಳಿಸಿದರು.
ಸರ್ವೆಯನ್ನು ವೈಜ್ಞಾನಿಕವಾಗಿ ಮಾಡಬೇಕು.ಎಲ್ಲರೂ ಇದರಲ್ಲಿ ಪಾಲ್ಗೊಳ್ಳಬೇಕು. 60 ಪ್ರಾಶ್ನಾವಳಿ ಇದೆ. ಈ ಎಲ್ಲಾ 60 ಪ್ರಶ್ನೆಗಳಿಗೆ ಉತ್ತರ ಕೊಡಬೇಕು. ಇದರಲ್ಲಿ ಯಾರೂ ತಪ್ಪಿಸಿಕೊಳ್ಳಬಾರದು. ಮನೆಯಲ್ಲಿ ಇಲ್ಲವಾದರೆ ಆಯೋಗದ ಸಹಾಯವಾಣಿ 8050770004 ಕರೆ ಮಾಡಿ ಮಾಹಿತಿ ನೀಡಬಹುದು. ರಾಜ್ಯದ ಜನತೆ ಒಬ್ಬರೂ ತಪ್ಪಿಸಿಕೊಳ್ಳದೆ ಕಡ್ಡಾಯವಾಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಿಎಂ ವಿನಂತಿಸಿದರು.
ಆಶಾ ಕಾರ್ಯಕರ್ತರಿಂದ ಮನೆಗಳಿಗೆ ಪ್ರಶ್ನಾವಳಿ ವಿತರಣೆ
ಆಶಾ ಕಾರ್ಯಕರ್ತೆಯರು ನಾಳೆಯಿಂದಲೇ ಮನೆ ಮನೆಗೆ ಹೋಗಿ 60 ಪ್ರಶ್ನೆಗಳ ನಮೂನೆಯನ್ನು ಪ್ರತೀ ಮನೆಗೆ ತಲುಪಿಸುತ್ತಾರೆ. ಆ ಮೂಲಕ ಜನರಿಗೆ ಪ್ರಶ್ನಾವಳಿ ಬಗ್ಗೆ ಮುಂಚೆನೇ ತಿಳಿದುಕೊಳ್ಳಬಹುದಾಗಿದೆ. ಬಳಿಕ ಗಣತಿದಾರರು ಹೋಗಿ ಸಮೀಕ್ಷೆ ನಡೆಸಲಿದ್ದಾರೆ. ಯಾವುದೇ ನ್ಯೂನ್ಯತೆಗಳು ಇಲ್ಲದಂತೆ, ಹಿಂದಿನ ಸಮೀಕ್ಷೆಗಳಲ್ಲಿ ಎದುರಾದ ಯಾವುದೇ ತಾಂತ್ರಿಕ ಸಮಸ್ಯೆ ಈ ಬಾರಿ ಇಲ್ಲದಂತೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
ಪ್ರತಿ ಗಣತಿದಾರನಿಗೆ 120-150 ಮನೆಗಳಲ್ಲಿ ಸಮೀಕ್ಷೆ ಮಾಡುವ ಟಾರ್ಗೆಟ್ ಕೊಡಲಾಗಿದೆ. ಟೀಚರ್ ಗಳಿಗೆ ತರಬೇತಿ ನೀಡಲು ಆಪ್ ಅಭಿವೃದ್ಧಿ ಮಾಡಲಾಗಿದೆ. ಅವರಿಗೆ ಮಾಹಿತಿ ಕಲೆ ಹಾಕುವ ಬಗ್ಗೆ ತರಬೇತಿ ನೀಡಲಾಗುತ್ತದೆ. ಗಣತಿದಾರರು ಕಡಿಮೆ ಮನೆಗಳನ್ನು ಸಮೀಕ್ಷೆ ಮಾಡಿದರೂ ಗೊತ್ತಾಗಲಿದೆ ಎಂದು ವಿವರಿಸಿದರು.




